ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿ ಹಿಂದಿರುಗಿಸುತ್ತೇನೆ: ಪ್ರಧಾನಿ ಮೋದಿಗೆ ಮಹಿಳಾ ರೆಸ್ಲರ್ ವಿನೇಶ್ ಫೋಗಟ್ ಪತ್ರ!

ಬ್ರಿಜ್ ಭೂಷಣ್ ಶರಣ್ ಸಿಂಗ್ ನಿಷ್ಠಾವಂತ ಸಂಜಯ್ ಸಿಂಗ್ ಅವರನ್ನು ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದನ್ನು ವಿರೋಧಿಸಿ ಕುಸ್ತಿಪಟು ವಿನೇಶ್ ಫೋಗಟ್ ಅವರು ತಮ್ಮ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಘೋಷಿಸಿದ್ದಾರೆ.
ಮಹಿಳಾ ರೆಸ್ಲರ್ ವಿನೇಶ್ ಫೋಗಟ್
ಮಹಿಳಾ ರೆಸ್ಲರ್ ವಿನೇಶ್ ಫೋಗಟ್
Updated on

ನವದೆಹಲಿ: ಬ್ರಿಜ್ ಭೂಷಣ್ ಶರಣ್ ಸಿಂಗ್ ನಿಷ್ಠಾವಂತ ಸಂಜಯ್ ಸಿಂಗ್ ಅವರನ್ನು ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದನ್ನು ವಿರೋಧಿಸಿ ಕುಸ್ತಿಪಟು ವಿನೇಶ್ ಫೋಗಟ್ ಅವರು ತಮ್ಮ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿರುವ ವಿನೇಶ್ ಫೋಗಟ್ ಅವರು, "ನಾನು ನನ್ನ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಮತ್ತು ಅರ್ಜುನ್ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ನಮ್ಮನ್ನು ಈ ಸ್ಥಿತಿಗೆ ತಂದ ಸರ್ವಶಕ್ತನಿಗೆ ಅನೇಕ ಧನ್ಯವಾದಗಳು ಎಂದು ಹೇಳಿದ್ದಾರೆ.

ಸಾಕ್ಷಿ ಮಲಿಕ್ ಕುಸ್ತಿಯನ್ನು ತೊರೆದಿದ್ದಾರೆ ಮತ್ತು ಭಜರಂಗ್ ಪುನಿಯಾ ತಮ್ಮ ಪದ್ಮಶ್ರೀಯನ್ನು ಹಿಂದಿರುಗಿಸಿದ್ದಾರೆ. ದೇಶಕ್ಕೆ ಒಲಂಪಿಕ್ ಪದಕಗಳನ್ನು ಗೆದ್ದ ಆಟಗಾರರು ಇದನ್ನೆಲ್ಲಾ ಏಕೆ ಮಾಡಿದ್ದಾರೆ ಎಂದು ಇಡೀ ದೇಶಕ್ಕೆ ತಿಳಿದಿದೆ. ನೀವು ದೇಶದ ಮುಖ್ಯಸ್ಥರಾಗಿದ್ದೀರಿ, ಆದ್ದರಿಂದ ಈ ವಿಷಯ ನಿಮಗೂ ತಲುಪಿರಬೇಕು. ಇವತ್ತು ಸಾಕ್ಷಿ ಕುಸ್ತಿ ಬಿಡಬೇಕಾಗಿ ಬಂದಾಗಿನಿಂದ ಆ 2016ನೇ ವರ್ಷ ಮತ್ತೆ ಮತ್ತೆ ನೆನಪಾಗುತ್ತಿದೆ. ನಾವು ಮಹಿಳಾ ಆಟಗಾರರು ಸರಕಾರಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಮಾತ್ರ ಇದ್ದೇವೋ? ಆ ಜಾಹೀರಾತುಗಳನ್ನು ಪ್ರಕಟಿಸಲು ನಮ್ಮ ಅಭ್ಯಂತರವಿಲ್ಲ, ಏಕೆಂದರೆ ಅವುಗಳಲ್ಲಿ ಬರೆದಿರುವ ಘೋಷಣೆಗಳಿಂದ ನಿಮ್ಮ ಸರ್ಕಾರವು ಹೆಣ್ಣುಮಕ್ಕಳ ಉನ್ನತಿಗಾಗಿ ಗಂಭೀರವಾಗಿ ಕೆಲಸ ಮಾಡಲು ಬಯಸುತ್ತಿದೆ ಎಂದು ಕಾಣುತ್ತದೆ. 

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಕಂಡಿದ್ದೆ, ಆದರೆ ಈಗ ಆ ಕನಸೂ ಕಳೆಗುಂದುತ್ತಿದೆ. ಮುಂಬರುವ ಮಹಿಳಾ ಆಟಗಾರ್ತಿಯರ ಈ ಕನಸು ಖಂಡಿತವಾಗಿಯೂ ಈಡೇರಲಿ ಎಂದು ಪ್ರಾರ್ಥಿಸುತ್ತೇನೆ. ಆದರೆ ನಮ್ಮ ಜೀವನವು ಆ ಅಲಂಕಾರಿಕ ಜಾಹೀರಾತುಗಳಂತೆ ಇಲ್ಲವೇ ಇಲ್ಲ. ಕಳೆದ ಕೆಲವು ವರ್ಷಗಳಲ್ಲಿ ಮಹಿಳಾ ಕುಸ್ತಿಪಟುಗಳು ಏನನ್ನು ಅನುಭವಿಸಿದ್ದಾರೆ, ನಾವು ಎಷ್ಟು ಉಸಿರುಗಟ್ಟಿಸುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ನಿಮ್ಮ ಆ ಅಲಂಕಾರಿಕ ಜಾಹೀರಾತುಗಳು ಫ್ಲೆಕ್ಸ್ ಬೋರ್ಡ್ ಗಳು ಕೂಡ ಹಳತಾಗಿರಬಹುದು. ಈಗ ಸಾಕ್ಷಿ ಕೂಡ ನಿವೃತ್ತಿಯಾಗಿದ್ದಾರೆ. ಶೋಷಕ ತನ್ನ ಪ್ರಾಬಲ್ಯವನ್ನು ಘೋಷಿಸಿದ್ದಾನೆ ಮತ್ತು ಅತ್ಯಂತ ಒರಟು ರೀತಿಯಲ್ಲಿ ಘೋಷಣೆಗಳನ್ನು ಕೂಗಿದ್ದಾನೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ವಿನೇಶ್ ಫೋಗಟ್ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರೊಂದಿಗೆ ಮಾಜಿ WFI ಮುಖ್ಯಸ್ಥ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮತ್ತು ಅಧಿಕಾರ ದುರುಪಯೋಗದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾಗಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com