
ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಏಷ್ಯನ್ ಗೇಮ್ಸ್ ಚಾಂಪಿಯನ್‌ಗಳು ಮತ್ತು ಪದಕದ ನಿರೀಕ್ಷೆ ಮೂಡಿಸಿದ್ದ ಭಾರತದ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವುಯಿ ಯಿಕ್ ವಿರುದ್ಧ ಸೋಲು ಕಂಡಿದ್ದು ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಮತ್ತು ವಿಶ್ವದ ಐದನೇ ಶ್ರೇಯಾಂಕದ ಜೋಡಿ ಸಾತ್ವಿಕ್ ಮತ್ತು ಚಿರಾಗ್ ಅವರು ವಿಶ್ವದ ಏಳನೇ ಶ್ರೇಯಾಂಕದ ಚಿಯಾ ಮತ್ತು ಸೋಹ್ ಜೋಡಿಯ ವಿರುದ್ಧ 64 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21-13, 14-21, 16-21 ರಲ್ಲಿ ಸೋಲು ಕಂಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತರಾದ ಚಿಯಾ ಮತ್ತು ಸೋಹ್ ವಿರುದ್ಧದ 12 ಪಂದ್ಯಗಳಲ್ಲಿ ಭಾರತೀಯ ಜೋಡಿಯ ಒಂಬತ್ತನೇ ಸೋಲು ಇದಾಗಿದೆ.
Advertisement