ಉತ್ತರ ಪ್ರದೇಶದಲ್ಲಿ ನವೆಂಬರ್ 19 ರಿಂದ 21 ರವರೆಗೆ ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ(ಡಬ್ಲ್ಯುಎಫ್‌ಐ) 2021ರ ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ ದಿನಾಂಕಗಳನ್ನು ಘೋಷಿಸಿದೆ ಮತ್ತು ರೈಲ್ವೆ ಕ್ರೀಡಾ ಪ್ರಚಾರ ಮಂಡಳಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಕುಸ್ತಿ ಫೆಡರೇಶನ್ ಆಫ್ ಇಂಡಿಯಾ(ಡಬ್ಲ್ಯುಎಫ್‌ಐ) 2021ರ ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ ದಿನಾಂಕಗಳನ್ನು ಘೋಷಿಸಿದೆ ಮತ್ತು ರೈಲ್ವೆ ಕ್ರೀಡಾ ಪ್ರಚಾರ ಮಂಡಳಿ(ಆರ್‌ಎಸ್‌ಪಿಬಿ) ಹಾಗೂ ಸೇವಾ ಕ್ರೀಡಾ ಪ್ರಚಾರ ಮಂಡಳಿ(ಎಸ್‌ಎಸ್‌ಸಿಬಿ) ಸೇರಿದಂತೆ ಅಂಗಸಂಸ್ಥೆಗಳಿಗೆ ಆಹ್ವಾನ ಕಳುಹಿಸಿದೆ.

ಆಮಂತ್ರಣದ ಪ್ರಕಾರ, ನವೆಂಬರ್ 19 ರಿಂದ 21 ರವರೆಗೆ ಗೊಂಡ(ಉತ್ತರ ಪ್ರದೇಶ)ದ ನವಾಬಗಂಜ್ ನ ನಂದಿನಿ ನಗರ ಕ್ರೀಡಾ ಸಂಕೀರ್ಣ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ನಡೆಯಲಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಿಕೆಯಾಗಿದ್ದ 2020 ರ ಚಾಂಪಿಯನ್‌ಶಿಪ್‌ ಅನ್ನು ಫೆಡರೇಶನ್ ಈಗ ಆಯೋಜಿಸಿದೆ.

"ನವೆಂಬರ್ 4 ರೊಳಗೆ ರಾಜ್ಯ ಘಟಕಗಳು ತಮ್ಮ ಪ್ರವೇಶಾತಿಯನ್ನು ಕಳುಹಿಸಬೇಕು. ಕೋವಿಡ್ ಪರಿಸ್ಥಿತಿಯಿಂದಾಗಿ, ಪ್ರತಿಯೊಂದು ಸಂಘವು ಅಗ್ರ ಮೂರು ಹೊರತುಪಡಿಸಿ ಪ್ರತಿ ಶೈಲಿಯಲ್ಲಿ(ಫ್ರೀಸ್ಟೈಲ್, ಗ್ರೀಕೋ-ರೋಮನ್ ಮತ್ತು ಮಹಿಳಾ ಕುಸ್ತಿ) ಗರಿಷ್ಠ 10 ಕುಸ್ತಿಪಟುಗಳನ್ನು ಮತ್ತು ಎರಡು ತರಬೇತುದಾರರನ್ನು ಕಳುಹಿಸುವಂತೆ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com