ಬೈಕ್ ರೇಸ್ ವೇಳೆ ಭೀಕರ ಅಪಘಾತ: ಸ್ವಿಸ್ ಯುವ ಚಾಲಕ ಜೇಸನ್ ಡುಪಾಸ್ಕಿಯರ್ ಮೃತ

ಇಟಲಿಯ ಗ್ರ್ಯಾನ್ ಪ್ರಿಕ್ಸ್ ಅರ್ಹತಾ ಮೋಟಾರ್ ಸೈಕಲ್ ಸ್ಪರ್ಧೆಯಲ್ಲಿ ಸ್ವಿಟ್ಜರ್ಲೆಂಡ್‌ನ 19 ವರ್ಷದ ಮೋಟೋ 3 ರೇಸರ್ ಜೇಸನ್ ಡುಪಾಸ್ಕಿಯರ್ ಮೃತಪಟ್ಟಿದ್ದಾರೆ.
ಜೇಸನ್ ಡುಪಾಸ್ಕಿಯರ್
ಜೇಸನ್ ಡುಪಾಸ್ಕಿಯರ್

ಇಟಲಿಯ ಗ್ರ್ಯಾನ್ ಪ್ರಿಕ್ಸ್ ಅರ್ಹತಾ ಮೋಟಾರ್ ಸೈಕಲ್ ಸ್ಪರ್ಧೆಯಲ್ಲಿ ಸ್ವಿಟ್ಜರ್ಲೆಂಡ್‌ನ 19 ವರ್ಷದ ಮೋಟೋ 3 ರೇಸರ್ ಜೇಸನ್ ಡುಪಾಸ್ಕಿಯರ್ ಮೃತಪಟ್ಟಿದ್ದಾರೆ. 

ಮೋಟೋ ಜಿಪಿ ಭಾನುವಾರ ಈ ಮಾಹಿತಿಯನ್ನು ನೀಡಿದೆ. ಶನಿವಾರ ನಡೆದ ಅರ್ಹತಾ ಸ್ಪರ್ಧೆಯಲ್ಲಿ ಜೇಸನ್ ಸಮತೋಲನವನ್ನು ಕಳೆದುಕೊಂಡು ಬಿದ್ದರು. ಇದರ ನಂತರ ಎರಡನೇ ರೇಸ್ ನಿಂದ ಅವರು ಹೊರ ನಡೆದರು.

ಸುಮಾರು 40 ನಿಮಿಷಗಳ ಕಾಲ ಸರ್ಕ್ಯೂಟ್ ನಲ್ಲಿ ಚಿಕಿತ್ಸೆ ನೀಡಲಾಯಿತು. ತದ ನಂತರ ಅವರನ್ನು ವಿಮಾನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ, ಅವರ ಪ್ರಾಣವನ್ನು ಅಲ್ಲಿ ಉಳಿಸಲಾಗಲಿಲ್ಲ ಎಂದು ಮೋಟೋ ಜಿಪಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com