ಡೊನಾಲ್ಡ್ ಟ್ರಂಪ್ ಜತೆ ಧೋನಿ
ಡೊನಾಲ್ಡ್ ಟ್ರಂಪ್ ಜತೆ ಧೋನಿ

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಗಾಲ್ಫ್ ಆಡಿದ ಎಂಎಸ್ ಧೋನಿ!

ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಟೆನಿಸ್ ಪಂದ್ಯವನ್ನು ಆನಂದಿಸಿದ ಒಂದು ದಿನದ ನಂತರ, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ...
Published on

ನವದೆಹಲಿ: ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಟೆನಿಸ್ ಪಂದ್ಯವನ್ನು ಆನಂದಿಸಿದ ಒಂದು ದಿನದ ನಂತರ, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಒಂದು ಸುತ್ತಿನ ಗಾಲ್ಫ್ ಆಟ ಆಡಿದ್ದಾರೆ.

ದುಬೈ ಮೂಲದ ಉದ್ಯಮಿ ಹಿತೇಶ್ ಸಾಂಘ್ವಿ, ನ್ಯೂಜೆರ್ಸಿಯ ಟ್ರಂಪ್ ನ್ಯಾಷನಲ್ ಗಾಲ್ಫ್ ಕ್ಲಬ್ ಬೆಡ್‌ಮಿನ್‌ಸ್ಟರ್‌ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರೊಂದಿಗೆ ಧೋನಿ ಗಾಲ್ಫ್ ಆಟವಾಡಿದ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಧೋನಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಟ್ರಂಪ್ ಸ್ವಲ್ಪ ಹೊತ್ತು ಮಾತನಾಡಿದ್ದಾರೆ. ಕ್ರಿಕೆಟ್ ವಿಷಯಗಳ ಬಗ್ಗೆ ವಿಚಾರಿಸಿದ್ದಾರೆ. ನಂತರ ಇಬ್ಬರೂ ಒಂದಷ್ಟು ಹೊತ್ತು ಗಾಲ್ಫ್ ಆಡಿದರು. ಇದೀಗ ಟ್ರಂಪ್ ಜೊತೆಗಿನ ಧೋನಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರದಿಗಳ ಪ್ರಕಾರ, ಟ್ರಂಪ್ ಧೋನಿಯನ್ನು ಗಾಲ್ಫ್ ಆಟಕ್ಕೆ ಆಹ್ವಾನಿಸಿದ್ದರು. ಧೋನಿ ರಜೆಗಾಗಿ ಅಮೆರಿಕದಲ್ಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

X
Open in App

Advertisement

X
Kannada Prabha
www.kannadaprabha.com