ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಕುಸ್ತಿಪಟುಗಳಾದ ಸೋನಮ್, ಅನ್ಶು

ಭಾರತದ ಕುಸ್ತಿಪಟುಗಳಾದ ಅನ್ಶು ಮಲಿಕ್(57 ಕೆಜಿ) ಮತ್ತು ಸೋನಮ್ ಮಲಿಕ್(62 ಕೆಜಿ) ತಮ್ಮ ತೂಕ ವಿಭಾಗದ ಏಷಿಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ ನಲ್ಲಿ ಫೈನಲ್‌ಗೆ ತಲುಪಿದ್ದು, ಟೋಕಿಯೊ ಒಲಿಂಪಿಕ್ಸ್‌ ಗೆ ಸ್ಥಾನ ಪಡೆದುಕೊಂಡಿದ್ದಾರೆ.
ಸೋನಮ್ ಮಲಿಕ್-ಅನ್ಶು ಮಲಿಕ್
ಸೋನಮ್ ಮಲಿಕ್-ಅನ್ಶು ಮಲಿಕ್

ನವದೆಹಲಿ: ಭಾರತದ ಕುಸ್ತಿಪಟುಗಳಾದ ಅನ್ಶು ಮಲಿಕ್(57 ಕೆಜಿ) ಮತ್ತು ಸೋನಮ್ ಮಲಿಕ್(62 ಕೆಜಿ) ತಮ್ಮ ತೂಕ ವಿಭಾಗದ ಏಷಿಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ ನಲ್ಲಿ ಫೈನಲ್‌ಗೆ ತಲುಪಿದ್ದು, ಟೋಕಿಯೊ ಒಲಿಂಪಿಕ್ಸ್‌ ಗೆ ಸ್ಥಾನ ಪಡೆದುಕೊಂಡಿದ್ದಾರೆ.
 
ಈ ಮೂಲಕ ಒಲಿಂಪಿಕ್ಸ್‌ ಗೆ ಅರ್ಹತೆ ಪಡೆದ ಕುಸ್ತಿ ಪಟುಗಳ ಸಂಖ್ಯೆ ಆರಕ್ಕೆ ಏರಿದೆ. ಇದಕ್ಕೂ ಮೊದಲು ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಭಜರಂಗ್ ಪುನಿಯಾ (65 ಕೆ.ಜಿ), ರವಿ ದಹಿಯಾ (57 ಕೆ.ಜಿ) ಮತ್ತು ದೀಪಕ್ ಪುನಿಯಾ (86 ಕೆ.ಜಿ) ಮತ್ತು ಮಹಿಳಾ ವಿಭಾಗದಲ್ಲಿ ವಿನೇಶ್ ಫೋಗಾಟ್ (53 ಕೆ.ಜಿ) ಒಲಿಂಪಿಕ್ಸ್‌ ಗೆ ಅರ್ಹತೆ ಪಡೆದುಕೊಂಡಿದ್ದರು.

ಅನ್ಶು 57 ಕೆಜಿ ವಿಭಾಗದಲ್ಲಿ ಕೊರಿಯಾದ ಕುಸ್ತಿಪಟುವನ್ನು 10–0 ರಿಂದ, ಎರಡನೇ ಸುತ್ತಿನಲ್ಲಿ ಕಜಕಿಸ್ತಾನ್‌ನ ಕುಸ್ತಿಪಟುವನ್ನು 10–0 ರಿಂದ, ಮತ್ತು ಸೆಮಿಫೈನಲ್‌ನಲ್ಲಿ ಉಜ್ಬೇಕಿಸ್ತಾನ್‌ನ ಕುಸ್ತಿಪಟುವನ್ನು 12–2ರಿಂದ ಸೋಲಿಸಿದರು. ಫೈನಲ್‌ನಲ್ಲಿ ಅನ್ಶು ಮಂಗೋಲಿಯನ್ ಕುಸ್ತಿಪಟು ಎದುರಿಸಲಿದ್ದಾರೆ.

62 ಕೆಜಿ ವಿಭಾಗದ ಮೊದಲ ಸುತ್ತಿನಲ್ಲಿ ಸೋನಮ್ 5-2ರಿಂದ ಚೀನಾದ ಕುಸ್ತಿಪಟುವನ್ನು, ಎರಡನೇ ಸುತ್ತಿನಲ್ಲಿ ತೈಪೆ ಕುಸ್ತಿಪಟುವನ್ನು 11-0 ರಿಂದ, ಸೆಮಿಫೈನಲ್‌ನಲ್ಲಿ ಕಜಕಿಸ್ತಾನ್ ಕುಸ್ತಿಪಟುವನ್ನು 9-6 ರಿಂದ ಮಣಿಸಿ, ಫೈನಲ್ ಗೆ ಪ್ರವೇಶ ಪಡೆದಿದ್ದಾರೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಇವರು ಚಿನಾ ಕುಸ್ತಿ ಪಟುವನ್ನು ಎದುರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com