ಫಿಫಾ ವಿಶ್ವಕಪ್ 2022: 2-1 ಗೋಲು ಮೂಲಕ ಅರ್ಜೆಂಟೀನಾಗೆ ಶಾಕ್ ಕೊಟ್ಟ ಸೌದಿ ಅರೇಬಿಯಾ!
ಫುಟ್ಬಾಲ್ ವಿಶ್ವಕಪ್ 2022ರ ಟೂರ್ನಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಮೆಸ್ಸಿ ಪಡೆಗೆ ದೊಡ್ಡ ಶಾಕ್ ಎದುರಾಗಿದೆ. ಟೂರ್ನಿಯ ಸಿ ಗುಂಪಿನ ಐದನೇ ಪಂದ್ಯ ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ನಡುವೆ ನಡೆಯಿತು.
Published: 22nd November 2022 08:31 PM | Last Updated: 22nd November 2022 08:31 PM | A+A A-

ಸೌದಿ ಅರೇಬಿಯಾ-ಅರ್ಜೆಂಟೀನಾ ಪಂದ್ಯ
ಫುಟ್ಬಾಲ್ ವಿಶ್ವಕಪ್ 2022ರ ಟೂರ್ನಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಮೆಸ್ಸಿ ಪಡೆಗೆ ದೊಡ್ಡ ಶಾಕ್ ಎದುರಾಗಿದೆ. ಟೂರ್ನಿಯ ಸಿ ಗುಂಪಿನ ಐದನೇ ಪಂದ್ಯ ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ನಡುವೆ ನಡೆಯಿತು.
ಈ ಪಂದ್ಯದ 10ನೇ ನಿಮಿಷದಲ್ಲಿ ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಮೊದಲ ಗೋಲು ಬಾರಿಸಿ ಅರ್ಜೆಂಟೀನಾಗೆ 1-0 ಮುನ್ನಡೆ ತಂದುಕೊಟ್ಟರು. ಮೆಸ್ಸಿ ಪಡೆ ಆರಂಭದಿಂದಲೂ ಪ್ರಾಬಲ್ಯ ತೋರಿತು. ಆದರೆ ದ್ವಿತೀಯಾರ್ಧದಲ್ಲಿ ಸೌದಿ ಅರೇಬಿಯಾ ಮರಳಿ ಬಂದ ರೀತಿ ಅದ್ಭುತವಾಗಿತ್ತು. ಸಲೇಹ್ ಅಲ್ಶೆಹ್ರಿ ಮತ್ತು ಸೇಲಂ ಅಲ್ದಾವ್ಸಾರಿ ಹೊಡೆದ ಗೋಲುಗಳಿಂದ ಸೌದಿ ಅರೇಬಿಯಾ 2-1 ಗೋಲುಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಇದನ್ನೂ ಓದಿ: ಫಿಫಾ ವಿಶ್ವಕಪ್‌ನಲ್ಲಿ ಮತ್ತೊಂದು ವಿವಾದ; ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್, ಕಾರಣ ಹಿಜಾಬ್!
ವಿರಾಮದ ವೇಳೆಗೆ ಸ್ಕೋರ್ 1-0 ಆಗಿತ್ತು. ಆದರೆ ಸೌದಿ ಅರೇಬಿಯಾ ದ್ವಿತೀಯಾರ್ಧದಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದು ಅವರ ಮುಂದೆ ಅರ್ಜೆಂಟೀನಾ ತಂಡವು ಅಸಹಾಯಕವಾಗಿ ಸೋಲು ಕಂಡಿತು. ಅರ್ಜೆಂಟೀನಾ ತಂಡವು ತನ್ನ ಮುಂದಿನ ಪಂದ್ಯವನ್ನು ಮೆಕ್ಸಿಕೊ ವಿರುದ್ಧ ನವೆಂಬರ್ 26ರಂದು ಮಧ್ಯಾಹ್ನ 12.30ಕ್ಕೆ ಆಡಲಿದೆ. ಅದೇ ದಿನ ಸಂಜೆ 6.30ಕ್ಕೆ ಸೌಧಿ ಅರೇಬಿಯಾ ತಂಡ ಪೋಲೆಂಡ್ ತಂಡವನ್ನು ಎದುರಿಸಲಿದೆ.