ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ: ಚಿನ್ನ ಗೆದ್ದ ಭಾರತದ ಎಚ್ ಎಸ್ ಪ್ರಣಯ್

ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಶಟ್ಲರ್ ಎಚ್ ಎಸ್ ಪ್ರಣಯ್ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
ಎಚ್ ಎಸ್ ಪ್ರಣಯ್
ಎಚ್ ಎಸ್ ಪ್ರಣಯ್

ಕೌಲಾಲಂಪುರ: ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಶಟ್ಲರ್ ಎಚ್ ಎಸ್ ಪ್ರಣಯ್ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.

ಹೌದು.. ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪಂದ್ಯದನಲ್ಲಿ ಭಾರತದ ಸ್ಟಾರ್ ಶಟ್ಲರ್ ಎಚ್ ಎಸ್ ಪ್ರಣಯ್ ಚೀನಾದ ಹಾಂಗ್ ಯಾಂಗ್ ವೆಂಗ್ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.

ಕೌಲಾಲಂಪುರದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಅವರು ತಮ್ಮ ಪ್ರತಿಸ್ಪರ್ಧಿಯನ್ನು 21-19, 13-21, 21-18 ಅಂತರದಿಂದ ಸೋಲಿಸಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. 

ಇನ್ನು ಕಳೆದ ವರ್ಷ ಜೊನಾಟಾನ್ ಕ್ರಿಸ್ಟಿ ವಿರುದ್ಧ 2022ರ ಸ್ವಿಸ್ ಓಪನ್ನಲ್ಲಿ ಸೋತ ನಂತರ ಪ್ರಣಯ್ ಅವರ ಮೊದಲ ಫೈನಲ್ ಪಂದ್ಯ ಇದಾಗಿದೆ. ವಿಶ್ವದ 9ನೇ ಶ್ರೇಯಾಂಕಿತ ಆಟಗಾರ ಪ್ರಣಯ್ ಮೊದಲ ಗೇಮ್ನ ಕೊನೆಯಲ್ಲಿ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com