ಲೈಂಗಿಕ ಕಿರುಕುಳ: ಭಾರತ ಅಂಡರ್ 17 ಫುಟ್ಬಾಲ್ ತಂಡದ ಕೋಚ್ ಅಮಾನತು!

ಭಾರತ ಅಂಡರ್ 17 ಫುಟ್‌ಬಾಲ್‌ ತಂಡದಲ್ಲಿ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದ್ದು, ಆರೋಪ ಕೇಳಿಬಂದಿರುವ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ರನ್ನು ಅಮಾನತುಗೊಳಿಸಲಾಗಿದ್ದು, ಕೂಡಲೇ ಭಾರತಕ್ಕೆ ವಾಪಸ್ ಆಗುವಂತೆ ಸೂಚಿಸಲಾಗಿದೆ.
ಅಲೆಕ್ಸ್ ಆಂಬ್ರೋಸ್
ಅಲೆಕ್ಸ್ ಆಂಬ್ರೋಸ್

ನವದೆಹಲಿ: ಭಾರತ ಅಂಡರ್ 17 ಫುಟ್‌ಬಾಲ್‌ ತಂಡದಲ್ಲಿ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದ್ದು, ಆರೋಪ ಕೇಳಿಬಂದಿರುವ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ರನ್ನು ಅಮಾನತುಗೊಳಿಸಲಾಗಿದ್ದು, ಕೂಡಲೇ ಭಾರತಕ್ಕೆ ವಾಪಸ್ ಆಗುವಂತೆ ಸೂಚಿಸಲಾಗಿದೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ವ್ಯವಹಾರಗಳನ್ನು ನಿರ್ವಹಿಸುವ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಘಟನೆಯ ಬಗ್ಗೆ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (ಎಸ್‌ಎಐ) ಮಾಹಿತಿ ನೀಡಿದೆ. ಭಾರತದ ಅಂಡರ್-16 ಮಹಿಳಾ ತಂಡದ ಫುಟ್ಬಾಲ್ ಆಟಗಾರ್ತಿಯೊಬ್ಬರಿಗೆ ತಂಡದ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಪ್ರಸ್ತುತ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ನಾರ್ವೆಯಲ್ಲಿದ್ದು, ಈ ಕೂಡಲೇ ದೇಶಕ್ಕೆ ಮರಳುವಂತೆ ಸೂಚಿಸಲಾಗಿದೆ.

"ಅಂಬ್ರೋಸ್ ದುರ್ನಡತೆಯ ಆರೋಪ ಹೊತ್ತಿದ್ದು, ಈ ಸಂಬಂಧ ರಾಷ್ಟ್ರೀಯ ತಂಡದ ಫುಟ್ಬಾಲ್ ಆಟಗಾರರೊಬ್ಬರು ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಅವರು ದೇಶಕ್ಕೆ ಮರಳುತ್ತಿದ್ದಾರೆ. ತಂಡದೊಂದಿಗಿನ ಎಲ್ಲಾ ಸಂಪರ್ಕಗಳನ್ನು ನಿಲ್ಲಿಸಲು, ತಕ್ಷಣವೇ ಭಾರತಕ್ಕೆ ಹಿಂತಿರುಗಲು ಮತ್ತು ಅವರು ಆಗಮನದ ನಂತರ ಹೆಚ್ಚಿನ ತನಿಖೆಗಾಗಿ ದೈಹಿಕವಾಗಿ ಹಾಜರಾಗಲು AIFF ಆರೋಪಿ ಕೋಚ್ ಗೆ ಸೂಚನೆ ನೀಡಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಅಕ್ಟೋಬರ್ 11-30 ರವರೆಗೆ ನಾರ್ವೇ ಆಯೋಜಿಸುತ್ತಿರುವ FIFA U-17 ಮಹಿಳಾ ವಿಶ್ವಕಪ್‌ನ ತಯಾರಿಯ ಭಾಗವಾಗಿ ತಂಡವು ಪ್ರಸ್ತುತ ಯುರೋಪ್ ಪ್ರವಾಸವನ್ನು ನಡೆಸುತ್ತಿದೆ. CoA ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಹೆಸರಿಸಲಿಲ್ಲ. ಆದರೆ ತಂಡದ ಸಹಾಯಕ ತರಬೇತುದಾರ ಅಲೆಕ್ಸ್ ಆಂಬ್ರೋಸ್ ಅವರು ಅಪ್ರಾಪ್ತ ಆಟಗಾರ್ತಿಯೊಂದಿಗೆ "ಅನುಚಿತ" ಕೃತ್ಯದಲ್ಲಿ ತೊಡಗಿಸಿಕೊಳ್ಳಲು ಒತ್ತಾಯಿಸಿದರು ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ, ಮುಖ್ಯ ತರಬೇತುದಾರ ಥಾಮಸ್ ಡೆನ್ನರ್ಬಿ ಸ್ವತಃ "ಘಟನೆಗೆ" ಸಾಕ್ಷಿಯಾಗಿದ್ದರು ಮತ್ತು ಅವರು ತಕ್ಷಣವೇ AIFF ಗೆ ಮಾಹಿತಿ ನೀಡಿದರು ಎನ್ನಲಾಗಿದೆ.

"ಡೆನರ್ಬಿ ಯುರೋಪ್ನಿಂದ ವರದಿಯನ್ನು ಕಳುಹಿಸಿದ ನಂತರ, CoA ತಕ್ಷಣವೇ ಕಾರ್ಯ ಪ್ರವೃತ್ತರಾಗಿ SAI ಗೆ ಮಾಹಿತಿ ನೀಡಿ ಆರೋಪಿಯನ್ನು ಅಮಾನತು ಮಾಡಿ ದೇಶಕ್ಕೆ ವಾಪಸ್ ಆಗುವಂತೆ ಸೂಚಿಸಿದೆ. ಸಂತ್ರಸ್ಥ ಆಟಗಾರ್ತಿ ಅಪ್ರಾಪ್ತೆಯಾಗಿರುವುದರಿಂದ ಆಂಬ್ರೋಸ್ ಕೂಡ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com