ಟೋಕಿಯೊ ಒಲಂಪಿಕ್ಸ್: ದೀಪಿಕಾ ಕುಮಾರಿಗೆ ಕ್ವಾರ್ಟರ್ ಫೈನಲ್ ನಲ್ಲಿ ಸೋಲು

ಆರ್ಚರಿ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪದಕ ಗೆಲ್ಲುವ ದೀಪಿಕಾ ಕುಮಾರಿ ಅವರ ಕನಸು ಭಗ್ನವಾಗಿದೆ. ಕ್ವಾರ್ಟರ್ ಫೈನಲ್ ನಲ್ಲಿ ಭಾರತೀಯ ತಾರೆ ಸೋಲು ಅನುಭವಿಸಿದ್ದಾರೆ.
ದೀಪಿಕಾ ಕುಮಾರಿ
ದೀಪಿಕಾ ಕುಮಾರಿ
Updated on

ಟೋಕಿಯೊ: ಆರ್ಚರಿ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪದಕ ಗೆಲ್ಲುವ ದೀಪಿಕಾ ಕುಮಾರಿ ಅವರ ಕನಸು ಭಗ್ನವಾಗಿದೆ. ಕ್ವಾರ್ಟರ್ ಫೈನಲ್ ನಲ್ಲಿ ಭಾರತೀಯ ತಾರೆ ಸೋಲು ಅನುಭವಿಸಿದ್ದಾರೆ.

ಇದೀಗ ತಾನೇ ಮುಕ್ತಾಯಗೊಂಡ ಪಂದ್ಯದಲ್ಲಿ ದೀಪಿಕಾ ದಕ್ಷಿಣ ಕೊರಿಯಾದ ಅನ್ ಸ್ಯಾನ್ ವಿರುದ್ಧ 6-0 ಅಂತರದಿಂದ ಸೋತಿದ್ದಾರೆ. ಇದರೊಂದಿಗೆ ದೀಪಿಕಾರ ಟೋಕಿಯೋ ಒಲಿಂಪಿಕ್ ಪ್ರಯಾಣ ಮುಕ್ತಾಯಗೊಂಡಿದೆ.

ದೀಪಿಕಾ ಅವರ ಪತಿ ಅತನು ದಾಸ್ ಪುರುಷರ ವೈಯಕ್ತಿಕ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದು, ಅವರಾದರೂ ಗೆದ್ದು, ಪತ್ನಿಯ ಸೋಲಿನ ಕಹಿ ಮರೆಸುತ್ತಾರಾ ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com