ವಿಂಬಲ್ಡನ್: ಪುರುಷರ ಡಬಲ್ಸ್ ನಲ್ಲಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್, ಮ್ಯಾಕ್ಸ್ ಪರ್ಸೆಲ್ ಜೋಡಿ
ಲಂಡನ್: ಶನಿವಾರ ನಡೆದ ವಿಂಬಲ್ಡನ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಮತ್ತು ಮ್ಯಾಕ್ಸ್ ಪರ್ಸೆಲ್ ಅವರು ಐದು ಸೆಟ್‌ಗಳ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನಿಕೋಲಾ ಮೆಕ್ಟಿಕ್ ಮತ್ತು ಮೇಟ್ ಪಾವಿಕ್ ಅವರನ್ನು ಸೋಲಿಸಿ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಪಡೆದರು.
ಐದು ಸೆಟ್ ಗಳ ರೋಚಕ ಪಂದ್ಯದಲ್ಲಿ ನಿಕೋಲಾ ಮೆಕ್ಟಿಕ್ ಮತ್ತು ಮೇಟ್ ಪಾವಿಕ್ ಜೋಡಿ ವಿರುದ್ಧ 7-6(5) 6-7(3) 4-6, 6-4, 7-6(10-2 ) ಅಂತರದಿಂದ ಗೆದ್ದು, ಆಸ್ಟ್ರೇಲಿಯಾದ ಆಟಗಾರರು ಪ್ರಶಸ್ತಿ ಮುಡಿಗೇರಿಸಿಕೊಂಡರು.
ಪ್ರಶಸ್ತಿ ಗೆದ್ದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 34 ವರ್ಷದ ಮ್ಯಾಥ್ಯೂ ಎಬ್ಡೆನ್, ಮಕ್ಕಳಾಗಿರುವಾಗ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುತ್ತಾರೆ ಎಂದು ಜನ ಹೇಳುತ್ತಾರೆ. ಅದನ್ನ ನನಸು ಮಾಡಿದ್ದೇನೆ ಎಂಬುದು ನನಗೆ ಗೊತ್ತಿಲ್ಲ ಎಂದರು.
ನಾನು ವೃತ್ತಿಪರ ಟೆನಿಸ್ ಆಟಗಾರನಾಬೇಕು, ಟಾಪ್ 10ರಲ್ಲಿ ಸ್ಥಾನ ಪಡೆಯಬೇಕು. ಕಳೆದ ವರ್ಷ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಾಗ ಅದನ್ನು ನಂಬಲು ಪ್ರಾರಂಭಿಸಿದೆ. ಅದನ್ನು ಮಾಡಿದ್ದೇನೆ. ಆದರೆ, ಅದು ಆಗುತ್ತದೆ ಎಂದು ನಿಜವಾಗಿಯೂ ಗೊತ್ತಿಲ್ಲರಲಿಲ್ಲ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ