
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಗುರುವಾರ (ಆಗಸ್ಟ್1ರಂದು) ಭಾರತಕ್ಕೆ ಆಘಾತ ಎದುರಾಗಿದ್ದು, ಪದಕದ ಭರವರಸೆ ಮೂಡಿಸಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸೋಲಿನ ಮೂಲಕ ಟೂರ್ನಿಯಿಂದಲೇ ಔಟ್ ಆಗಿದ್ದಾರೆ.
ಲಾ ಚಾಪೆಲ್ ಅರೆನಾದ ಕೋರ್ಟ್ 3ರಲ್ಲಿ ನಡೆದ ಪಂದ್ಯದಲ್ಲಿ ಚೀನಾದ 6ನೇ ಶ್ರೇಯಾಂಕದ ಹಿ ಬಿಂಗ್ ಜಿಯಾವೊ ವಿರುದ್ಧ ಪಿವಿ ಸಿಂಧು 19-21, 14-21 ಅಂತರದಲ್ಲಿ ಸೋಲು ಕಂಡಿದ್ದಾರೆ.
ಇದೇ ಮೈದಾನದಲ್ಲಿ ಸಾತ್ವಿಕ್-ಚಿರಾಗ್ ಜೋಡಿ 19-21, 14-21 ಅಂತರದಲ್ಲಿ ಸೋತಿತ್ತು. ಪ್ಯಾರಿಸ್ನಲ್ಲಿ ಐತಿಹಾಸಿಕ ಮೂರನೇ ಪದಕದ ನಿರೀಕ್ಷೆಯಲ್ಲಿದ್ದ ಸಿಂಧು ಗುರುವಾರ 6ನೇ ಶ್ರೇಯಾಂಕದ ಆಟಗಾರ್ತಿಗೆ ತಲೆಬಾಗಿದ್ದಾರೆ.
ಸಿಂಧು ತಮ್ಮ ವೃತ್ತಿಜೀವನದಲ್ಲಿ ಈ ಹಿಂದೆ ಸ್ಪರ್ಧಿಸಿದ್ದ ಎರಡು ಒಲಿಂಪಿಕ್ಸ್ಗಳಲ್ಲಿ ಪದಕ ಗೆದ್ದಿದ್ದು, ಈ ಬಾರಿ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಹ್ಯಾಟ್ರಿಕ್ ಕನಸು ನುಚ್ಚು ನೂರಾಗಿದೆ. ಸಿಂಧು ಅವರ ಸೋಲು ಭಾರತೀಯ ನಿಯೋಗಕ್ಕೆ ನಿರಾಸೆ ತಂದಿತು.
ಇನ್ನು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕಕ್ಕಾಗಿ ಹೋರಾಡಲು ಭಾರತವು ಈಗ ಬ್ಯಾಡ್ಮಿಂಟನ್ ತಂಡದಲ್ಲಿ ಲಕ್ಷ್ಯ ಸೇನ್ ಮಾತ್ರ ಉಳಿದುಕೊಂಡಿದ್ದಾರೆ. ಆಗಸ್ಟ್ 2ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ನಲ್ಲಿ ಲಕ್ಷ್ಯ ಅವರು ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ಅವರನ್ನು ಎದುರಿಸಲಿದ್ದಾರೆ.
Advertisement