ವಿಮಾನದಲ್ಲಿ ಧೋನಿ 'Candy Crush' ವಿಡಿಯೋ ವೈರಲ್; ಕೇವಲ 3 ಗಂಟೆಯೊಳಗೆ 36 ಲಕ್ಷ ಮಂದಿಯಿಂದ ಡೌನ್ಲೋಡ್

ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವೀ ನಾಯಕ, ಭಾರತೀಯ ಕ್ರಿಕೆಟ್ ದಂತಕಥೆಗಳಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಮಾಡಿದ ಒಂದು ಕೆಲಸ ಇದೀಗ ವ್ಯಾಪಕ ವೈರಲ್ ಆಗಿದೆ.
ವಿಮಾನದಲ್ಲಿ ಧೋನಿ ವಿಡಿಯೋ ವೈರಲ್
ವಿಮಾನದಲ್ಲಿ ಧೋನಿ ವಿಡಿಯೋ ವೈರಲ್
Updated on

ಮುಂಬೈ: ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವೀ ನಾಯಕ, ಭಾರತೀಯ ಕ್ರಿಕೆಟ್ ದಂತಕಥೆಗಳಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಮಾಡಿದ ಒಂದು ಕೆಲಸ ಇದೀಗ ವ್ಯಾಪಕ ವೈರಲ್ ಆಗಿದೆ.

ಭಾರತ ಕಂಡ ಹೆಮ್ಮೆಯ ನಾಯಕ, ಆದರೆ ಅವರ ನಿವೃತ್ತಿಯ ಬಳಿಕ ಐಪಿಎಲ್ ನಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಜನಪ್ರಿಯತೆ ಇನ್ನೂ ಕುಸಿದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಧೋನಿ ಕ್ಯಾಂಡಿ ಕ್ರಶ್ ಆಡುತ್ತಿರುವ ವಿಡಿಯೋ ವೈರಲ್ ಆಗಿದ ಬೆನ್ನಲ್ಲೇ 3.6 ಮಿಲಿಯನ್ ಬಳಕೆದಾರರು ಕ್ಯಾಂಡಿ ಕ್ರಶ್ ಡೌನ್ ಲೋಡ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಅಲ್ಲದೆ ಧೋನಿ ಜೊತೆಗೆ ಕ್ಯಾಂಡಿಕ್ರಷ್ ಗೇಮ್ ಕೂಡ ಟ್ರೆಂಡಿಂಗ್ ನಲ್ಲಿದೆ.

ಇತ್ತೀಚೆಗೆ ಧೋನಿ ತಮ್ಮ ಪತ್ನಿ ಸಾಕ್ಷಿಯೊಂದಿಗೆ ಇಂಡಿಗೋ ವಿಮಾನದ ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಎಂಎಸ್ ಧೋನಿ ವಿಂಡೋ ಸೀಟ್ ನಲ್ಲಿ ಕೂತಿದ್ದರು. ಧೋನಿ ಅಭಿಮಾನಿ ಗಗನಸಖಿ ಒಂದು ಟ್ರೇನಲ್ಲಿ ಚಾಕೋಲೇಟ್ ಸೇರಿದಂತೆ ಇನ್ನಿತರ ತಿನಿಸುಗಳೊಂದಿಗೆ ಧೋನಿಯ ಬಳಿ ತೆಗೆದುಕೊಂಡು ಹೋಗುತ್ತಾರೆ. ಧೋನಿ ಗಗನಸಖಿಯಿಂದ ಚಾಕೊಲೇಟ್ ಸ್ವೀಕರಿಸಿ ಥ್ಯಾಂಕ್ಸ್ ಹೇಳುತ್ತಾರೆ.

ಇದೇ ವೇಳೆ ಗಗನ ಸಖಿ ಮತ್ತಷ್ಟು ಚಾಕೊಲೇಟ್ ತೆಗೆದುಕೊಳ್ಳುವಂತೆ ಮನವಿ ಮಾಡುತ್ತಾರೆ. ಆದರೆ ಧೋನಿ ಇಲ್ಲ ನನಗೆ ಒಂದು ಸಾಕು ಎಂದು ವಿನಮ್ರವಾಗಿ ಹೇಳುತ್ತಾರೆ. ಇದರ ಬೆನ್ನಲ್ಲೇ ಅವರ ಟ್ಯಾಬ್ ನಲ್ಲಿ ಧೋನಿ ಕ್ಯಾಂಡಿ ಕ್ರಶ್ ಗೇಮ್ ಆಡಿದ್ದು, ವಿಡಿಯೋ ಭಾರಿ ವೈರಲ್ ಆಗಿದೆ. ಇದನ್ನು ಗಮನಿಸಿದ ಅವರ ಅಭಿಮಾನಿಗಳು ನಾನು ಇನ್ನು ಕ್ಯಾಂಡಿ ಕ್ರಶ್ ಆಡುತ್ತೇನೆ ಎಂದು ಬರೆದು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಹುತೇಕ ಅಭಿಮಾನಿಗಳು ಕ್ಯಾಂಡಿ ಕ್ರಶ್ ಡೌನ್ಲೋಡ್ ಮಾಡಿದ್ದಾರೆ. 

ವಿಡಿಯೋ ವೈರಲ್ ಆದ ಬೆನ್ನಲ್ಲೇ 3.6 ಮಿಲಿಯನ್ ಬಳಕೆದಾರರು ಕ್ಯಾಂಡಿ ಕ್ರಶ್ ಡೌನ್ ಲೋಡ್ ಮಾಡಿದ್ದಾರೆ ಎನ್ನಲಾಗಿದೆ. ಧೋನಿ, ವೀಡಿಯೊ ಗೇಮ್ ಗಳ ಕಟ್ಟಾ ಅಭಿಮಾನಿ ಕೂಡ. ಧೋನಿ ಕಾಲ್ ಆಫ್ ಡ್ಯೂಟಿ, ಫಿಫಾ ಮತ್ತು ಪಬ್ಜಿ ಆಡುವುದಕ್ಕೆ ಇಷ್ಟ ಪಡುತ್ತಾರೆ. ಈ ತಿಂಗಳ ಆರಂಭದಲ್ಲಿ, ಭಾರತದ ಮಾಜಿ ನಾಯಕ ಮುಂಬೈ ಆಸ್ಪತ್ರೆಯಲ್ಲಿ ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com