ಮೆಸ್ಸಿ
ಕ್ರೀಡೆ
ಫೀಫಾ ವಿಶ್ವಕಪ್ 2022 ಫೈನಲ್: ಅರ್ಜೆಂಟಿನಾಗೆ ಆರಂಭಿಕ ಯಶಸ್ಸು, 2-0 ಗೋಲುಗಳಿಂದ ಮುನ್ನಡೆ!
ಫೀಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾಗೆ ಆರಂಭಿಕ ಮುನ್ನಡೆ ಸಿಕ್ಕಿದ್ದು ಲಿಯೋನಲ್ ಮೆಸ್ಸಿ ಮೊದಲ ಗೋಲು ಬಾರಿಸಿದ್ದಾರೆ.
ದೋಹಾ(ಕತಾರ್): ಫೀಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾಗೆ ಆರಂಭಿಕ ಮುನ್ನಡೆ ಸಿಕ್ಕಿದ್ದು ಲಿಯೋನಲ್ ಮೆಸ್ಸಿ ಮೊದಲ ಗೋಲು ಬಾರಿಸಿದ್ದಾರೆ.
ಆರಂಭದಿಂದಲೂ ಅರ್ಜೆಂಟಿನಾ ಆಕ್ರಮಣಕಾರಿ ಆಟವಾಡುತ್ತಿದ್ದು 23ನೇ ನಿಮಿಷದಲ್ಲಿ ಲಿಯೋನಲ್ ಮೆಸ್ಸಿ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ನಂತರ 36ನೇ ನಿಮಿಷದಲ್ಲಿ ಏಂಜಲ್ ಡಿ ಮಾರಿಯಾ ಮತ್ತೊಂದು ಗೋಲು ಬಾರಿಸಿದರು. ಈ ಮೂಲಕ ಅರ್ಜೆಂಟಿನಾ 2-0 ಗೋಲುಗಳಿಂದ ಮುನ್ನಡೆ ಸಾಧಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ