ರೆಸ್ಲಿಂಗ್ ಫೆಡರೇಶನ್ ಮಾಡಲಾಗದ್ದನ್ನು ವಾರದಲ್ಲಿ ಮಾಡಿಕೊಟ್ಟ ಟ್ರಾವೆಲ್ ಏಜೆಂಟ್, ರಾಯಭಾರ ಕಚೇರಿಯಲ್ಲೇ ಭ್ರಷ್ಟಾಚಾರ!!

23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಆಯ್ಕೆಯಾದ 21 ಭಾರತೀಯ ಕುಸ್ತಿಪಟುಗಳ ವೀಸಾ ಅರ್ಜಿಯನ್ನು ಸ್ಪ್ಯಾನಿಷ್ ರಾಯಭಾರ ಕಚೇರಿ ತಿರಸ್ಕರಿಸಿದ್ದರೂ, ಖಾಸಗಿ ಟ್ರಾವೆಲ್ ಏಜೆಂಟ್ ಒಬ್ಬರು ಕೇವಲ ಒಂದೇ ವಾರದಲ್ಲಿ ಮಹಿಳಾ ಗ್ರಾಪ್ಲರ್‌ಗೆ ಅದನ್ನು ಮಾಡಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಆಯ್ಕೆಯಾದ 21 ಭಾರತೀಯ ಕುಸ್ತಿಪಟುಗಳ ವೀಸಾ ಅರ್ಜಿಯನ್ನು ಸ್ಪ್ಯಾನಿಷ್ ರಾಯಭಾರ ಕಚೇರಿ ತಿರಸ್ಕರಿಸಿದ್ದರೂ, ಖಾಸಗಿ ಟ್ರಾವೆಲ್ ಏಜೆಂಟ್ ಒಬ್ಬರು ಕೇವಲ ಒಂದೇ ವಾರದಲ್ಲಿ ಮಹಿಳಾ ಗ್ರಾಪ್ಲರ್‌ಗೆ ಅದನ್ನು ಮಾಡಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು.. 30 ಕುಸ್ತಿಪಟುಗಳು ಮತ್ತು ಅವರ ಸಹಾಯಕ ಸಿಬ್ಬಂದಿಯನ್ನು ಒಳಗೊಂಡ ಭಾರತೀಯ ತಂಡಕ್ಕೆ ಅಕ್ಟೋಬರ್ 4 ರಂದು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (WFI) ವೀಸಾಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ ಇದನ್ನು ಆತಿಥೇಯ ರಾಷ್ಟ್ರ ಸ್ಪ್ಯಾನಿಷ್ ತಿರಸ್ಕರಿಸಿತ್ತು. ಸ್ಪ್ಯಾನಿಷ್ ರಾಯಭಾರ ಕಚೇರಿಯ ನಡೆ ಭಾರತೀಯ ಕ್ರೀಡಾಪಟುಗಳಿಗೆ ಆಘಾತವನ್ನುಂಟು ಮಾಡಿತ್ತು. ಈ ಸಂಬಂಧ WFI (ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ)ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ವಿಶ್ವ ಆಡಳಿತ ಮಂಡಳಿ UWW (ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್) ಮತ್ತು ಸ್ಪೇನ್ ಫೆಡರೇಶನ್‌ಗೆ ಪತ್ರವನ್ನು ಕಳುಹಿಸಿದ್ದಾರೆ.

ರೆಸ್ಲಿಂಗ್ ಫೆಡರೇಶನ್ ಮಾಡಲಾಗದ್ದನ್ನು ಮಾಡಿದ ಟ್ರಾವೆಲ್ ಏಜೆಂಟ್
ಇನ್ನು ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಬಿಜೆಪಿ ಸಂಸದರು ಕೂಡ ಆಗಿರುವ ಸಿಂಗ್ ಮತ್ತು ಯುಡಬ್ಲ್ಯೂಡಬ್ಲ್ಯೂನ ಅಂಗಸಂಸ್ಥೆ ಘಟಕವು ಮಾಡಲಾಗದನ್ನು ಖಾಸಗಿ ಏಜೆಂಟ್ ಮಾಡಿಕೊಟ್ಟಿದ್ದಾರೆ. ಕ್ರೀಡಾಪಟುವೊಬ್ಬರ ವೀಸಾವನ್ನು ಸಂಗ್ರಹಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಸೋಮವಾರ ಪಾಂಟೆವೆಡ್ರಾದಲ್ಲಿ ಆರಂಭವಾದ ಈವೆಂಟ್‌ನಲ್ಲಿ ಸ್ಪರ್ಧಿಸಲು ಕುಸ್ತಿಪಟುಗಳನ್ನು (ಪುರುಷರ ಫ್ರೀಸ್ಟೈಲ್, ಗ್ರೀಕೋ-ರೋಮನ್ ಮತ್ತು ಮಹಿಳೆಯರ ಕುಸ್ತಿಯಲ್ಲಿ ತಲಾ 10) ಅಭ್ಯಾಸ ಪಂದ್ಯಗಳ ನಂತರ ಆಯ್ಕೆ ಮಾಡಲಾಯಿತು. ಅವರಲ್ಲಿ ಒಂಬತ್ತು (ಆರು ಗ್ರೀಕೋ-ರೋಮನ್, ಇಬ್ಬರು ಮಹಿಳೆಯರು ಮತ್ತು ಒಂದು ಫ್ರೀಸ್ಟೈಲ್) ಸ್ಪ್ಯಾನಿಷ್ ರಾಯಭಾರ ಕಚೇರಿಯಿಂದ ಭಾಗವಹಿಸಲು ಅನುಮತಿ ನೀಡಲಾಯಿತು. ವೀಸಾ ಅವಧಿ ಮುಗಿಯುವ ಮೊದಲು ಸದಸ್ಯ ರಾಷ್ಟ್ರಗಳ ಪ್ರದೇಶವನ್ನು ತೊರೆಯುವ ನಿಮ್ಮ ಉದ್ದೇಶದ ಬಗ್ಗೆ ಸಮಂಜಸವಾದ ಅನುಮಾನವಿದೆ ಎಂದು ಹೇಳಿ 21 ಮಂದಿಯ ವೀಸಾ ನಿರಾಕರಿಸಲಾಗಿತ್ತು.

ಹರಿಯಾಣದ ಪ್ರಿಯಾಂಕಾ 76 ಕೆಜಿ ಟ್ರಯಲ್ಸ್‌ನಲ್ಲಿ ತನ್ನ ರಾಜ್ಯದ ಸಹ ಆಟಗಾರ್ತಿ ಭಾವನಾ ಅವರನ್ನು ಸೋಲಿಸಿದರು. ಬಳಿಕ ಅವರು ಗಾಯಗೊಂಡರು. ಹೀಗಾಗಿ ಆಕೆಯ ಸ್ಥಾನಕ್ಕೆ ಭಾವನಾ ಅವರನ್ನು ಆಯ್ಕೆ ಮಾಡುವಂತೆ ಆಕೆಯ ಸಂಬಂಧಿಕರು ಒತ್ತಾಯಿಸಿದ್ದರು.  ಈ ಸಂಬಂಧ ಫೆಡರೇಶನ್‌ನೊಂದಿಗೂ ಮಾತನಾಡಿ ಮನವಿ ನೀಡಿದ್ದರು. ಆದರೆ ಆ ಹೊತ್ತಿಗೆ ವೀಸಾ ಅರ್ಜಿಯನ್ನು ಕಳುಹಿಸಲಾಗಿತ್ತು. ಆದ್ದರಿಂದ ಅವರು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಟ್ರಾವೆಲ್ ಏಜೆಂಟ್‌ನ ಸಹಾಯದಿಂದ ಮುಂದುವರೆಯಬೇಕಾಯಿತು. ಕೊನೆಗೂ ಅಂತಿಮ ಕ್ಷಣದಲ್ಲಿ ಟ್ರಾವೆಲ್ ಏಜೆಂಟ್ ಮೂಲಕ ವೀಸಾಗೆ ಅರ್ಜಿ ಸಲ್ಲಿಸಿ ಕೇವಲ ಒಂದು ವಾರದ ಅವಧಿಯೊಳಗೆ ವೀಸಾ ಪಡೆದಿದ್ದಾರೆ.

ರಾಯಭಾರ ಕಚೇರಿಯಲ್ಲೇ ಭ್ರಷ್ಟಾಚಾರ
ಈ ಕುರಿತು ಬೇಸರ ವ್ಯಕ್ತಪಡಿಸಿರುವ ಕೆಲವರು, ಕುಸ್ತಿಪಟುಗಳಾಗಿದ್ದರೂ ಸಹ, WFI ಶಿಫಾರಸು ಇದ್ದರೂ ವೀಸಾ ದೊರೆತಿಲ್ಲ. ಆದರೆ ಟ್ರಾವೆಲ್ ಏಜೆಂಟ್ ಮೂಲಕ ವೀಸಾ ದೊರೆತಿದೆ. ಇದೇ ವಿಚಾರವಾಗಿ ಡಬ್ಲ್ಯುಎಫ್‌ಐನ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್  ಅವರು ಸ್ಪ್ಯಾನಿಷ್ ಸರ್ಕಾರಕ್ಕೆ ಪತ್ರ ಬರೆದಿದ್ದು, ಭಾವನಾ ಅವರ ವೀಸಾ ಅನುಮೋದನೆ ಘಟನೆಯು ರಾಯಭಾರ ಕಚೇರಿಯಲ್ಲಿ ಸಂಭವನೀಯ ಭ್ರಷ್ಟಾಚಾರವನ್ನು ಸೂಚಿಸುತ್ತದೆ. ಅದನ್ನು ತನಿಖೆ ಮಾಡಲು ಸರ್ಕಾರವನ್ನು ವಿನಂತಿಸಲಾಗಿದೆ ಎಂದು ಹೇಳಿದ್ದಾರೆ.

ಅಂತೆಯೇ ದೇಶದ ಒಂಬತ್ತು ಕುಸ್ತಿಪಟುಗಳು ಮಾತ್ರ ಈವೆಂಟ್‌ನಲ್ಲಿ ಸ್ಪರ್ಧಿಸಬಹುದು. "ನಾವು ಸ್ಪ್ಯಾನಿಷ್ ಸರ್ಕಾರದಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೆವು. ಆದರೆ ಇಲ್ಲಿಯವರೆಗೆ ಅದು ಯಾವುದೇ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿಲ್ಲ. ಆದ್ದರಿಂದ ಈಗ ವೀಸಾ ಅರ್ಜಿಗಳನ್ನು ಸ್ವೀಕರಿಸಿದ ಒಂಬತ್ತು ಕುಸ್ತಿಪಟುಗಳು ಮಾತ್ರ ಅಲ್ಲಿ ಸ್ಪರ್ಧಿಸುತ್ತಾರೆ" ಎಂದು ತೋಮರ್ ಸಹಿ ಹಾಕಿದ್ದಾರೆ.

ವಿಪರ್ಯಾಸವೆಂದರೆ, ವೀಸಾದ ಹೊರತಾಗಿಯೂ, ಅಂತರರಾಷ್ಟ್ರೀಯ ಕೂಟದಲ್ಲಿ ಎಂದಿಗೂ ದೇಶವನ್ನು ಪ್ರತಿನಿಧಿಸದ ಭಾವನಾ, ಡಬ್ಲ್ಯುಎಫ್‌ಐ ಕಳುಹಿಸಿದ ಪ್ರವೇಶ ಪಟ್ಟಿಯಲ್ಲಿ ಅವರ ಹೆಸರಿಲ್ಲದ ಕಾರಣ ಅವರ ಚೊಚ್ಚಲ ಪ್ರವೇಶಕ್ಕಾಗಿ ಕಾಯಬೇಕಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com