
ವರಿಂದರ್ ಸಿಂಗ್ (ಸಂಗ್ರಹ ಚಿತ್ರ)
ನವದೆಹಲಿ: ಒಲಂಪಿಕ್ ಹಾಗೂ ವಿಶ್ವಕಪ್ ಪದಕ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ (75) ಇಂದು ಬೆಳಿಗ್ಗೆ ಜಲಂಧರ್ ನಲ್ಲಿ ನಿಧನರಾದರು.
70 ರ ದಶಕಗಳಲ್ಲಿ ವರಿಂದರ್ ಸಿಂಗ್ ಭಾರತೀಯ ಹಾಕಿಯ ಸ್ಮರಣೀಯ ವಿಜಯಗಳ ಭಾಗವಾಗಿದ್ದರು. 1975 ರಲ್ಲಿ ಕೌಲಲಾಮ್ಪುರದಲ್ಲಿ ನಡೆದ ಪುರುಷರ ವಿಭಾಗದ ಹಾಕಿಯ ಚಿನ್ನದ ಪದಕ ಗೆದ್ದ ವಿಶ್ವಕಪ್ ತಂಡದಲ್ಲಿ ವರಿಂದರ್ ಸಿಂಗ್ ಇದ್ದರು.
In light of the tragic passing of the great Hockey player Shri Varinder Singh, we pray to the Almighty to grant the departed person's soul eternal rest and to provide the family members the fortitude to endure this irreparable loss. pic.twitter.com/s7Jb5xH0e3
— Hockey India (@TheHockeyIndia) June 28, 2022
ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 2-1 ಅಂತರದಿಂದ ಗೆದ್ದು ಚಿನ್ನದ ಪದಕ ಗೆದ್ದ ಏಕೈಕ ಪಂದ್ಯ ಇದಾಗಿದೆ. 1972 ರಲ್ಲಿ ಮುನೀಚ್ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತ ತಂಡದಲ್ಲಿ ಹಾಗೂ 1973 ರಲ್ಲಿ ಆಮ್ಸ್ಟ್ರಾಡಾಮ್ ನಲ್ಲಿ ನಡೆದ ವಿಶ್ವಕಪ್ ನ ಬೆಳ್ಳಿ ಪದಕ ಗೆದ್ದ ತಂಡ, 1974, 1978 ರ ಏಷ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಪದಕ ವಿಜೇತ ತಂಡಗಳಲ್ಲಿಯೂ ವರಿಂದರ್ ಸಿಂಗ್ ಇದ್ದರು.
ಭಾರತದ ಹಾಕಿಯ ದೈತ್ಯ ಪ್ರತಿಭೆ ವರಿಂದರ್ ಸಿಂಗ್ ಗೆ 2007 ರಲ್ಲಿ ಧ್ಯಾನ್ ಚಂದ್ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವರಿಂದರ್ ಸಿಂಗ್ ನಿಧನಕ್ಕೆ ಹಾಕಿ ಇಂಡಿಯಾ ಕಂಬನಿ ಮಿಡಿದಿದ್ದು, ಜಗತ್ತಿನಾದ್ಯಂತ ಇರುವ ಹಾಕಿ ಭ್ರಾತೃತ್ವ ವರಿಂದರ್ ಸಿಂಗ್ ಅವರನ್ನು ಸದಾ ನೆನಪಿನಲ್ಲಿಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.