ಟೋಕಿಯೋ ಒಲಿಂಪಿಕ್ಸ್: 3 ಜನ ಅಥ್ಲೀಟ್ ಗಳು ಸೇರಿ ಮತ್ತೆ 16 ಮಂದಿಗೆ ಕೋವಿಡ್ ಸೋಂಕು, ಸೋಂಕಿತರ ಸಂಖ್ಯೆ 148ಕ್ಕೆ ಏರಿಕೆ

ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮತ್ತೆ 3 ಜನ ಅಥ್ಲೀಟ್ ಗಳು ಸೇರಿ ಮತ್ತೆ 16 ಮಂದಿಗೆ ಕೋವಿಡ್ ಸೋಂಕು ಒಕ್ಕರಿಸಿದೆ.
ಟೋಕಿಯೊ ಒಲಿಂಪಿಕ್ಸ್-ಕೋವಿಡ್ ಸೋಂಕು
ಟೋಕಿಯೊ ಒಲಿಂಪಿಕ್ಸ್-ಕೋವಿಡ್ ಸೋಂಕು

ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮತ್ತೆ 3 ಜನ ಅಥ್ಲೀಟ್ ಗಳು ಸೇರಿ ಮತ್ತೆ 16 ಮಂದಿಗೆ ಕೋವಿಡ್ ಸೋಂಕು ಒಕ್ಕರಿಸಿದೆ.

ಈ ಕುರಿತಂತೆ ಕ್ರೀಡಾಕೂಟದ ಸಂಘಟಕರು ಮಾಹಿತಿ ನೀಡಿದ್ದು, ಇಂದು ಕೂಡ ಮೂರು ಜನ ಅಥ್ಲೀಟ್ ಗಳು ಹಾಗೂ 13 ಮಂದಿ ಸಿಬ್ಬಂದಿಗಳು ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ ಮೂವರು ಕ್ರೀಡಾಪಟುಗಳು, ನಾಲ್ಕು ಗುತ್ತಿಗೆದಾರರು, ಎಂಟು ಆಟಗಳಿಗೆ ಸಂಬಂಧಿಸಿದ ಸಿಬ್ಬಂದಿ ಮತ್ತು ಒಬ್ಬ ಆಟ ನೌಕರರು  ಸೇರಿದ್ದಾರೆ. ಆ ಮೂಲಕ ಕ್ರೀಡಾಕೂಟದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 148ಕ್ಕೆ ಏರಿಕೆಯಾಗಿದೆ. 

ಅಂತೆಯೇ ಮೂವರು ಕ್ರೀಡಾಪಟುಗಳು ಮತ್ತು ಏಳು ಕ್ರೀಡಾಕೂಟಕ್ಕೆ ಸಂಬಂಧಿಸಿದ ಸಿಬ್ಬಂದಿಯನ್ನು 14 ದಿನಗಳ ಕಡ್ಡಾಯ ಕ್ವಾರಂಟೈನ್ ಗೊಳಿಸಲಾಗಿದೆ. ಇನ್ನು 8 ಹೊಸ ಪ್ರಕರಣಗಳು ಸೇರಿದಂತೆ ಸೋಂಕಿಗೆ ತುತ್ತಾದ ಸಿಬ್ಬಂದಿಗಳ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. ಈ ಪೈಕಿ ಜೆಕ್ ಗಣರಾಜ್ಯ, ಅಮೆರಿಕ, ಚಿಲಿ, ದಕ್ಷಿಣ  ಆಫ್ರಿಕಾ ಮತ್ತು ನೆದರ್ಲೆಂಡ್ಸ್ ಸೇರಿವೆ. ಇವುಗಳಲ್ಲಿ, ನಾಲ್ಕು ಕ್ರೀಡಾಪಟುಗಳು ಕೂಡ ಸೋಂಕಿಗೆ ತುತ್ತಾಗಿದ್ದು, ಈ ಪೈಕಿ ಜೆಕ್ ಗಣರಾಜ್ಯದ ಬೀಚ್ ವಾಲಿಬಾಲ್ ಮತ್ತು ರೋಡ್ ಸೈಕ್ಲಿಂಗ್ ಅಥ್ಲೀಟ್ ಗಳು ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com