Paris Olympics: ನೀರಜ್ ಚೋಪ್ರಾ, ಪಿ ವಿ ಸಿಂಧು ಸೇರಿ ಭಾರತೀಯ ಅಥ್ಲಿಟ್ ಗಳೊಂದಿಗೆ ಸಂವಾದ; ಶುಭ ಕೋರಿದ ಪ್ರಧಾನಿ ಮೋದಿ

ಪ್ಯಾರಿಸ್ ಒಲಿಂಪಿಕ್ಸ್ ಇದೇ ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿದೆ. ಕಳೆದ ಟೋಕಿಯೋ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಐತಿಹಾಸಿಕ ಚಿನ್ನದ ಪದಕ ಸೇರಿದಂತೆ ಭಾರತ ಏಳು ಪದಕಗಳನ್ನು ಗಳಿಸಿತ್ತು.
ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಭಾರತೀಯ ಅಥ್ಲಿಟ್ ಗಳೊಂದಿಗೆ ಪ್ರಧಾನಿ ಮೋದಿ ಸಂವಾದ
ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಭಾರತೀಯ ಅಥ್ಲಿಟ್ ಗಳೊಂದಿಗೆ ಪ್ರಧಾನಿ ಮೋದಿ ಸಂವಾದ
Updated on

ನವದೆಹಲಿ: 2036ರಲ್ಲಿ ಒಲಿಂಪಿಕ್ಸ್‌ ಪಂದ್ಯದ ಆತಿಥ್ಯ ವಹಿಸುವ ಭಾರತದ ಪ್ರಯತ್ನ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ತಿಂಗಳ ಪ್ಯಾರಿಸ್ ಒಲಿಂಪಿಕ್ಸ್ ಗೇಮ್ಸ್‌ ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳು ಫ್ರೆಂಚ್ ರಾಜಧಾನಿ ಮಾಡಿರುವ ವ್ಯವಸ್ಥೆಗಳ ಬಗ್ಗೆ ಹಂಚಿಕೊಳ್ಳುವಂತೆ ಕೋರಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಭಾರತೀಯ ಕ್ರೀಡಾಪಟುಗಳ ಜೊತೆ ವೈಯಕ್ತಿಕವಾಗಿ ಮತ್ತು ವಿಡಿಯೊ ಸಂವಾದ ಮೂಲಕ ಕಳೆದ ರಾತ್ರಿ ಮಾಡುಪ್ಯಾರಿಸ್‌ಗೆ ಹೋಗುವ ಕ್ರೀಡಾಪಟುಗಳೊಂದಿಗೆ ಸಂವಾದದಲ್ಲಿ, ಫ್ರಾನ್ಸ್ ನಲ್ಲಿ ಒಲಿಂಪಿಕ್ ವೇಳೆ ಮಾಡಿಕೊಂಡ ವ್ಯವಸ್ಥೆಗಳ ಬಗ್ಗೆ ಅನಿಸಿಕೆ, ಮಾಹಿತಿ ಹಂಚಿಕೊಂಡರೆ ಇಲ್ಲಿ 2036ರಲ್ಲಿ ಆಯೋಜಿಸುವ ಒಲಿಂಪಿಕ್ಸ್ ಗೆ ಬಹಳ ಅನುಕೂಲವಾಗುತ್ತದೆ ಎಂದರು.

ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಭಾರತೀಯ ಅಥ್ಲಿಟ್ ಗಳೊಂದಿಗೆ ಪ್ರಧಾನಿ ಮೋದಿ ಸಂವಾದ
ಖೇಲ್ ರತ್ನ ಪ್ರಶಸ್ತಿಯನ್ನು ಫುಟ್‌ಪಾತ್‌ನಲ್ಲಿ ಬಿಟ್ಟು ಹೋಗಿದ್ದ ಕುಸ್ತಿಪಟು ವಿನೇಶ್ ಫೋಗಟ್‌ಗೆ ಸಿಕ್ತು ಪ್ಯಾರಿಸ್ ಒಲಿಂಪಿಕ್ಸ್‌ ಟಿಕೆಟ್!

ನಾವು 2036 ರಲ್ಲಿ ಒಲಿಂಪಿಕ್ಸ್ ಆಯೋಜಿಸುತ್ತಿದ್ದೇವೆ, ಇದು ಭಾರತಕ್ಕೆ ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿ ಮೂಲಸೌಕರ್ಯಗಳನ್ನು ಸಿದ್ಧಪಡಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ರಾಷ್ಟ್ರೀಯ ಪುರುಷರ ಹಾಕಿ ತಂಡ, ಶೂಟಿಂಗ್ ತಂಡವು ಭಾಗವಹಿಸಿದ್ದ ಸಂವಾದದಲ್ಲಿ ಅವರು ಹೇಳಿದರು. ನೀರಜ್ ಚೋಪ್ರಾ ಅವರಂತಹ ಬಾಕ್ಸರ್‌ಗಳು ಮತ್ತು ಟ್ರ್ಯಾಕ್ ಮತ್ತು ಫೀಲ್ಡ್ ತಾರೆಗಳು ವಿಡಿಯೊ ಸಂವಾದದಲ್ಲಿ ಭಾಗವಹಿಸಿದ್ದು, ಸಂವಾದದ ಸಂಪೂರ್ಣ ವೀಡಿಯೊವನ್ನು ಪ್ರಧಾನ ಮಂತ್ರಿ ಕಚೇರಿ ಹಂಚಿಕೊಂಡಿದೆ.

ನೀವು ಫ್ರಾನ್ಸ್ ಗೆ ಹೋದ ಮೇಲೆ ನಿಮ್ಮ ಕಾರ್ಯಕ್ರಮದ ಮಧ್ಯೆ ನಾನು ನಿಮಗೆ ತೊಂದರೆ ಕೊಡಲು ಇಷ್ಟಪಡುವುದಿಲ್ಲ. ಆದರೆ ಅಲ್ಲಿನ ವ್ಯವಸ್ಥೆಗಳನ್ನು ಗಮನಿಸಿ ಇಲ್ಲಿ ಬಂದು ಹಂಚಿಕೊಳ್ಳಿ. ನೀವು ನೀಡುವ ಮಾಹಿತಿಗಳು 2036 ಕ್ಕೆ ನಾವು ಆಯೋಜಿಸಲು ಸಹಾಯವಾಗುತ್ತದೆ. ಹೇಗೆ ಒಲಿಂಪಿಕ್ ಸಂಘಟನೆ ಮಾಡಬೇಕೆಂದು ಗೊತ್ತಾಗುತ್ತದೆ ಎಂದರು.

ಪ್ಯಾರಿಸ್ ಒಲಿಂಪಿಕ್ಸ್ ಇದೇ ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿದೆ. ಕಳೆದ ಟೋಕಿಯೋ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಐತಿಹಾಸಿಕ ಚಿನ್ನದ ಪದಕ ಸೇರಿದಂತೆ ಭಾರತ ಏಳು ಪದಕಗಳನ್ನು ಗಳಿಸಿತ್ತು. ಈ ವರ್ಷದ ಒಲಿಂಪಿಕ್ಸ್ ಗೆ 21 ಶೂಟರ್‌ಗಳು ಸೇರಿದಂತೆ 100 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾರತದಿಂದ ಅರ್ಹತೆ ಪಡೆದಿದ್ದಾರೆ.

ಒಲಿಂಪಿಕ್ ಪದಕ ವಿಜೇತರಾದ ಪಿವಿ ಸಿಂಧು, ಲೊವ್ಲಿನಾ ಬೊರ್ಗೊಹೈನ್ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸೇರಿದಂತೆ ಕೆಲವು ಕ್ರೀಡಾಪಟುಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸೇರಿಕೊಂಡರು. ಈ ಬಾರಿ ಹೆಚ್ಚು ಪದಕ ಗೆದ್ದು ತರುವಂತೆ ಹುರಿದುಂಬಿಸಿದರು.

ರಮಿತಾ ಜಿಂದಾಲ್ (ಏರ್ ರೈಫಲ್ ಶೂಟಿಂಗ್), ರೀತಿಕಾ ಹೂಡಾ (ಕುಸ್ತಿ), ಆಂಟಿಮ್ ಪಂಗಲ್ (ಕುಸ್ತಿ), ನಿಖತ್ ಜರೀನ್ (ಬಾಕ್ಸಿಂಗ್) ಹೀಗೆ ಇನ್ನೂ ಹಲವು ಚೊಚ್ಚಲ ಆಟಗಾರರೊಂದಿಗೆ ಮೋದಿ ಸಂವಾದ ನಡೆಸಿದರು.

ಒಲಿಂಪಿಕ್ ಸ್ಟಾರ್ ಅಥ್ಲೀಟ್ ನೀರಜ್ ಅವರು ಒಲಿಂಪಿಕ್ಸ್ ಮುಗಿದ ಮೇಲೆ ನಿಮ್ಮನ್ನು ಭೇಟಿ ಮಾಡಲು ಬರುವಾಗ ಚುರ್ಮಾ ತರುತ್ತೇನೆ ಎಂದು ಪ್ರಧಾನಿಗೆ ಹೇಳಿದರು. ಇದಕ್ಕೆ ಪ್ರಧಾನಿ ಮೋದಿ, "ಮುಝೆ ಆಪ್ಕೆ ಮಾ ಕೆ ಹಾಥ್ ಕಾ ಖಾನಾ ಹೈ" (ನಾನು ನಿಮ್ಮ ತಾಯಿ ತಯಾರಿಸಿದ ಚುರ್ಮಾ ತಿನ್ನಲು ಬಯಸುತ್ತೇನೆ) ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com