ಒಲಿಂಪಿಕ್ಸ್ ಅರ್ಹತಾ ಟೈಮಿಂಗ್ ದಾಖಲಿಸಿದ ಬೆಂಗಳೂರಿನ ಶ್ರೀಹರಿ ನಟರಾಜ್: ಫಿನಾದಿಂದ ಅನುಮೋದನೆಗಾಗಿ ನಿರೀಕ್ಷೆ

ರೋಮ್‌ನಲ್ಲಿ ನಡೆದ ಸೆಟ್ಟಿ ಕೊಲ್ಲಿ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಈಜುಪಟು ಶ್ರೀಹರಿ ನಟರಾಜ್ ಅವರು 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಒಲಿಂಪಿಕ್ ಅರ್ಹತಾ ಸಮಯದ ದಾಖಲೆ ಮಾಡಿದ್ದಾರೆ.
ಶ್ರೀಹರಿ ನಟರಾಜ್:
ಶ್ರೀಹರಿ ನಟರಾಜ್:
Updated on

ಬೆಂಗಳೂರು: ರೋಮ್‌ನಲ್ಲಿ ನಡೆದ ಸೆಟ್ಟಿ ಕೊಲ್ಲಿ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಈಜುಪಟು ಶ್ರೀಹರಿ ನಟರಾಜ್ ಅವರು 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಒಲಿಂಪಿಕ್ ಅರ್ಹತಾ ಸಮಯದ ದಾಖಲೆ ಮಾಡಿದ್ದಾರೆ. ನಿಗದಿತ ಸಮಯದ ಪ್ರಯೋಗದಲ್ಲಿ ಅವರು ತೆಗೆದುಕೊಂಡ 53.77 ಸೆಕೆಂಡ್ ಅವಧಿ 53.85 ಸೆಕೆಂಡ್ 'ಎ' ಕಟ್ ಸಮಯಕ್ಕಿಂತ ಉತ್ತಮವಾಗಿದೆ.

ವಿಶ್ವ ಈಜು ಸಂಸ್ಥೆಯಾದ ಫಿನಾಗೆ ಈ ಬಗ್ಗೆ ತಿಳಿಸಲಾಗಿದ್ದು ಸಂಸ್ಥೆಯು ಅದನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸುತ್ತದೆ. ಒಂದೊಮ್ಮೆ ಫಿನಾ ಶ್ರೀಹರಿಯವರ ಸಮಯದ ಮಿತಿಯ ಈಜನ್ನು ಪುರಸ್ಕರಿಸಿದ್ದರೆ ಶನಿವಾರ ಸಾಧನೆ ಮಾಡಿದ ಸಜನ್ ಪ್ರಕಾಶ್ ಬಳಿಕ ನೇರ ಒಲಿಂಪಿಕ್ಸ್ ಕೋಟಾ ಗಳಿಸಿದ ಎರಡನೇ ಭಾರತೀಯ ಈಜುಗಾರರಾಗುತ್ತಾರೆ.

"ಅನುಮೋದಿತ ಅರ್ಹತಾ ಈವೆಂಟ್‌ನಲ್ಲಿ ಸಮಯದ ವಿನಂತಿಯಿಂದ ಫಲಿತಾಂಶವನ್ನು ಫಿನಾ ನಿರ್ಧರಿಸಲಿದೆ. 400 ಮೀಟರ್ ಫ್ರೀಸ್ಟೈಲ್ ಈವೆಂಟ್‌ಗಾಗಿ ಯುಎಸ್ ಒಲಿಂಪಿಕ್ಸ್ ತಂಡದ ಪ್ರಯೋಗಗಳಂತೆ ಇತ್ತೀಚೆಗೆ ಅನೇಕ ಮಾನ್ಯತೆ ಪಡೆದ ಇವೆಂಟ್ ಗಳಲ್ಲಿ ಇದನ್ನು ವಾಡಿಕೆಯಂತೆ ಮಾಡಲಾಗಿತ್ತು” ಎಂದು ಭಾರತದ ಈಜು ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಮೋನಾಲ್ ಚೋಕ್ಷಿ ಹೇಳಿದರು.

ವಾಸ್ತವದಲ್ಲಿ ಶ್ರೀಹರಿ ಕೆಲವು ದಿನಗಳ ಹಿಂದೆ 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನ ಸಮೀಪಕ್ಕೆ ಬಂದಿದ್ದರು. ಅವರು ಎ ಕಟ್ ಗಿಂತ ಕೇವಲ .05 ಸೆಕೆಂಡುಗಳಷ್ಟು ದೂರದಲ್ಲಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com