ವಿಶ್ವ ಚಾಂಪಿಯನ್ ಷಿಪ್: ಒಲಿಂಪಿಕ್ ವಿಜೇತೆ ವೇಟ್ ಲಿಫ್ಟರ್ ಮೀರಾಬಾಯಿ ಚಾನುಗೆ ಬೆಳ್ಳಿ ಪದಕ

ಕೊಲಂಬಿಯಾದ ಬೊಗೊಟಾದಲ್ಲಿ ನಡೆದ 2022ರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. 
ಪದಕ ಗೆದ್ದ ಸಂಭ್ರಮದಲ್ಲಿ ಮೀರಾಬಾಯಿ ಚಾನು
ಪದಕ ಗೆದ್ದ ಸಂಭ್ರಮದಲ್ಲಿ ಮೀರಾಬಾಯಿ ಚಾನು

ಬೊಗೊಟಾ: ಕೊಲಂಬಿಯಾದ ಬೊಗೊಟಾದಲ್ಲಿ ನಡೆದ 2022ರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. 

ಮೀರಾಬಾಯಿ ಅವರು ಒಟ್ಟು 200 ಕೆಜಿ (87 ಕೆಜಿ ಸ್ನ್ಯಾಚ್ + 113 ಕೆಜಿ ಕ್ಲೀನ್ & ಜರ್ಕ್) ಭಾರ ಎತ್ತಿದ್ದಾರೆ. ಚೀನಾದ ಒಲಂಪಿಕ್ ಚಾಂಪಿಯನ್ ಹೌ ಝಿಹುವಾ (198 ಕೆಜಿ) ಗಿಂತ 2 ಕೆಜಿ ಹೆಚ್ಚು ಮತ್ತು ಚಿನ್ನದ ಪದಕ ಗೆದ್ದ ಮತ್ತೊಬ್ಬ ಚೈನೀಸ್ ಜಿಯಾಂಗ್ ಹುಯಿಹುವಾ (206 ಕೆಜಿ: 93 + 113) 6 ಕೆಜಿ ಕಡಿಮೆ ತೂಕವನ್ನು ಮೀರಾಬಾಯಿ ಚಾನು ಎತ್ತಿದ್ದಾರೆ.

ಚೀನಾದ ಹೌ ಝಿಹುಯಿ 198 ತೂಕವನ್ನು ಎತ್ತುವ ಮೂಲಕ (89 ಕೆಜಿ ಜೊತೆಗೆ 109 ಕೆಜಿ) ಕಂಚಿನ ಪದಕ ಪಡೆದರು.ಮಣಿಕಟ್ಟಿನ ಸಮಸ್ಯೆಯಿಂದ ಬಳಲುತ್ತಿರುವ ಮೀರಾಬಾಯಿ ಅವರ ಎರಡನೇ ವಿಶ್ವ ಪದಕವಾಗಿದ್ದು, ಈ ಹಿಂದೆ 2017 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 194 ಕೆಜಿ (85 ಕೆಜಿ ಜೊತೆಗೆ 109 ಕೆಜಿ) ಎತ್ತುವ ಮೂಲಕ ಚಿನ್ನ ಗೆದ್ದಿದ್ದರು. ಅವರು 2019 ರ ಆವೃತ್ತಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. 

ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ವ್ಯವಸ್ಥೆಯ ಪ್ರಕಾರ, ವೇಟ್ ಲಿಫ್ಟರ್ ಎರಡು ಕಡ್ಡಾಯ ಸ್ಪರ್ಧೆಗಳಲ್ಲಿ 2023 ವಿಶ್ವ ಚಾಂಪಿಯನ್‌ಶಿಪ್ ಮತ್ತು 2024 ವಿಶ್ವಕಪ್ ನಲ್ಲಿ ಕಡ್ಡಾಯವಾಗಿ ಸ್ಪರ್ಧಿಸಬೇಕಾಗುತ್ತದೆ. 2022 ರ ವಿಶ್ವ ಚಾಂಪಿಯನ್‌ಶಿಪ್‌ಗಳು 2024 ಪ್ಯಾರಿಸ್ ಒಲಿಂಪಿಕ್ಸ್‌ಗೆ ಮೊದಲ ಅರ್ಹತಾ ಪಂದ್ಯವಾಗಿದ್ದು, ಟೋಕಿಯೊ ಗೇಮ್ಸ್‌ನಲ್ಲಿ ವೇಟ್‌ಲಿಫ್ಟಿಂಗ್ ಸ್ಪರ್ಧೆಗಳನ್ನು 14 ರಿಂದ 10 ಕ್ಕೆ ಕಡಿತಗೊಳಿಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com