ಪ್ಯಾರಿಸ್: ದೇಹದ ತೂಕ 100 ಗ್ರಾಂ ಹೆಚ್ಚಾಗಿದೆ ಎಂಬ ಕಾರಣ ನೀಡಿ ತಮ್ಮನ್ನು ಅನರ್ಹಗೊಳಿಸಿರುವ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್(ಯುಡಬ್ಲ್ಯೂಡಬ್ಲ್ಯು)ನ ವಿವಾದಾತ್ಮಕ ನಿರ್ಧಾರ ಪ್ರಶ್ನಿಸಿ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್(ಸಿಎಎಸ್) ಅಂಗೀಕರಿಸಿದೆ.
ವಿನೇಶ್ ಫೋಗಟ್ ಅವರ ಅರ್ಜಿಗೆ ಸಂಬಂಧಿಸಿದಂತೆ ಒಲಿಂಪಿಕ್ಸ್ ಕ್ರೀಡಾಕೂಟ ಮುಕ್ತಾಯವಾಗುವ ಮುನ್ನ ನಿರ್ಧಾರ ಪ್ರಕಟಿಸುವುದಾಗಿ ಸಿಎಎಸ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 2024 ರ ಒಲಿಂಪಿಕ್ಸ್ ನಲ್ಲಿ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿ ಚಿನ್ನದ ಆಸೆ ಚಿಗುರಿಸಿದ್ದ ವಿನೀಶ್ ಫೋಗಟ್ ಅವರನ್ನು ತೂಕದ ಕಾರಣ ನೀಡಿ ಅನರ್ಹಗೊಳಿಸಲಾಗಿದ್ದು, ಇದನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದು, ಅವರ ಅರ್ಜಿಯನ್ನು ಪರಿಗಣಿಸಲಾಗಿದೆ ಎಂದು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ ತಿಳಿಸಿದೆ.
ಯುಡಬ್ಲ್ಯೂಡಬ್ಲ್ಯುನ ವಿವಾದಾತ್ಮಕ ನಿರ್ಧಾರವನ್ನು ರದ್ದುಪಡಿಸಬೇಕು ಮತ್ತು, ಅಂತಿಮ ಪಂದ್ಯಕ್ಕು ಮೊದಲು ಹೊಸ ತೂಕ ಮತ್ತು ಭಾಗವಹಿಸುವಿಕೆಗೆ ಅರ್ಹತೆಯನ್ನು ಘೋಷಿಸಬೇಕು ಮತ್ತು ತಮಗೆ ಬೆಳ್ಳಿ ಪದಕ ನೀಡಬೇಕು ಎಂದು ಫೋಗಟ್ ಅವರು ಮನವಿ ಮಾಡಿರುವುದಾಗಿ ಸಿಎಎಸ್ ಹೇಳಿದೆ.
ಈ ವಿಷಯದ ತುರ್ತು ವಿಚಾರಣೆಯ ಅಗತ್ಯತ ಹೊರತಾಗಿಯೂ, ಯುಡಬ್ಲ್ಯೂಡಬ್ಲ್ಯೂ ಅವರ ವಾದವನ್ನು ಕೇಳುವ ಅಗತ್ಯತೆಯಿಂದಾಗಿ ನಿರ್ಧಾರವನ್ನು ಗಂಟೆಯೊಳಗೆ ನೀಡಲು ಸಾಧ್ಯವಿಲ್ಲ ಎಂದು ಸಿಎಎಸ್ ಹೇಳಿದೆ.
ವಿನೇಶ್ ಅವರು ʻತುರ್ತು ಮಧ್ಯಂತರ ಕ್ರಮʼಕ್ಕೆ ವಿನಂತಿಸಿಲ್ಲ. ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಗೆ ಅರ್ಜಿ ಸಲ್ಲಿಸಿದ್ದಾರೆ. ಮಹಿಳಾ ಫ್ರೀಸ್ಟೈಲ್ 50 ಕೆಜಿ ಸ್ಪರ್ಧೆಯ ಚಿನ್ನದ ಪದಕದ ಪಂದ್ಯದ ಮೊದಲು ಎರಡನೇ ತೂಕ, ಅದೇ ದಿನ ಆಗಬೇಕಿತ್ತು. ಒಂದು ಗಂಟೆ ಯೊಳಗೆ ಅರ್ಹತೆ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಪ್ರಕ್ರಿಯೆ ಚಾಲ್ತಿಯಲ್ಲಿದೆ ಮತ್ತು ಅರ್ಜಿದಾರರು ಹಂಚಿಕೊಂಡ ಬೆಳ್ಳಿ ಪದಕವನ್ನು ನೀಡಬೇಕೆಂದು ವಿನಂತಿಸಿದ್ದಾರೆ ಎಂದು ಸಿಎಎಸ್ ತಿಳಿಸಿದೆ.
ಆಸ್ಟ್ರೇಲಿಯದ ಡಾ. ಅನ್ನಾಬೆಲ್ ಬೆನೆಟ್ ಏಕೈಕ ಮಧ್ಯಸ್ಥಿಕೆದಾರ ಆಗಿರಲಿದ್ದು, ಅವರು ವಿಚಾರಣೆ ನಡೆಸುತ್ತಾರೆ. ಲಿಂಪಿಕ್ ಕ್ರೀಡಾಕೂಟ ಮುಕ್ತಾಯವಾಗುವ ಮೊದಲು ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಸಿಎಎಸ್ ಹೇಳಿದೆ.
Advertisement