ಮಾಜಿ ಅಥ್ಲೀಟ್ ಮಿಲ್ಖಾ ಸಿಂಗ್ ಪತ್ನಿ, ಭಾರತ ಮಹಿಳಾ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಕೊರೋನಾದಿಂದ ಸಾವು

ಫ್ಲೈಯಿಂಗ್ ಸಿಖ್ ಖ್ಯಾತಿಯಾ ಅಥ್ವೀಟ್ ಮಿಲ್ಖಾ ಸಿಂಗ್ ಅವರ ಪತ್ನಿ ಭಾರತೀಯ ಮಹಿಳಾ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಅವರು ಕೋವಿಡ್-19 ಸೋಂಕಿನಿಂದಾಗಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ನಿರ್ಮಲ್ ಕೌರ್ ಮತ್ತು ಮಿಲ್ಖಾ ಸಿಂಗ್
ನಿರ್ಮಲ್ ಕೌರ್ ಮತ್ತು ಮಿಲ್ಖಾ ಸಿಂಗ್

ಮೊಹಾಲಿ: ಫ್ಲೈಯಿಂಗ್ ಸಿಖ್ ಖ್ಯಾತಿಯಾ ಅಥ್ವೀಟ್ ಮಿಲ್ಖಾ ಸಿಂಗ್ ಅವರ ಪತ್ನಿ ಭಾರತೀಯ ಮಹಿಳಾ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಅವರು ಕೋವಿಡ್-19 ಸೋಂಕಿನಿಂದಾಗಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಕೋವಿಡ್ ಸೋಂಕಿಗೆ ತುತ್ತಾಗಿದ್ದ ಅವರನ್ನು ಇತ್ತೀಚೆಗೆ ಮೊಹಾಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ಸಂಜೆ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವ್ನಪ್ಪಿದ್ದಾರೆ. ನಿರ್ಮಲ್ ಕೌರ್ ಅವರು, ಪತಿ ಮಿಲ್ಖಾ ಸಿಂಗ್, ಒಬ್ಬ ಮಗ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. 

ನಿನ್ನೆ ಸಂಜೆಯೇ ನಿರ್ಮಲ್ ಅವರ ಅಂತ್ಯಕ್ರಿಯೆ ನಡೆದಿದ್ದು, ಅಂತ್ಯಕ್ರಿಯೆಯನ್ನು ಅವರ ಕುಟುಂಬಸ್ಥರು ನೆರವೇರಿಸಿದ್ದಾರೆ. ಆದರೆ ಪತಿ ಮಿಲ್ಖಾ ಸಿಂಗ್ ಅವರು ಕೋವಿಡ್ ನಿಂದಾಗಿ ಐಸಿಯು ಯಲ್ಲಿರುವುದರಿಂದ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

ನಿರ್ಮಲ್ ಕೌರ್ ನಿಧನ ವಿಚಾರವನ್ನು ಮಿಲ್ಖಾ ಕುಟುಂಬದ ವಕ್ತಾರರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ''ನಿನ್ನೆ ಸಂಜೆ 4 ಗಂಟೆಗೆ ಕೊರೊನಾ ವಿರುದ್ಧದ ಹೋರಾಟದ ನಂತರ ಶ್ರೀಮತಿ ನಿರ್ಮಲ್ ಮಿಲ್ಖಾ ಸಿಂಗ್ ನಿಧನರಾದರು ಎಂದು ನಿಮಗೆ ತಿಳಿಸಲು ನಾವು ತುಂಬಾ ದುಃಖಿತರಾಗಿದ್ದೇವೆ. ಅವರು ಮಿಲ್ಖಾ  ಕುಟುಂಬದ ಬೆನ್ನೆಲುಬು, ಅವರಿಗೆ 85 ವರ್ಷ. ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ಅವರು ಐಸಿಯುನಲ್ಲಿ (ಚಂಡೀಗಡದ ಪಿಜಿಐಎಂಆರ್) ಸ್ವತಃ ಇರುವುದರಿಂದ ಇಂದು ಸಂಜೆ ನಡೆಸಿದ ಶವ ಸಂಸ್ಕಾರಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂಬುದು ದುರಂತ."ಎಂದು ಹೇಳಿದರು.

ಕೋವಿಡ್-19 ನ್ಯುಮೋನಿಯಾದಿಂದ ಮಿಲ್ಖಾ ಅವರನ್ನು ಅದೇ ಸೌಲಭ್ಯಕ್ಕೆ ದಾಖಲಿಸಿದ ಎರಡು ದಿನಗಳ ನಂತರ ಮೇ 26 ರಂದು ನಿರ್ಮಲ್ ಅವರನ್ನು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ಕರೆತರಲಾಯಿತು.ಒಂದು ವಾರದ ನಂತರ ಕುಟುಂಬದ ಕೋರಿಕೆಯ ಮೇರೆಗೆ ಮಿಲ್ಖಾ ಅವರನ್ನು ಬಿಡುಗಡೆ  ಮಾಡಲಾಯಿತು, ಆದರೆ ಭೀಕರ ಸೋಂಕಿನೊಂದಿಗೆ ಹೋರಾಡಿ ನಿರ್ಮಲ್ ಆಸ್ಪತ್ರೆಯಲ್ಲಿಯೇ ಇದ್ದರು. ನಂತರ ಮಿಲ್ಖಾ ಅವರನ್ನು ಇಲ್ಲಿ ಪಿಜಿಐಎಂಆರ್‌ನ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸೇರಿಸಲಾಯಿತು ಮತ್ತು ಅವರು ಪ್ರಸ್ತುತ ಮಿಲ್ಖಾ ಸಿಂಗ್ ಆರೋಗ್ಯ ಸ್ಥಿರವಾಗಿದ್ದು ಮತ್ತು ಸುಧಾರಿಸುತ್ತಿದ್ದಾರೆ" ಎಂದು ಆಸ್ಪತ್ರೆ  ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com