ಇನ್ ಸ್ಟಾಗ್ರಾಮ್ ಪೋಸ್ಟ್ ಗೆ ಅತೀ ಹೆಚ್ಚು ಲೈಕ್; ರೊನಾಲ್ಡೋ ಹಿಂದಿಕ್ಕಿದ ಮೆಸ್ಸಿ
ವಾಷಿಂಗ್ಟನ್: ಅರ್ಜೆಂಟೀನಾದ ಸ್ಟ್ರೈಕರ್ ಲಿಯೋನೆಲ್ ಮೆಸ್ಸಿ ಪೋರ್ಚುಗಲ್ ಫಾರ್ವರ್ಡ್ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಹಿಂದಿಕ್ಕಿ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಲೈಕ್ ಪಡೆದಿದ್ದಾರೆ.
ಹೌದು.. ಈ ಹಿಂದೆ ನಡೆದ ಕೋಪಾ ಅಮೆರಿಕನ್ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡವನ್ನು ಚಾಂಪಿಯನ್ ಮಾಡಿದ್ದ ಲಿಯೋನಲ್ ಮೆಸ್ಸಿ ಟ್ರೋಫಿಗೆ ಮುತ್ತಿಡುತ್ತಿರುವ ಫೋಟೋ ಒಂದನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದರು. ಈ ಫೋಟೋ ಅವರ ಅಭಿಮಾನಿಗಳಿಗೆ ವ್ಯಾಪಕ ಇಷ್ಟವಾಗಿತ್ತು. ಅಲ್ಲದೆ ಈ ಪೋಸ್ಟ್ ಗೆ ದಾಖಲೆಯ 20 ಮಿಲಿಯನ್ ಗೂ ಅಧಿಕ ಲೈಕ್‌ಗಳು ಬಂದಿವೆ. ಆ ಮೂಲಕ ಮೆಸ್ಸಿ.. ಪೋರ್ಚುಗಲ್ ನ ರೊನಾಲ್ಡೋ ಅವರನ್ನು ಹಿಂದಿಕ್ಕಿ ಇನ್ ಸ್ಟಾಗ್ರಾಮ್ ಪೋಸ್ಟ್ ಗೆ ಅತೀ ಹೆಚ್ಚು ಲೈಕ್ ಪಡೆದ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಈ ತಿಂಗಳ ಆರಂಭದಲ್ಲಿ ನಡೆದ ಫೈನಲ್‌ನಲ್ಲಿ ಅರ್ಜೆಂಟೀನಾ ಬ್ರೆಜಿಲ್‌ನ್ನು ಹಿಂದಿಕ್ಕಿದ ನಂತರ ಮೆಸ್ಸಿ ಕೋಪಾ ಅಮೇರಿಕಾ ಪ್ರಶಸ್ತಿಯೊಂದಿಗೆ ತನ್ನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಕೋಪಾ ಅಮೇರಿಕಾ ಶೀರ್ಷಿಕೆಯೊಂದಿಗೆ ಚಿತ್ರವನ್ನು ಮೆಸ್ಸಿ ಪೋಸ್ಟ್ ಮಾಡಿದ್ದರು. "ಎಂತಹ ಸುಂದರ ಹುಚ್ಚು! ಇದು ನಂಬಲಾಗದದು! ಧನ್ಯವಾದಗಳು, ದೇವರೇ! ನಾವು ಚಾಂಪಿಯನ್!" ಎಂದು ಪೋಸ್ಟ್ ಮಾಡಿದ್ದರು.
ಈ ಹಿಂದೆ ರೊನಾಲ್ಡೊ ಅವರು ಡಿಯಾಗೋ ಮರಡೋನಾ ಮರಣಾನಂತರ ಅವರಿಗೆ ಗೌರವ ಸಲ್ಲಿಸಿದ್ದ ಫೋಟೋಗೆ ಅತೀ ಹೆಚ್ಚು ಅಂದರೆ 19.8 ಮಿಲಿಯನ್ ಲೈಕ್‌ಗಳು ಬಂದಿದ್ದವು. ಇದು ಈ ವರೆಗಿನ ದಾಖಲೆಯಾಗಿತ್ತು. ಆದರೆ ಮೆಸ್ಸಿ ಫೋಟೋ 20 ಮಿಲಿಯನ್ ಗೂ ಅಧಿಕ ಲೈಕ್ ಗಳನ್ನು ಸಂಪಾದಿಸುವ ಮೂಲಕ ಈ ದಾಖಲೆಯನ್ನು ಹಿಂದಿಕ್ಕಿದೆ ಎಂದು ಇಎಸ್‌ಪಿಎನ್ ವರದಿ ಮಾಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ