ಟೋಕಿಯೊ ಒಲಂಪಿಕ್ಸ್: ಬ್ಯಾಡ್ಮಿಂಟನ್ ಆರಂಭಿಕ ಗುಂಪು ಹಂತದ ಪಂದ್ಯ ಗೆದ್ದ ಚಿರಾಗ್, ಸಾತ್ವಿಕ್ ಜೋಡಿ ಶುಭಾರಂಭ!
ಟೋಕಿಯೊ ಒಲಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಆರಂಭಿಕ ಗುಂಪು ಹಂತದ ಪಂದ್ಯವನ್ನು ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸೈರಾಜ್ ರಾಂಕಿರೆಡ್ಡಿ ಗೆದ್ದು ಶುಭಾರಂಭ ಮಾಡಿದ್ದಾರೆ.
Published: 24th July 2021 04:22 PM | Last Updated: 24th July 2021 05:41 PM | A+A A-

ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ
ಟೋಕಿಯೊ: ಟೋಕಿಯೊ ಒಲಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಆರಂಭಿಕ ಗುಂಪು ಹಂತದ ಪಂದ್ಯವನ್ನು ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸೈರಾಜ್ ರಾಂಕಿರೆಡ್ಡಿ ಗೆದ್ದು ಶುಭಾರಂಭ ಮಾಡಿದ್ದಾರೆ.
ಮುಸಾಶಿನೋ ಫಾರೆಸ್ಟ್ ಪ್ಲಾಜಾ ಕೋರ್ಟ್ 3 ರಲ್ಲಿ ನಡೆದ ಗುಂಪು ಎ ಪಂದ್ಯದಲ್ಲಿ ಭಾರತೀಯ ಜೋಡಿ 21-16, 16-21, 27-25 ಸೆಟ್ ಗಳ ಮೂಲಕ ಚೀನಾದ ಲೀ ಯಾಂಗ್ ಮತ್ತು ವಾಂಗ್ ಚಿ-ಲಿನ್ ಅವರನ್ನು ಸೋಲಿಸಿತು.
ಚಿರಾಗ್ ಮತ್ತು ಸಾಟ್ವಿಕ್ ಮೊದಲ ಪಂದ್ಯವನ್ನು 21-16ರಿಂದ ಗೆದ್ದರೆ, ಎರಡನೇ ಪಂದ್ಯದಲ್ಲಿ 16-21 ಸೆಟ್ ಗಳಿಂದ ಚೀನಾಗೆ ಶರಣಾಯಿತು. ಇನ್ನು ಅಂತಿಮವಾಗಿ ಭಾರತೀಯ ಜೋಡಿ ಮೂರನೇ ಸೆಟ್ ನಲ್ಲಿ ಆರ್ಭಟಿಸಿದ್ದು 27-25 ಸೆಟ್ ಗಳಿಂದ ಗೆಲುವು ಸಾಧಿಸುವ ಮೂಲಕ ಟೂರ್ನಿಗೆ ಶುಭಾರಂಭ ಮಾಡಿದರು.