ಚೀನಾದಲ್ಲಿ ಮಾತನಾಡುವ ಹಕ್ಕಿಲ್ಲವೇ? ಟೆನಿಸ್ ಆಟಗಾರ್ತಿ ಪೆಂಗ್ ಶುಯಿ ಬಗ್ಗೆ ಹೆಚ್ಚಾಯ್ತು ಡಬ್ಲ್ಯುಟಿಎ ಕಳವಳ
ಕಮ್ಯೂನಿಸ್ಟ್ ರಾಷ್ಟ್ರವಾಗಿರುವ ಚೀನಾದಲ್ಲಿ ಮುಕ್ತವಾಗಿ ಮಾತನಾಡುವ ಹಕ್ಕಿಲ್ಲವೇ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಚೀನಿ ಟೆನಿಸ್ ಆಟಗಾರ್ತಿ ಪೆಂಗ್ ಶುಯಿ ವಿಚಾರದಲ್ಲಿ ಇದು ಮತ್ತೆ ಮುನ್ನೆಲೆಗೆ ಬಂದಿದೆ.
Published: 28th November 2021 06:58 PM | Last Updated: 28th November 2021 06:58 PM | A+A A-

ಪೆಂಗ್ ಶುಯಿ
ನವದೆಹಲಿ: ಕಮ್ಯೂನಿಸ್ಟ್ ರಾಷ್ಟ್ರವಾಗಿರುವ ಚೀನಾದಲ್ಲಿ ಮುಕ್ತವಾಗಿ ಮಾತನಾಡುವ ಹಕ್ಕಿಲ್ಲವೇ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಚೀನಿ ಟೆನಿಸ್ ಆಟಗಾರ್ತಿ ಪೆಂಗ್ ಶುಯಿ ವಿಚಾರದಲ್ಲಿ ಇದು ಮತ್ತೆ ಮುನ್ನೆಲೆಗೆ ಬಂದಿದೆ.
ಈ ಕುರಿತು ಮಾತನಾಡಿರುವ ಡಬ್ಲ್ಯುಟಿಎ ಮುಖ್ಯಸ್ಥ ಸ್ಟೀವ್ ಸೈಮನ್, ಚೀನಿ ಆಟಗಾರ್ತಿ ಪೆಂಗ್ ಶುಯಿ ಅಲ್ಲಿನ ಮಾಜಿ ಉಪ ಪ್ರಧಾನಿಯ ಮೇಲೆ ಲೈಂಗಿಕ ಆರೋಪ ಹೊರಿಸಿದ ಮೇಲೆ ಅವರು ಮುಕ್ತವಾಗಿ, ನೇರವಾಗಿ ಮಾತನಾಡುವ ಸಾಮರ್ಥ್ಯದ ಬಗ್ಗೆ ತಮ್ಮಗೆ ಹೆಚ್ಚಿನ ಕಳವಳ ಉಂಟಾಗುತ್ತಿದೆ ಅಂತಾ ತಿಳಿಸಿದ್ದಾರೆ.
ಮೂರು ಬಾರಿ ಒಲಿಂಪಿಯನ್ ಮತ್ತು ಮಾಜಿ ಅಗ್ರ ಶ್ರೇಯಾಂಕದ ಡಬಲ್ಸ್ ಆಟಗಾರ್ತಿ ಪೆಂಗ್ ಶುಯಿ ನವೆಂಬರ್ 2 ರಂದು ಚೀನಾದ ಮಾಜಿ ಉಪ ಪ್ರಧಾನಿ ಜಾಂಗ್ ಗೌಲಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಪೆಂಗ್ ಶುಯಿ ಹಂಚಿಕೊಂಡ ನಂತ್ರ ಪೋಸ್ಟನ್ನು ತ್ವರಿತವಾಗಿ ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಲಾಗಿತ್ತು.