ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ, ಹಾಕಿ ದಂತಕಥೆ ಕೇಶವ್ ದತ್ ನಿಧನ

ಹಾಕಿಯಲ್ಲಿ ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ತಂಡದ ಸದಸ್ಯರಾಗಿದ್ದ ಕೇಶವ್ ದತ್ (95) ಬುಧವಾರ ವಯೋಸಹಜ ಕಾಯಿಲೆಗಳಿಂದ ನಿಧನರಾದರು. 
ಕೇಶವ್ ದತ್
ಕೇಶವ್ ದತ್

ಕೋಲ್ಕತ್ತಾ: ಹಾಕಿಯಲ್ಲಿ ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ತಂಡದ ಸದಸ್ಯರಾಗಿದ್ದ ಕೇಶವ್ ದತ್ (95) ಬುಧವಾರ ವಯೋಸಹಜ ಕಾಯಿಲೆಗಳಿಂದ ನಿಧನರಾದರು. 

ಕೋಲ್ಕತ್ತಾದ ಸಂತೋಷ್‌ಪುರದಲ್ಲಿರುವ ಅವರ ನಿವಾಸದಲ್ಲಿ ದತ್ ಮಧ್ಯರಾತ್ರಿ 12.30 ರ ಸುಮಾರಿಗೆ ನಿಧನರಾದರು.

1948 ರ ಲಂಡನ್ ಕ್ರೀಡಾಕೂಟದಲ್ಲಿ ದತ್ ಭಾರತೀಯ ಜರ್ಸಿಯನ್ನು ಧರಿಸಿದ್ದರು, ಅಲ್ಲಿ ಭಾರತವು ಸ್ವಾತಂತ್ರ್ಯದ ನಂತರ  ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿತು, ಮತ್ತು ಇವರು ಸದಸ್ಯರಾಗಿದ್ದ ತಂಡ ತನ್ನ ಎರಡನೇ ಒಲಿಂಪಿಕ್ ಚಿನ್ನವನ್ನು ಹೆಲ್ಸಿಂಕಿಯಲ್ಲಿ 1952 ರಲ್ಲಿ ಗೆದ್ದುಕೊಂಡಿತ್ತು.

“ಈ ಮುಂಜಾನೆ ಹಾಕಿ ದಂತಕಥೆ  ಹಾಫ್‌ಬ್ಯಾಕ್ ಕೇಶವ್ ದತ್ ಅವರ ನಿಧನದ ಬಗ್ಗೆ ಕೇಳಿ  ನಾವೆಲ್ಲರೂ ತುಂಬಾ ದುಃಖಿತರಾಗಿದ್ದೇವೆ. ಅವರು 1948 ಮತ್ತು 1952 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನಗೆದ್ದ ತಂಡದ ಸದಸ್ಯರಾಗಿದ್ದರು. ಅವರ ನಿಧನದಿಂದ ಇಂದು ನಿಜವಾಗಿಯೂ ಒಂದು ಯುಗಾಂತ್ಯವಾಗಿದೆ. ”ಎಂದು ಹಾಕಿ ಇಂಡಿಯಾ ಅಧ್ಯಕ್ಷ ಜ್ಞಾನೇಂದ್ರೊ ನಿಂಗೋಂಬಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ದತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಹಾಕಿ ಪ್ರಪಂಚವು ಇಂದು ತನ್ನ ನಿಜವಾದ ದಂತಕಥೆಗಳಲ್ಲಿ ಒಂದನ್ನು ಕಳೆದುಕೊಂಡಿದೆ. ಕೇಶವ್ ದತ್ ನಿಧನರಾಅ ಸುದ್ದಿಯಿಂದ ಬೇಸರವಾಯಿತು. ಅವರು 1948 ಮತ್ತು 1952 ರಲ್ಲಿ ಎರಡು  ಒಲಿಂಪಿಕ್ ಚಿನ್ನದ ಪದಕ ವಿಜೇತರಾಗಿದ್ದರು. ಭಾರತ ಮತ್ತು ಬಂಗಾಳದ ಚಾಂಪಿಯನ್. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪವಿದೆ." ಎಂದು ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಭಾರತೀಯ ತಂಡದ ಅವಿಭಾಜ್ಯ ಅಂಗವಾದ ದತ್ 1951-1953ರವರೆಗೆ ಮತ್ತು ಮತ್ತೆ 1957-1958ರಲ್ಲಿ ಮೋಹನ್ ಬಗಾನ್ ಹಾಕಿ ತಂಡಕ್ಕೆ ನಾಯಕತ್ವ ವಹಿಸಿದ್ದರು. ಮೋಹನ್ ಬಗಾನ್ ಆಟಗಾರನಾಗಿ ಅವರು 10 ವರ್ಷಗಳ ಅವಧಿಯಲ್ಲಿ ಆರು ಬಾರಿ ಹಾಕಿ ಲೀಗ್ ಮತ್ತು ಮೂರು ಬಾರಿ ಬೀಟನ್ ಕಪ್ ಗೆದ್ದಿದ್ದರು.  ಅವರಿಗೆ 2019 ರಲ್ಲಿ ಮೋಹನ್ ಬಗಾನ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಈ ಗೌರವವನ್ನು ಪಡೆದ ಮೊದಲ ಫುಟ್ಬಾಲ್ ಹೊರತಾದ ಆಟಗಾರ  ಎಂಬ ಹೆಗ್ಗಳಿಕೆಗೆ ದತ್ ಪಾತ್ರರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com