ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಅಮಿತ್ ಪಂಗಲ್ ಗೆ ಬೆಳ್ಳಿ ಪದಕ 

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ52 ಕೆಜಿ ಸ್ಪರ್ಧೆಯ ಫೈನಲ್‌ನಲ್ಲಿ ಅಮಿತ್ ಪಂಗಲ್  ಫೈನಲ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಒಲಿಂಪಿಕ್ ಚಾಂಪಿಯನ್ ಉಜ್ಬೇಕಿಸ್ತಾನ್‌ನ ಶಖೋಬಿಡಿನ್ ಜೊಯಿರೊವ್ ವಿರುದ್ಧ 2-3 ತೀರ್ಪಿನ ನಂತರ ಸೋಲುಂಡಿದ್ದಾರೆ.
ಅಮಿತ್ ಪಂಗಲ್
ಅಮಿತ್ ಪಂಗಲ್

ದುಬೈ: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ52 ಕೆಜಿ ಸ್ಪರ್ಧೆಯ ಫೈನಲ್‌ನಲ್ಲಿ ಅಮಿತ್ ಪಂಗಲ್  ಫೈನಲ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಒಲಿಂಪಿಕ್ ಚಾಂಪಿಯನ್ ಉಜ್ಬೇಕಿಸ್ತಾನ್‌ನ ಶಖೋಬಿಡಿನ್ ಜೊಯಿರೊವ್ ವಿರುದ್ಧ 2-3 ತೀರ್ಪಿನ ನಂತರ ಸೋಲುಂಡಿದ್ದಾರೆ.

ಶಿವ ಥಾಪಾ (64 ಕೆಜಿ) ಮತ್ತು ಸಂಜೀತ್ (91 ಕೆಜಿ) ಮಂಗೋಲಿಯಾದ ಚಿನ್ಜೋರಿಗ್ ಬತಾರ್ಸುಖ್ ಮತ್ತು ಕಝಕಿಸ್ತಾನದ ವ್ಯಾಸಿಲಿ ಲೆವಿತ್ ಅವರನ್ನು ಎದುರಿಸಿ ಚಿನ್ನದ ಪದಕಕ್ಕಾಗಿ ಹೋರಾಡುತ್ತಿದ್ದಾರೆ.

ಜೊಯಿರೊವ್ =ಹಾಲಿ ವಿಶ್ವ ಮತ್ತು ಒಲಿಂಪಿಕ್ ಚಾಂಪಿಯನ್ ಆಗಿದ್ದು ಅಮಿತ್ ಪಂಗಲ್ 2019 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮತ್ತು ಇತ್ತೀಚೆಗೆ ರಷ್ಯಾದಲ್ಲಿ ನಡೆದ ಗವರ್ನರ್ ಕಪ್‌ನಲ್ಲಿ ಸೋತಿದ್ದರು.

ಪಂದ್ಯಾವಳಿಯ ಇತಿಹಾಸದಲ್ಲಿ ಐದು ಪದಕಗಳನ್ನು ಮತ್ತು ವಿಶ್ವದ ಪ್ರಥಮ ಸ್ಥಾನ ಗಳಿಸಿದ ಮೊದಲ ಭಾರತೀಯ ಪುರುಷ ಬಾಕ್ಸರ್ ಥಾಪಾ, ಫೈನಲ್‌ನಲ್ಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಉಜ್ಬೇಕಿಸ್ತಾನ್‌ನ ಚಿನ್ಜೋರಿಗ್ ವಿರುದ್ಧ ಸೆಣಸಲಿದ್ದಾರೆ.

ವಿಕಾಸ್ ಕ್ರಿಶನ್ (69 ಕೆಜಿ) ಮತ್ತು ವರಿಂದರ್ ಸಿಂಗ್ (60 ಕೆಜಿ) ಈಗಾಗಲೇ ತಮ್ಮ ಸೆಮಿಫೈನಲ್ ನಲ್ಲಿ ಸೋಲುಂಡು  ಪುರುಷರ ವಿಭಾಗದಲ್ಲಿ ಕಂಚಿನ ಪದಕಗಳನ್ನು ಗಳಿಸಿದ್ದಾರೆ.

ಭಾನುವಾರ, ಭಾರತೀಯ ಮಹಿಳಾ ಬಾಕ್ಸಿಂಗ್ ತಂಡವು ದುಬೈನಲ್ಲಿ ಒಂದು ಚಿನ್ನ, ಮೂರು ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಗಳಿಸಿತು. ಮೇರಿ ಕೋಮ್, ಲಾಲ್ಬುಟ್ಸೈಹಿ ಮತ್ತು ಅನುಪಮಾ ಬೆಳ್ಳಿ ಪದಕಗಳನ್ನು ಪಡೆದರೆ ಪೂಜಾ ರಾಣಿ ಚಿನ್ನ ಗೆದ್ದಿದ್ದರು,

ಒಟ್ತಾರೆಯಾಗಿ ಇದು ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ, 2019 ರ ಆವೃತ್ತಿಯಲ್ಲಿ ಭಾರತದ ಹಿಂದಿನ ಅತ್ಯುತ್ತಮ ಸಾಧನೆ (13 ಪದಕಗಳು (2 ಚಿನ್ನ, 4 ಬೆಳ್ಳಿ ಮತ್ತು 7 ಕಂಚು). ಮಾಡಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com