ಟೋಕಿಯೋ ಒಲಿಂಪಿಕ್ ವೀಕ್ಷಿಸಲು ಮೈದಾನದಲ್ಲಿ 10 ಸಾವಿರ ಜನರಿಗೆ ಅವಕಾಶ: ಸಂಘಟಕರು

ಜಪಾನ್‌ನ ಟೋಕಿಯೊದಲ್ಲಿ ಜುಲೈ 23ರಿಂದ ಪ್ರಾರಂಭವಾಗುವ 2020 ರ ಒಲಿಂಪಿಕ್ ಕ್ರೀಡಾಕೂಟದ ಪ್ರತಿ ಮೈದಾನದಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು 10,000ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಕ್ರೀಡಾಕೂಟದ ಸಂಘಟಕರು ಸೋಮವಾರ ಪ್ರಕಟಿಸಿದ್ದಾರೆ.
ಟೊಕಿಯೋ ಒಲಿಂಪಿಕ್ಸ್
ಟೊಕಿಯೋ ಒಲಿಂಪಿಕ್ಸ್

ಟೋಕಿಯೋ: ಜಪಾನ್‌ನ ಟೋಕಿಯೊದಲ್ಲಿ ಜುಲೈ 23ರಿಂದ ಪ್ರಾರಂಭವಾಗುವ 2020 ರ ಒಲಿಂಪಿಕ್ ಕ್ರೀಡಾಕೂಟದ ಪ್ರತಿ ಮೈದಾನದಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು 10,000ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಕ್ರೀಡಾಕೂಟದ ಸಂಘಟಕರು ಸೋಮವಾರ ಪ್ರಕಟಿಸಿದ್ದಾರೆ.

ಐಒಸಿ (ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ), ಐಪಿಸಿ(ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ), ಟೋಕಿಯೊ ಒಲಿಂಪಿಕ್ 2020 ಸಂಘಟನಾ ಸಮಿತಿ, ಟೋಕಿಯೊ ಮಹಾನಗರ ಸರ್ಕಾರ ಮತ್ತು ಜಪಾನ್ ಸರ್ಕಾರದ ನಡುವಿನ ಸಭೆಯ ನಂತರ ಈ ಘೋಷಣೆ ಮಾಡಲಾಗಿದೆ.

ಸಂಘಟಕರು ಹೇಳಿಕೆಯಲ್ಲಿ, 'ಒಲಿಂಪಿಕ್ ಕ್ರೀಡಾಕೂಟಕ್ಕೆ ಪ್ರೇಕ್ಷಕರ ಸಂಖ್ಯೆಯನ್ನು ಮೈದಾನದ ಸಾಮರ್ಥ್ಯದ ಶೇಕಡಾ 50ಕ್ಕೆ ನಿಗದಿಪಡಿಸಲಾಗುತ್ತದೆ. ಆದರೆ ಗರಿಷ್ಠ 10 ಸಾವಿರ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುವುದು" ಎಂದಿದ್ದಾರೆ. ಹಲವಾರು ತಿಂಗಳುಗಳ ಹಿಂದೆಯೇ ವಿದೇಶದಿಂದ ಬರುವ ಪ್ರೇಕ್ಷಕರಿಗೆ ಅವಕಾಶ ಇಲ್ಲ ಎಂದು ಜಪಾನ್‌ಗೆ ಹೇಳಿತ್ತು ಗಮನಾರ್ಹ.

ಮೈದಾನದಲ್ಲಿ ಎಲ್ಲಾ ಸಮಯದಲ್ಲೂ ಮುಖವಾಡಗಳನ್ನು ಧರಿಸಬೇಕು ಎಂದು ಸಂಘಟಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೋರಾಗಿ ಮಾತನಾಡುವುದು ಅಥವಾ ಕೂಗುವುದನ್ನು ನಿಷೇಧಿಸಲಾಗುವುದು. ಸರಿಯಾದ ಪ್ರಕಟಣೆಗಳ ಮೂಲಕ ಜನದಟ್ಟಣೆ ತಪ್ಪಿಸಬೇಕು ಮತ್ತು ಸಂದರ್ಶಕರು ಸ್ಥಳಗಳನ್ನು ಸರಿಯಾಗಿ ಬಿಡಬೇಕು. ಸಂಘಟಕರ ಪ್ರಕಾರ, ಪ್ರವಾಸಿಗರು ನೇರವಾಗಿ ಸ್ಥಳಗಳನ್ನು ತಲುಪಲು ಮತ್ತು ನೇರವಾಗಿ ಮನೆಗೆ ಮರಳಲು ಮತ್ತು ಪ್ರಾಂತ್ಯಗಳ ನಡುವೆ ಪ್ರಯಾಣಿಸುವಾಗ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಕೋರಲಾಗುವುದು ಎಂದು ತಿಳಿಸಿದೆ.

ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ರಾಜಧಾನಿಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರೆ ಪ್ರೇಕ್ಷಕರು ಇಲ್ಲದೆ ಕ್ರೀಡಾಕೂಟವನ್ನು ನಡೆಸುವುದನ್ನು ತಳ್ಳಿಹಾಕುವುದಿಲ್ಲ ಎಂದು ಸೋಮವಾರ ಬೆಳಿಗ್ಗೆ ಜಪಾನಿನ ಪ್ರಧಾನಿ ಯೋಶಿಹೈಡ್ ಸುಗಾ ಹೇಳಿಕೆಯಲ್ಲಿ ತಿಳಿಸಿರುವುದು ಗಮನಾರ್ಹ.

ಈ ಬಾರಿಯ ಓಲಿಂಪಿಕ್ಸ್ ಕ್ರೀಡಾಕೂಟವೂ ಜುಲೈ 23 ರಿಂದ ಆಗಸ್ಟ್ 8ರ ವರೆಗೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com