
ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್ ನಿಂದ ಕುಸ್ತಿಪಟು ವಿನೇಶ್ ಫೋಗಟ್ ಅರ್ನಹಗೊಂಡಿದ್ದರು. ಈ ಸಂಬಂಧ ಮೇಲ್ಮನವಿ ಸಲ್ಲಿಸಿ ಬೆಳ್ಳಿ ಪದಕಕ್ಕೆ ಮಾಡಿದ್ದ ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಮಂಡಳಿ (CAS) ತಿರಸ್ಕರಿಸಿದ ಬಳಿಕ ಸ್ವದೇಶಕ್ಕೆ ಮರಳಿದ ಕುಸ್ತಿಪಟುವಿಗೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯವಾದ ನೀಡಲಾಯಿತು.
ದೆಹಲಿಯಿಂದ ಸ್ವಗ್ರಾಮ ಹರಿಯಾಣದ ಬಲಾಲಿಗೆ ತೆರಳಿದ್ದ ವಿನೇಶ್ ಫೋಗಟ್ ಗೆ ಇಂದು ಗ್ರಾಮದ ಹಿರಿಯರು ಆಕೆಗೆ ಚಿನ್ನದ ಪದಕ ನೀಡಿ ಗೌರವಿಸಿದರು. ಇನ್ನು ಅಭಿನಂದನಾ ಸಮಾರಂಭದಲ್ಲಿ, ವಿನೇಶ್ ಫೋಗಟ್ ತುಂಬಾ ದಣಿದಂತೆ ಕಾಣುತ್ತಿದ್ದು ಕುರ್ಚಿಯಲ್ಲಿ ಕುಳಿದಿದ್ದ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಪ್ರಜ್ಞೆ ತಪ್ಪಿದ್ದ ವಿನೇಶ್ ಪೋಗಟ್ ಗೆ ಸಹ ಕುಸ್ತಿಪಟು ಬಜರಂಗ್ ಪೂನಿಯಾ ನೀರನ್ನು ನೀಡಿ ಆರೈಕೆ ಮಾಡಿದರು. ಕೆಲ ಸಮಯದ ಬಳಿಕ ವಿನೇಶ್ ಚೇತರಿಸಿಕೊಂಡರು.
ಇದೇ ವೇಳೆ ಮಾತನಾಡಿದ ವಿನೇಶ್ ಪೋಗಟ್, 'ನಾನು ಇಡೀ ಕುಟುಂಬಕ್ಕೆ ಧನ್ಯವಾದ ಹೇಳುತ್ತೇನೆ. ನಾನು ಬೆಳಿಗ್ಗೆ 10 ಗಂಟೆಗೆ ವಿಮಾನ ನಿಲ್ದಾಣದಿಂದ ಹೊರಬಂದೆ. ಈಗ ಸಮಯ 1.30 ಆಗಿದೆ. ಈ ರೀತಿಯ ಪ್ರೀತಿ ಮತ್ತು ಗೌರವಕ್ಕೆ ನಾನು ಅರ್ಹನೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು ಇಲ್ಲಿ ಹುಟ್ಟಿದ್ದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ನಾನು ಪ್ರೀತಿ ಮತ್ತು ಗೌರವವನ್ನು ಹಿಂದಿರುಗಿಸಿದರೆ ನಾನು ಸಂತೋಷವಾಗಿರುತ್ತೇನೆ. ಪ್ರತಿ ಮನೆಯಿಂದಲೂ ಒಬ್ಬ ಕುಸ್ತಿಪಟು ಹೊರಹೊಮ್ಮಬೇಕು. ನನ್ನ ದಾಖಲೆಗಳನ್ನು ಮುರಿಯಬೇಕೆಂದು ನಾನು ಬಯಸುತ್ತೇನೆ. ಅವರಿಗೆ ನಿಮ್ಮ ಬೆಂಬಲ ಸಿಗಬೇಕು. ಈ ದೇಶಕ್ಕೆ ಮತ್ತು ಈ ಗ್ರಾಮಕ್ಕೆ ನಾನು ಸದಾ ಋಣಿಯಾಗಿರುತ್ತೇನೆ. ನಾನು ಇಲ್ಲಿನ ಕುಸ್ತಿಪಟುಗಳಿಗೆ ಸೇವೆ ಸಲ್ಲಿಸಲು ಬಯಸುತ್ತೇನೆ. ಅವನು ನನಗಿಂತ ಹೆಚ್ಚಿನ ಯಶಸ್ಸನ್ನು ಪಡೆಯಬೇಕೆಂದು ನಾನು ಬಯಸುತ್ತೇನೆ ಎಂದರು.
Advertisement