Olympics 2024: Javelin Throw ಫೈನಲ್ ಪಂದ್ಯದಲ್ಲಿ Neeraj Chopra ಗೆ ಬೆಳ್ಳಿ ಪದಕ

ಪಾಕಿಸ್ತಾನದ ಅರ್ಶದ್ ನದೀಮ್ ಮೊದಲ ಪ್ರಯತ್ನದಲ್ಲೇ 92.97 ಮೀಟರ್ ಭರ್ಜಿ ಎಸೆದು ಒಲಿಂಪಿಕ್ಸ್ ದಾಖಲೆಯನ್ನು ಮುರಿದು, ಚಿನ್ನದ ಪದಕಕ್ಕೆ ಪ್ರಬಲ ಪೈಪೋಟಿ ನೀಡಿದ್ದರು.
Neeraj chopra
ನೀರಜ್ ಚೋಪ್ರಾonline desk
Updated on

ಪ್ಯಾರಿಸ್: ತೀವ್ರ ಕುತೂಹಲ, ನಿರೀಕ್ಷೆಗಳಿದ್ದ ಒಲಿಂಪಿಕ್ಸ್ 2024 ರ ಜಾವೆಲಿನ್ ಥ್ರೋ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದಾರೆ.

ಮೊದಲ ಪ್ರಯತ್ನದಲ್ಲಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಕಾಲು ಗೆರೆ ತಾಗಿದ್ದರ ಪರಿಣಾಮ ಫೌಲ್ ಆಗಿ ವಿಫಲರಾಗಿದ್ದರು. ಆದರೆ 2ನೇ ಪ್ರಯತ್ನದಲ್ಲಿ 89.45 ಮೀಟರ್ ಗಳಿಗೆ ಭರ್ಜಿ ಎಸೆದಿದ್ದರು. 3ನೇ ಪ್ರಯತ್ನದಲ್ಲಿ ಮತ್ತೆ ಫೌಲ್ ಆಗಿದ್ದರು.

ಪಾಕಿಸ್ತಾನದ ಅರ್ಶದ್ ನದೀಮ್ ಮೊದಲ ಪ್ರಯತ್ನದಲ್ಲೇ 92.97 ಮೀಟರ್ ಭರ್ಜಿ ಎಸೆದು ಒಲಿಂಪಿಕ್ಸ್ ದಾಖಲೆಯನ್ನು ಮುರಿದು, ಚಿನ್ನದ ಪದಕಕ್ಕೆ ಪ್ರಬಲ ಪೈಪೋಟಿ ನೀಡಿದ್ದರು. ಈ ನಂತರದ ಸ್ಥಾನದಲ್ಲಿ ನೀರಜ್ ಚೋಪ್ರಾ ಇದ್ದರು. 3,4,5 ನೇ ಪ್ರಯತ್ನದಲ್ಲಿಯೂ ನೀರಜ್ ಚೋಪ್ರಾ ಫೌಲ್ ಆದರು. ಜರ್ಮನಿಯ ಜೂಲಿಯನ್ ವೆಬರ್ 87.33 ಮೀಟರ್ ಭರ್ಜಿ ಎಸೆಯುವ ಮೂಲಕ 3 ನೇ ಸ್ಥಾನದಲ್ಲಿದ್ದರು.

ಅರ್ಷದ್ ನದೀಮ್ ತಮ್ಮ 2ನೇ ಪ್ರಯತ್ನದ ಕೊನೆಯ ಎಸೆತದಲ್ಲಿ 84.47 ಮೀಟರ್ ಗಳಿಗೆ ಭರ್ಜಿ ಎಸೆದು, ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಫೈನಲ್ ನಲ್ಲಿ 12 ದೇಶಗಳ ಕ್ರೀಡಾಪಟುಗಳು ಸ್ಪರ್ಧಿಸಿದ್ದರು.

Neeraj chopra
Olympics 2024: ಭಾರತ ಹಾಕಿ ತಂಡಕ್ಕೆ ಕಂಚಿನ ಪದಕ, ಸ್ಪೇನ್ ವಿರುದ್ಧ 2-1 ಗೋಲು ಗೆಲುವು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com