ಬಾಲ್ ಗರ್ಲ್ ತಲೆಗೆ ಚೆಂಡು ಬಡಿತ: ಫ್ರೆಂಚ್ ಓಪನ್ ಡಬಲ್ಸ್ ಜೋಡಿ ಅನರ್ಹ, ವಿಡಿಯೋ ವೈರಲ್!
ಫ್ರೆಂಚ್ ಓಪನ್ ನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಪಂದ್ಯದ ವೇಳೆ, ಮಿಯು ಕಾಟೊ ಹೊಡೆದ ಚೆಂಡು ಬಾಲ್ ಗರ್ಲ್ ತಲೆಯ ಬಡಿದಿದ್ದು ಈ ಹಿನ್ನೆಲೆಯಲ್ಲಿ ಆ ಮಹಿಳಾ ಜೋಡಿ ಜಪಾನ್-ಇಂಡೋನೇಷ್ಯಾದ ಮಹಿಳಾ ಡಬಲ್ಸ್ ನಲ್ಲಿ ಅನರ್ಹಗೊಂಡಿದೆ.
Published: 05th June 2023 09:06 PM | Last Updated: 05th June 2023 09:06 PM | A+A A-

ಘಟನೆ ದೃಶ್ಯ
ಪ್ಯಾರಿಸ್: ಫ್ರೆಂಚ್ ಓಪನ್ ನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಪಂದ್ಯದ ವೇಳೆ, ಮಿಯು ಕಾಟೊ ಹೊಡೆದ ಚೆಂಡು ಬಾಲ್ ಗರ್ಲ್ ತಲೆಯ ಬಡಿದಿದ್ದು ಈ ಹಿನ್ನೆಲೆಯಲ್ಲಿ ಆ ಮಹಿಳಾ ಜೋಡಿ ಜಪಾನ್-ಇಂಡೋನೇಷ್ಯಾದ ಮಹಿಳಾ ಡಬಲ್ಸ್ ನಲ್ಲಿ ಅನರ್ಹಗೊಂಡಿದೆ.
ಈ ಘಟನೆಯ ನಂತರ, ಬಾಲ್ ಗರ್ಲ್ 15 ನಿಮಿಷಗಳ ಕಾಲ ಕೋರ್ಟ್‌ನಲ್ಲಿ ನೋವಿನಿಂದ ಅತ್ತಿದ್ದಳು. ನಂತರ ಜಪಾನ್-ಇಂಡೋನೇಷ್ಯಾದ ಮಹಿಳೆಯರ ಡಬಲ್ಸ್ ಜೋಡಿಯನ್ನು ಅನರ್ಹಗೊಳಿಸಲು ರೆಫರಿ ನಿರ್ಧರಿಸಿದರು.
ಇನ್ನೂ ಅಚ್ಚರಿಯ ಸಂಗತಿಯೆಂದರೆ ಬಾಲ್ ಗರ್ಲ್ ನೋವಿನಿಂದ ಅಳುತ್ತಿದ್ದಳು. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಮಹಿಳೆಯರ ಡಬಲ್ಸ್ ಮೂರನೇ ಸುತ್ತಿನಲ್ಲಿ ಜಪಾನ್‌ನ ಕ್ಯಾಟೊ ಮತ್ತು ಅವರ ಇಂಡೋನೇಷ್ಯಾದ ಜೊತೆಗಾರ್ತಿ, 16 ನೇ ಶ್ರೇಯಾಂಕದ ಎಲ್ಡಿಲಾ ಸುಟ್ಜಿಯಾಡಿ ಅವರು ಮೇರಿ ಬುಜ್ಕೋವಾ ಮತ್ತು ಸಾರಾ ಸೊರಿಬೆಸ್ ಟೊರ್ಮೊ ವಿರುದ್ಧ 7-6 (1), 1-3 ರಲ್ಲಿ ಮುನ್ನಡೆ ಸಾಧಿಸಿದರು.
Hmmmm.... the player from the team who hit the ball kid was disqualified after the other team protested.
— Trevor C Scott©️ (@trevor_writes) June 4, 2023
It didn't look to be intentional, as the player was only hitting the ball to the ball kid (whose hands were full)
Bouzkova/Sorribes Tormo d. Kato/Sutjiadi #rolandgarros pic.twitter.com/nhA97Zz07F
ಇಲ್ಲಿ ಜಪಾನ್ ಆಟಗಾರ್ತಿ ಹೊಡೆದ ಶಾಟ್ ಬಾಲ್ ಗರ್ಲ್ ಗೆ ತಾಗಿತು. ಚೆಂಡು ತನ್ನ ಕಡೆಗೆ ಬರುತ್ತಿದೆ ಎಂಬ ಸತ್ಯವನ್ನು ಅವಳು ಮರೆತುಬಿಟ್ಟಿದ್ದಳು. ಚೆಂಡು ಬಡಿದ ನಂತರ ನೋವಿನಿಂದ ನರಳಲು ಪ್ರಾರಂಭಿಸಿದಳು. ಅಂಗಳದಲ್ಲಿಯೇ ಜೋರಾಗಿ ಅಳಲು ಪ್ರಾರಂಭಿಸಿದಳು. ಇತ್ತ ಜಪಾನ್ ಹಾಗೂ ಇಂಡೋನೇಷಿಯಾ ಆಟಗಾರ್ತಿ ಬಾಲ್ ಗರ್ಲ್ ಬಳಿ ಕ್ಷಮೆ ಯಾಚಿಸಿದ್ದಾರೆ. ಈ ಸಂದರ್ಭದಲ್ಲಿ ಅಂಪೈರ್ ಕ್ಯಾಟೊಗೆ ಎಚ್ಚರಿಕೆ ನೀಡಿದರು, ಆದರೆ ಜೆಕ್ ಬೌಜ್ಕೋವಾ ಮತ್ತು ಸ್ಪೇನ್‌ನ ಸೊರ್ರಿಬ್ಸ್ ಟೊರ್ಮೊ ನಂತರದ ಪಂದ್ಯದಲ್ಲಿ ರೆಫರಿಯನ್ನು ಕೋರ್ಟ್ 14 ಗೆ ಕರೆದು ಬಾಲ್ ಗರ್ಲ್ ಗಾಯದ ಬಗ್ಗೆ ತಿಳಿಸಿದರು.
ಸುದೀರ್ಘ ಚರ್ಚೆಯ ನಂತರ, ರೆಫರಿ ಕ್ಯಾಟೊ ಮತ್ತು ಅವರ ಪಾಲುದಾರರನ್ನು ಅನರ್ಹಗೊಳಿಸಿದರು. ಇದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಸಾಮಾನ್ಯವಾಗಿ, ಅಂತಹ ಸಂದರ್ಭಗಳಲ್ಲಿ ಎಚ್ಚರಿಕೆಯನ್ನು ಮಾತ್ರ ನೀಡಲಾಗುತ್ತದೆ. ಶಾಟ್ ಉದ್ದೇಶಪೂರ್ವಕವಾಗಿಲ್ಲದಿದ್ದರೆ ಅನರ್ಹತೆಯ ನಿರ್ಧಾರವು ಸ್ವಲ್ಪ ಆಶ್ಚರ್ಯಕರವಾಗಿತ್ತು.
ಮತ್ತೊಂದೆಡೆ, ಎದುರಾಳಿ ತಂಡದ ಬುಜ್ಕೋವಾ, ಇದು ಎಲ್ಲರಿಗೂ ಕೆಟ್ಟ ಪರಿಸ್ಥಿತಿಯಾಗಿದೆ. ಆದರೆ ಈ ನಿರ್ಧಾರವನ್ನು ನಿಯಮಗಳಿಂದ ತೆಗೆದುಕೊಳ್ಳಲಾಗಿದೆ. ಇದು ಅತ್ಯಂತ ದುರದೃಷ್ಟಕರ. ಇದು ತೀರ್ಪುಗಾರರ ನಿರ್ಧಾರವಾಗಿತ್ತು ಎಂದರು.