ನಾಚಿಕೆಗೇಡಿನ ಸಂಗತಿ: ವಿನೇಶ್ ಸ್ವಾಗತಿಸುವ ಭರದಲ್ಲಿ 'ತಿರಂಗ' ಪೋಸ್ಟರ್‌ ಮೇಲೆ ಕಾಲಿಟ್ಟ ಬಜರಂಗ್ ಪುನಿಯಾ, ವಿಡಿಯೋ ವೈರಲ್!

ಭವ್ಯ ಸ್ವಾಗತ ಸಮಾರಂಭದ ಭಾಗವಾಗಿ ವಿನೇಶ್ ಫೋಗಟ್ ಅವರನ್ನು ಸ್ವಾಗತಿಸಲು ಸಹ ಭಾರತೀಯ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.
ಬಜರಂಗ್ ಪುನಿಯಾ
ಬಜರಂಗ್ ಪುನಿಯಾ
Updated on

ನವದೆಹಲಿ: ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಅದಕ್ಕೆ ಕಾರಣ ವಿನೇಶ್ ಫೋಗಟ್ ಅವರನ್ನು ಸ್ವಾಗತಿಸುವಾಗ ಕಾರಿನ ಬಾನೆಟ್‌ನಲ್ಲಿ ತ್ರಿವರ್ಣ ಧ್ವಜದ ಮೇಲೆ ಬಜರಂಗ್ ನಿಂತಿರುವುದು. ಇದನ್ನು ಸಾಮಾಜಿಕ ಜಾಲತಾಣ ಬಳಕೆದಾರರು ನಾಚಿಕೆಗೇಡಿನ ಸಂಗತಿ ಎಂದು ಕರೆದಿದ್ದಾರೆ.

ವಾಸ್ತವವಾಗಿ, ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್ ಗೆ ಹೋಗಿದ್ದ ಕುಸ್ತಿಪುಟ ವಿನೇಶ್ ಫೋಗಟ್ 100 ಗ್ರಾಂ ತೂಕ ಹೆಚ್ಚಾಗಿದೆ ಎಂದು ಅವರನ್ನು ಅನರ್ಹಗೊಳಿಸಲಾಗಿತ್ತು. ಇದರ ವಿರುದ್ಧ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಮೇಲ್ಮನವಿ ಸಲ್ಲಿಸಿದ್ದ ವಿನೇಶ್ ಬೆಳ್ಳಿ ಪದಕಕ್ಕಾಗಿ ಮನವಿ ಮಾಡಿದ್ದರು. ಈ ಅರ್ಜಿಯನ್ನು ಸಿಎಎಸ್ ತಿರಸ್ಕರಿಸಿದ್ದರಿಂದ ಭಾರತಕ್ಕೆ ಬಂದ ವಿನೇಶ್ ಗೆ ಭವ್ಯವಾದ ಸ್ವಾಗತವನ್ನು ನೀಡಲಾಯಿತು.

ಭವ್ಯ ಸ್ವಾಗತ ಸಮಾರಂಭದ ಭಾಗವಾಗಿ ವಿನೇಶ್ ಫೋಗಟ್ ಅವರನ್ನು ಸ್ವಾಗತಿಸಲು ಸಹ ಭಾರತೀಯ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು. ವಿನೇಶ್ ಅವರ ಭವ್ಯ ಸ್ವಾಗತದ ನಡುವೆ ಕಾರಿನ ಮೇಲೆ ಅಳವಡಿಸಿದ್ದ 'ತಿರಂಗಾ' ಪೋಸ್ಟರ್ ಮೇಲೆ ಬಜರಂಗ್ ಪುನಿಯಾ ನಿಂತಿರುವುದು ವಿವಾದಕ್ಕೆ ಕಾರಣವಾಗಿದೆ.

ಬಜರಂಗ್ ಪುನಿಯಾ
ಭಾರತಕ್ಕೆ ಮರಳುತ್ತಿದ್ದಂತೆ 'ಕಣ್ಣೀರಿಟ್ಟ' ವಿನೇಶ್ ಪೋಗಟ್: ದೆಹಲಿ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ

ವೀಡಿಯೊವೊಂದರಲ್ಲಿ, ಭಜರಂಗ್ ಪುನಿಯಾ ಕಾರಿನ ಬಾನೆಟ್ ಮೇಲೆ ನಿಂತಿರುವಂತೆ ಕಂಡುಬಂದಿದೆ. ಅಲ್ಲಿ 'ತಿರಂಗಾ' ಪೋಸ್ಟರ್ ಅನ್ನು ಅಳವಡಿಸಲಾಗಿತ್ತು. ಪೂನಿಯಾ ಅಜಾಗರೂಕತೆಯಿಂದ 'ತಿರಂಗಾ' ಪೋಸ್ಟರ್ ಮೇಲೆ ಕಾಲಿಟ್ಟು ಅಲ್ಲಿ ನೆರೆದಿದ್ದ ಜನರನ್ನು ಮತ್ತು ಮಾಧ್ಯಮವನ್ನು ನಿಭಾಯಿಸುತ್ತಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ತ್ರಿವರ್ಣ ಧ್ವಜದ ಪೋಸ್ಟರ್ ಮೇಲೆ ನಿಂತು ಭಾರತದ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಭಾರತೀಯ ಕುಸ್ತಿಪಟು ಟೀಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com