ಪೆನಾಲ್ಟಿ ಶೂಟೌಟ್‌ನಲ್ಲಿ ಬಲಿಷ್ಠ ಬ್ರೆಜಿಲ್ ಅನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕ್ರೊವೇಷಿಯಾ
ಫೀಫಾ ವಿಶ್ವಕಪ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡವನ್ನು ಪೆನಾಲ್ಟಿಯಲ್ಲಿ 4-2 ಗೋಲುಗಳಿಂದ ಮಣಿಸಿ ಕ್ರೊವೇಷಿಯಾ ಆಘಾತ ನೀಡಿದೆ.
Published: 10th December 2022 01:04 AM | Last Updated: 10th December 2022 01:04 AM | A+A A-

ಕ್ರೊಯೇಷಿಯಾ ಗೋಲ್ ಕೀಪರ್ ಡೊಮ್ನಿಕ್
ಅಲ್ ರಯಾನ್(ಕತಾರ್): ಫೀಫಾ ವಿಶ್ವಕಪ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡವನ್ನು ಪೆನಾಲ್ಟಿಯಲ್ಲಿ 4-2 ಗೋಲುಗಳಿಂದ ಮಣಿಸಿ ಕ್ರೊವೇಷಿಯಾ ಆಘಾತ ನೀಡಿದೆ.
ಕ್ರೊಯೇಷಿಯಾದ ಗೋಲ್‌ಕೀಪರ್ ಡೊಮಿನಿಕ್ ಲಿವ್ಕೊವಿಕ್ ರೋಡ್ರಿಗೋ ಅವರು ಬ್ರೆಜಿಲ್ ನ ಮಾರ್ಕ್ವಿನೋಸ್ ಅವರ ಗೋಲುಗಳನ್ನು ಉಳಿಸಿದರು. ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ ನೇಮರ್ ಬ್ರೆಜಿಲ್‌ಗೆ ಮುನ್ನಡೆ ತಂದುಕೊಟ್ಟರು. ಆದರೆ ಬ್ರೂನೋ ಪೆಟ್ಕೊವಿಕ್ ಅವರ 117ನೇ ನಿಮಿಷದಲ್ಲಿ ಕ್ರೊಯೇಷಿಯಾ ಗೋಲು ಗಳಿಸಿ ಸಮಬಲ ಸಾಧಿಸಿತು.
ಇದನ್ನೂ ಓದಿ: ಸ್ಪೇನ್ ಕನಸನ್ನು ಭಗ್ನಗೊಳಿಸಿದ ಮೊರಾಕೊ: ಮೊದಲ ಬಾರಿಗೆ 8ರ ಘಟ್ಟ ತಲುಪಿ ಇತಿಹಾಸ ಸೃಷ್ಟಿ!
ಅರ್ಜೆಂಟೀನಾ ಮತ್ತು ನೆದರ್ಲೆಂಡ್ಸ್ ನಡುವಿನ ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದವರ ವಿರುದ್ಧ ಕ್ರೊಯೇಷಿಯಾ ಸೆಣೆಸಲಿದೆ. ಈ ಸೋಲು ಬ್ರೆಜಿಲ್‌ನ 20 ವರ್ಷಗಳ ಕಾಯುವಿಕೆಯನ್ನು ಇನ್ನೂ ನಾಲ್ಕು ವರ್ಷಗಳವರೆಗೆ ವಿಸ್ತರಿಸಿದೆ. ಪಂದ್ಯದ ಮೊದಲ 90 ನಿಮಿಷಗಳಲ್ಲಿ ಎರಡೂ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಬಳಿಕ ಪಂದ್ಯದ ನಿಯಮದ ಪ್ರಕಾರ 30 ನಿಮಿಷ ಹೆಚ್ಚುವರಿ ಸಮಯ ನೀಡಲಾಯಿತು. ಈ ಹೆಚ್ಚುವರಿ ಸಮಯದ ಮೊದಲಾರ್ಧದಲ್ಲಿ ನೇಮರ್ ಗೋಲು ಗಳಿಸಿ ಬ್ರೆಜಿಲ್ ಮುನ್ನಡೆ ತಂದುಕೊಟ್ಟರು.
ಹೆಚ್ಚುವರಿ ಸಮಯದ ಕೊನೆಯಲ್ಲಿ ಕ್ರೊಯೇಷಿಯಾ ಸಹ ಒಂದು ಗೋಲು ಬಾರಿಸಿದ್ದು ಪಂದ್ಯ ಡ್ರಾ ಆಯಿತು. ನಂತರ ಕ್ರೊಯೇಷಿಯಾ ಬ್ರೆಜಿಲ್ ವಿರುದ್ಧ ಪೆನಾಲ್ಟಿಯಲ್ಲಿ 4-2ರಿಂದ ಗೆದ್ದಿತು.