ಟೋಕಿಯೊ ಪ್ಯಾರಾಲಿಂಪಿಕ್ಸ್‌: ಶೂಟರ್ ನರೇಶ್ ಶರ್ಮಾರನ್ನು ಈ ಕೂಡಲೆ ಪಟ್ಟಿಗೆ ಸೇರಿಸಲು 'ಸುಪ್ರೀಂ' ಆದೇಶ!

ಐದು ಬಾರಿ ಪ್ಯಾರಾಲಿಂಪಿಯನ್ ಶೂಟರ್ ನರೇಶ್ ಕುಮಾರ್ ಶರ್ಮಾರನ್ನು ಮುಂಬರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಹೆಚ್ಚುವರಿ ಆಟಗಾರನನ್ನಾಗಿ ಸೇರಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.
ನರೇಶ್ ಕುಮಾರ್ ಶರ್ಮಾ
ನರೇಶ್ ಕುಮಾರ್ ಶರ್ಮಾ

ನವದೆಹಲಿ: ಐದು ಬಾರಿ ಪ್ಯಾರಾಲಿಂಪಿಯನ್ ಶೂಟರ್ ನರೇಶ್ ಕುಮಾರ್ ಶರ್ಮಾರನ್ನು ಮುಂಬರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಹೆಚ್ಚುವರಿ ಆಟಗಾರನನ್ನಾಗಿ ಸೇರಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಆಗಸ್ಟ್ 24ರಿಂದ ಆರಂಭವಾಗಲಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಗೆ ತನ್ನನ್ನು ಆಯ್ಕೆ ಮಾಡದೆ ಇದ್ದಿದ್ದರಿಂದ ಶೂಟರ್ ನರೇಶ್ ಕುಮಾರ್ ನೊಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಭಾರತೀಯ ಪ್ಯಾರಾಲಿಂಪಿಕ್ ಸಮಿತಿ(ಪಿಸಿಐ) ಯಲ್ಲಿ ನಿರಂಕುಶತೆಯನ್ನು ಉಲ್ಲೇಖಿಸಿ ಪ್ಯಾರಾಲಿಂಪಿಕ್ಸ್‌ಗೆ ತನ್ನ ಹೆಸರನ್ನು ಸೇರಿಸುವಂತೆ ಕೋರಿ ಅರ್ಜುನ ಪ್ರಶಸ್ತಿ ವಿಜೇತ ನರೇಶ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾಯಾಲಯ ವಿಚಾರಣೆ ನಡೆಸಿತ್ತು.

ಸುಪ್ರೀಂ ಕೋರ್ಟ್ ನ ಈ ಆದೇಶಕ್ಕೆ ನಮ್ಮ ಅಭ್ಯಂತರವಿಲ್ಲ. ಕ್ರೀಡಾಪಟುಗಳು ಹಾಗೂ ತಂಡದ ಆಯ್ಕೆ ಸಮಿತಿ ಮಾಡುತ್ತದೆ. ಇನ್ನು ಕ್ರೀಡಾಕೂಟದಲ್ಲಿ ಹೆಚ್ಚು ಪದಕಗಳು ಬಂದರೆ ಸಂತೋಷ ಎಂದು ಕೇಂದ್ರ ಸರ್ಕಾರ ಹೇಳಿದೆ.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಶೂಟಿಂಗ್ ಗಾಗಿ ಆಯ್ಕೆಯಾಗಲು ಇಂದು ಕೊನೆಯ ದಿನಾಂಕವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com