ಗಾಯದ ಕಾರಣ ವಿಂಬಲ್ಡನ್ ಟೂರ್ನಿಯಿಂದ ಹೊರಕ್ಕೆ; ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಸೆರನಾ! ವಿಡಿಯೋ

ಗಾಯದ ಸಮಸ್ಯೆಯಿಂದಾಗಿ 23 ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ್ ವಿಂಬಲ್ಡನ್ ಟೂರ್ನಿಯಿಂದ ಹೊರಬಿದಿದ್ದಾರೆ. ನಂತರ ಮೈದಾನದಲ್ಲಿಯೇ ಸೆರೆನಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಸೆರೆನಾ ವಿಲಿಯಮ್ಸ್
ಸೆರೆನಾ ವಿಲಿಯಮ್ಸ್

ಲಂಡನ್: ಗಾಯದ ಸಮಸ್ಯೆಯಿಂದಾಗಿ 23 ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ್ ವಿಂಬಲ್ಡನ್ ಟೂರ್ನಿಯಿಂದ ಹೊರಬಿದಿದ್ದಾರೆ. ನಂತರ ಮೈದಾನದಲ್ಲಿಯೇ ಸೆರೆನಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಆರನೇ ಶ್ರೇಯಾಂಕಿತ ಸೆರೆನಾ ಬೆಲಾರಸ್ ನ ಅಲಿಕ್ಸಂದ್ರ ಸಾಸ್ನೋವಿಚ್ ವಿರುದ್ಧ ಮೊದಲ ಸುತ್ತಿನ ಪಂದ್ಯದಲ್ಲಿ ಸೆರೆನಾ ಹಿಂದೆ ಸರಿದರು. ಮೊದಲ ಸೆಟ್ ನಲ್ಲಿ 3-1ರಲ್ಲಿ ಮುನ್ನಡೆ ಸಾಧಿಸಿದಾಗ ಸೆರೆನಾಗೆ ಗಾಯವಾದ್ದರಿಂದ ವೈದ್ಯರ ದಂಡು ಅಂಗಳಕ್ಕೆ ಧಾವಿಸಿತು. 

ಬಳಿಕ ವೈದ್ಯರ ತಂಡ ಚಿಕಿತ್ಸೆ ನೀಡಿತು. ಏಳನೇ ಗೇಮ್ ನಲ್ಲಿ ತನ್ನ ಸರ್ವ್ ನಲ್ಲಿ 15-15ರಲ್ಲಿ ಬೇಸ್ ಲೈನ್ ನಲ್ಲಿ ತನ್ನ ಸರ್ವ್ ಕಳೆದುಕೊಂಡ ನಂತರ ಸೆರೆನಾ ನಿವೃತ್ತಿ ಹೊಂದಲು ನಿರ್ಧರಿಸಿದರು. ಸೆರೆನಾ ಹೊರಗೆ ಹೋಗುತ್ತಿರುವಾಗ ಪ್ರೇಕ್ಷಕರು ಅವರ ಸ್ಥಳದಲ್ಲಿ ನಿಂತು ಭಾವನಾತ್ಮಕ ವಿದಾಯ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com