
ಅಮ್ಮಾನ್ (ಜೋರ್ಡಾನ್): ಅಂಡರ್-17 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 110 ಕೆಜಿ ಗ್ರೀಕೋ-ರೋಮನ್ ವಿಭಾಗದಲ್ಲಿ ಭಾರತದ ರೋನಕ್ ದಹಿಯಾ ಅವರು ಕಂಚಿನ ಪದಕ ಗೆದ್ದಿದ್ದಾರೆ.
ರೋನಕ್ ಅವರು ಟರ್ಕಿಯ ಎಮ್ರುಲ್ಲಾ ಕ್ಯಾಪ್ಕನ್ ವಿರುದ್ದ 6-1ರ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ.
ಇದಕ್ಕೂ ಮೊದಲು, ರೋನಕ್ ಸೆಮಿಫೈನಲ್‌ನಲ್ಲಿ ಹಂಗೇರಿಯ ಝೋಲ್ಟಾನ್ ಝಾಕೊ ವಿರುದ್ಧ ಸೋತಿದ್ದರು. ಈ ವಿಭಾಗದಲ್ಲಿ ಉಕ್ರೇನ್‌ನ ಇವಾನ್ ಯಾಂಕೋವ್‌ಸ್ಕಿ ಅವರು ಚಿನ್ನವನ್ನು ಗೆದ್ದರು, ಅವರು ತಾಂತ್ರಿಕ ಶ್ರೇಷ್ಠತೆಯ ಬಲದಿಂದ 13-4 ರಿಂದ ಸಿಜಾಕೊ ಅವರನ್ನು ಮಣಿಸಿದರು.
ಮತ್ತೊಬ್ಬ ಕುಸ್ತಿ ಪಟು ಸಾಯಿನಾಥ್ ಪಾರ್ಧಿ ಇನ್ನೆರಡು ಪಂದ್ಯ ಗೆದ್ದರೆ 51 ಕೆಜಿ ರಿಪಿಚೇಜ್‌ನಲ್ಲಿ ಭಾರತಕ್ಕೆ ಎರಡನೇ ಪದಕದ ಅವಕಾಶವಿದೆ.
ಸಾಯಿನಾಥ್ ಪಾರ್ಧಿ ಮೊದಲು ಯುನೈಟೆಡ್ ಸ್ಟೇಟ್ಸ್'ನ ಡೊಮಿನಿಕ್ ಮೈಕೆಲ್ ಮುನಾರೆಟ್ಟೊ ವಿರುದ್ಧ ಕಣಕ್ಕಿಳಿದಿದ್ದಾರೆ. ಈ ಪಂದ್ಯವನ್ನು ಗೆದ್ದರೆ ನಂತರ ಅರ್ಮೇನಿಯನ್ ಸರ್ಗಿಸ್ ಹರುತ್ಯುನಾನ್ ಮತ್ತು ಜಾರ್ಜಿಯಾದ ಯೂರಿ ಚಾಪಿಡ್ಜೆ ನಡುವಿನ ಪಂದ್ಯದ ವಿಜೇತರೊಂದಿಗೆ ಕಂಚಿನ ಪದಕದ ಪ್ಲೇ ಆಫ್‌ನಲ್ಲಿ ಸೆಣಸಾಟ ನಡೆಸಲಿದ್ದಾರೆ.
Advertisement