ಕಾಮನ್‌ವೆಲ್ತ್ ಕ್ರೀಡಾಕೂಟದ ಮುಕ್ತಾಯದ ನಂತರ ಇಬ್ಬರು ಪಾಕಿಸ್ತಾನಿ ಬಾಕ್ಸರ್‌ಗಳು ನಾಪತ್ತೆ!

ಕಾಮನ್‌ವೆಲ್ತ್ ಕ್ರೀಡಾಕೂಟದ ಮುಕ್ತಾಯದ ನಂತರ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಬ್ಬರು ಪಾಕಿಸ್ತಾನಿ ಬಾಕ್ಸರ್‌ಗಳು ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ಫೆಡರೇಶನ್ ಬುಧವಾರ ತಿಳಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಇಸ್ಲಾಮಾಬಾದ್: ಕಾಮನ್‌ವೆಲ್ತ್ ಕ್ರೀಡಾಕೂಟದ ಮುಕ್ತಾಯದ ನಂತರ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಬ್ಬರು ಪಾಕಿಸ್ತಾನಿ ಬಾಕ್ಸರ್‌ಗಳು ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ಫೆಡರೇಶನ್ ಬುಧವಾರ ತಿಳಿಸಿದೆ.

ಪಾಕಿಸ್ತಾನದ ಬಾಕ್ಸಿಂಗ್ ಫೆಡರೇಶನ್ (ಪಿಬಿಎಫ್) ಕಾರ್ಯದರ್ಶಿ ನಾಸಿರ್ ಟಾಂಗ್ ಮಾತನಾಡಿ, ಬಾಕ್ಸರ್‌ಗಳಾದ ಸುಲೇಮಾನ್ ಬಲೋಚ್ ಮತ್ತು ನಜೀರುಲ್ಲಾ ಅವರು ಇಸ್ಲಾಮಾಬಾದ್‌ಗೆ ತಂಡವು ಹೊರಡುವ ಒಂದೆರಡು ಗಂಟೆಗಳ ಮೊದಲು ಕಣ್ಮರೆಯಾಗಿರುವ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಕ್ರೀಡಾಕೂಟವು ಸೋಮವಾರ ಕೊನೆಗೊಂಡಿತು. 'ಅವರ ಪಾಸ್‌ಪೋರ್ಟ್‌ಗಳು ಸೇರಿದಂತೆ ಪ್ರಯಾಣ ದಾಖಲೆಗಳು ಇನ್ನೂ ಬಾಕ್ಸಿಂಗ್ ತಂಡದೊಂದಿಗೆ ಬಂದಿದ್ದ ಫೆಡರೇಶನ್ ಅಧಿಕಾರಿಗಳ ಬಳಿಯೇ ಇವೆ' ಎಂದು ತಿಳಿಸಿದ್ದಾರೆ.

ಸುಲೇಮಾನ್ ಮತ್ತು ನಜೀರುಲ್ಲಾ ನಾಪತ್ತೆಯಾಗಿರುವ ಬಗ್ಗೆ ತಂಡದ ಆಡಳಿತವು ಇಂಗ್ಲೆಂಡ್‌ನಲ್ಲಿರುವ ಪಾಕಿಸ್ತಾನ ಹೈಕಮಿಷನ್ ಮತ್ತು ಲಂಡನ್‌ನಲ್ಲಿರುವ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ಅವರು ಹೇಳಿದರು.

ಕಾಣೆಯಾಗಿರುವ ಬಾಕ್ಸರ್‌ಗಳ ಬಗ್ಗೆ ತನಿಖೆ ನಡೆಸಲು ಪಾಕಿಸ್ತಾನ ಒಲಿಂಪಿಕ್ ಅಸೋಸಿಯೇಷನ್ ​​(ಪಿಒಎ) ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪಾಕಿಸ್ತಾನ ಪದಕ ಗೆಲ್ಲುವಲ್ಲಿ ವಿಫಲವಾಗಿದೆ. ವೇಟ್‌ಲಿಫ್ಟಿಂಗ್ ಮತ್ತು ಜಾವೆಲಿನ್ ಥ್ರೋನಲ್ಲಿ ಗೆದ್ದ ಎರಡು ಚಿನ್ನ ಸೇರಿದಂತೆ ಎಂಟು ಪದಕಗಳನ್ನು ಮುಡಿಗೇರಿಸಿಕೊಂಡಿದೆ.

ಹಂಗೇರಿಯಲ್ಲಿ ನಡೆದ FINA ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿರುವಾಗಲೇ ರಾಷ್ಟ್ರೀಯ ಈಜುಗಾರ ಫೈಜಾನ್ ಅಕ್ಬರ್ ಕೂಡ ಕಣ್ಮರೆಯಾಗಿದ್ದರು. ಅದಾಗಿ ಎರಡು ತಿಂಗಳ ನಂತರ ಪಾಕಿಸ್ತಾನದ ಬಾಕ್ಸರ್‌ಗಳು ಕಣ್ಮರೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com