ಪ್ಯಾರಾಲಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಭಾರತದ ಭಾವೀನ ಪಟೇಲ್‌ಗೆ 3 ಕೋಟಿ ರೂ. ನಗದು ಬಹುಮಾನ ಘೋಷಣೆ!

ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದ ಟೇಬಲ್ ಟೆನಿಸ್ ಆಟಗಾರ್ತಿ ಭಾವೀನಾ ಪಟೇಲ್ ಅವರನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅಭಿನಂದಿಸಿದ್ದಾರೆ. 
ಭಾವೀನಾ ಪಟೇಲ್
ಭಾವೀನಾ ಪಟೇಲ್

ಅಹಮದಾಬಾದ್: ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದ ಟೇಬಲ್ ಟೆನಿಸ್ ಆಟಗಾರ್ತಿ ಭಾವೀನಾ ಪಟೇಲ್ ಅವರನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅಭಿನಂದಿಸಿದ್ದಾರೆ. 

ಅಲ್ಲದೆ ರಾಜ್ಯ ಸರ್ಕಾರದಡಿ ದಿವ್ಯಾಂಗ್ ಖೇಲ್ ಪ್ರತಿಭಾ ಪ್ರೊತ್ಸಾಹನ್‌ ಪುರಸ್ಕಾರ್‌ ಯೋಜನೆಯಡಿ ಭಾವೀನಾ ಪಟೇಲ್ ಗೆ 3 ಕೋಟಿ ರೂ. ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಗುಜರಾತ್ ನ ವಡ್‌ ನಗರ್‌ ಭಾವಿನಾ ಸ್ವಂತ ಊರು. ಆಕೆ 12 ತಿಂಗಳು ಮಗುವಾಗಿದ್ದಾಗ ಪೋಲಿಯೊ ಪೀಡಿತರಾಗಿದ್ದರು. ಆದರೂ ಇದರಿಂದ ಸ್ಥೈರ್ಯ ಕಳೆದುಕೊಳ್ಳದ ಪದವಿ ವ್ಯಾಸಂಗ ಸಮಯದಲ್ಲಿ ಭಾವೀನಾ ಟೇಬಲ್ ಟೆನಿಸ್ ಆಡಲು ಪ್ರಾರಂಭಿಸಿದಳು.

ಇಲ್ಲಿಯವರೆಗೂ ಹಲವು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡಿರುವ ಭಾವೀನಾ  ಐದು ಚಿನ್ನದ ಪದಕ ಹಾಗೂ 13 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಅವರು ಆಡಿದ ಮೊದಲ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ  ಮುಡಿಗೇರಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com