ಇಂಡೋನೇಷ್ಯಾ ಮಾಸ್ಟರ್ಸ್ 2023: ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಭಾರತದ ಕಿರಣ್ ಜಾರ್ಜ್

ಇಂಡೋನೇಷ್ಯಾ ಮಾಸ್ಟರ್ಸ್ 2023 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಕಿರಣ್ ಜಾರ್ಜ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಕಿರಣ್ ಜಾರ್ಜ್
ಕಿರಣ್ ಜಾರ್ಜ್
Updated on

ಇಂಡೋನೇಷ್ಯಾ ಮಾಸ್ಟರ್ಸ್ 2023 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಕಿರಣ್ ಜಾರ್ಜ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 

ಉತ್ತರ ಸುಮಾತ್ರದ ಮೆಡಾನ್‌ನಲ್ಲಿರುವ GOR PBSI ಟೆನಿಸ್ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 50ನೇ ಸ್ಥಾನದಲ್ಲಿರುವ ಕಿರಣ್ ಜಾರ್ಜ್ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 56 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ 82ನೇ ಶ್ರೇಯಾಂಕದ ಆಟಗಾರ ಜಪಾನ್‌ನ ಕು ತಕಹಶಿ ವಿರುದ್ಧ 21-19, 22-20 ಸೆಟ್‌ಗಳಿಂದ ಗೆದ್ದು ಎರಡನೇ ಪ್ರಶಸ್ತಿ ಗೆದ್ದರು. ಇದಕ್ಕೂ ಮೊದಲು, ಅವರು ಒಡಿಶಾ ಓಪನ್ 2022 ರ ಫೈನಲ್‌ನಲ್ಲಿ ದೇಶವಾಸಿ ಪ್ರಿಯಾಂಶು ರಾಜವತ್ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದಿದ್ದರು.

23ರ ಹರೆಯದ ಭಾರತದ ಆಟಗಾರ ಈ ಪಂದ್ಯದಲ್ಲಿ ಜಪಾನ್ ಎದುರಾಳಿಗೆ ಕಠಿಣ ಪೈಪೋಟಿ ನೀಡಿದರು. 15 ಅಂಕಗಳೊಂದಿಗೆ ಇಬ್ಬರು ಸಮಾನವಾಗಿದ್ದಾಗ ಕಿರಣ್ ಜಾರ್ಜ್ ಮುಂದಿನ 10 ಪಾಯಿಂಟ್‌ಗಳಲ್ಲಿ ಆರು ಗೆಲ್ಲುವ ಮೂಲಕ ಮೊದಲ ಗೇಮ್ ಅನ್ನು ಸುಲಭವಾಗಿ ಗೆದ್ದರು.

ಎರಡನೇ ಗೇಮ್‌ನ ಆರಂಭದಲ್ಲಿ ಇಬ್ಬರೂ ಆಟಗಾರರು ಪರಸ್ಪರ ಪ್ರಾಬಲ್ಯ ಮೆರೆದರು. ಒಂದು ಹಂತದಲ್ಲಿ ಸ್ಕೋರ್ 6-6ರಲ್ಲಿ ಸಮಬಲಗೊಂಡಿತು. ಆದರೂ ಛಲ ಬಿಡದ ಭಾರತದ ಆಟಗಾರ ಬೇಗನೇ 16-11ರ ಮುನ್ನಡೆ ಪಡೆದರು.

ಇದಾದ ಬಳಿಕ ಜಪಾನಿನ ಷಟ್ಲರ್ ಆಟದಲ್ಲಿ ಉತ್ತಮ ಪುನರಾಗಮನ ಮಾಡಿದ್ದರಿಂದ ಪಂದ್ಯ ಟೈ ಬ್ರೇಕರ್‌ಗೆ ಹೋಯಿತು. ಅಂತಿಮವಾಗಿ ಕಿರಣ್ ಜಾರ್ಜ್ ಸತತ ಪಾಯಿಂಟ್ಸ್ ಗಳಿಸುವ ಮೂಲಕ ಈ ಅದ್ಭುತ ಪಂದ್ಯವನ್ನು ಗೆದ್ದುಕೊಂಡರು. ಈ ಮೂಲಕ ಅವರು ತಮ್ಮ ಮೊದಲ ಬ್ಯಾಡ್ಮಿಂಟನ್ ಸೀಸನ್ 2023 ಪ್ರಶಸ್ತಿಯನ್ನು ಗೆದ್ದರು.

ಶನಿವಾರ ನಡೆದ ಇಂಡೋನೇಷ್ಯಾ ಮಾಸ್ಟರ್ಸ್ 2023 ರ ಸೆಮಿಫೈನಲ್‌ನಲ್ಲಿ ಕಿರಣ್ ಜಾರ್ಜ್ 23-21, 16-21, 21-8 ರಲ್ಲಿ ವಿಶ್ವದ 124 ಮತ್ತು 2014 ರ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಟಾಮಿ ಸುಗಿಯಾರ್ಟೊ ವಿರುದ್ಧ ಗೆದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com