''ನೀವು ಟಚ್ ಕೂಡ ಮಾಡಲು ಸಾಧ್ಯವಿಲ್ಲ'': ಬೂಯಿಂಗ್ ಮಾಡಿದ ಪ್ರೇಕ್ಷಕರಿಗೆ ಬೆವರಿಳಿಸಿದ Novak Djokovic

ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ 60ನೇ ಗ್ರ್ಯಾಂಡ್ ಸ್ಲಾಮ್ ಕ್ವಾರ್ಟರ್-ಫೈನಲ್ ಪ್ರವೇಶಿಸಿದ ಸರ್ಬಿಯಾ ಟೆನ್ನಿಸ್ ಆಟಗಾರ ನೊವಾಕ್ ಜಾಕೋವಿಕ್ ಪ್ರೇಕ್ಷಕರಿಗೆ ಅವರ ಮಾತಿನ ಧಾಟಿಯಲ್ಲೇ ತಿರುಗೇಟು ನೀಡಿದರು.
Novak Djokovic
ನೊವಾಕ್ ಜಾಕೋವಿಕ್
Updated on

ಲಂಡನ್: ಪಂದ್ಯದ ವೇಳೆ ತಮ್ಮನ್ನು ಬೂಯಿಂಗ್ ಮಾಡಿದ ಪ್ರೇಕ್ಷಕರಿಗೆ ಸರ್ಬಿಯಾ ಟೆನ್ನಿಸ್ ಸೂಪರ್ ಸ್ಟಾರ್ ಆಟಗಾರ ನೊವಾಕ್ ಜಾಕೋವಿಕ್ ಮೈದಾನದಲ್ಲೇ ಬೆವರಿಳಿಸಿದ ಘಟನೆ All England Club ಟೆನ್ನಿಸ್ ಟೂರ್ನಿಯಲ್ಲಿ ಸೋಮವಾರ ನಡೆದಿದೆ.

ಸೋಮವಾರ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ 60ನೇ ಗ್ರ್ಯಾಂಡ್ ಸ್ಲಾಮ್ ಕ್ವಾರ್ಟರ್-ಫೈನಲ್ ಪ್ರವೇಶಿಸಿದ ಸರ್ಬಿಯಾ ಟೆನ್ನಿಸ್ ಆಟಗಾರ ನೊವಾಕ್ ಜಾಕೋವಿಕ್ ಪ್ರೇಕ್ಷಕರಿಗೆ ಅವರ ಮಾತಿನ ಧಾಟಿಯಲ್ಲೇ ತಿರುಗೇಟು ನೀಡಿದರು.

ಈ ಪಂದ್ಯದಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಜೊಕೊವಿಕ್ 15 ನೇ ಶ್ರೇಯಾಂಕದ ಹೊಲ್ಗರ್ ರೂನ್ ಅವರನ್ನು 6-3, 6-4, 6-2 ರಿಂದ ಸೋಲಿಸಿ ಟೂರ್ನಿಯ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದರು.

ಬೂಯಿಂಗ್ ಮಾಡಿದ ಪ್ರೇಕ್ಷಕರು

ಇನ್ನು ಈ ಪಂದ್ಯದ ವೇಳೆ ಜಾಕೋವಿಕ್ ಗೆ ಪ್ರೇಕ್ಷಕರಿಂದ ಹಲವು ಬಾರಿ ಮುಜುಗರದ ಸನ್ನಿವೇಶ ಎದುರಾಯಿತು. ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಪ್ರತೀ ಬಾರಿ ಜಾಕೋವಿಕ್ ಎದುರಾಳಿ ಆಟಗಾರನಿಗೆ ಅಂಕ ಬಿಟ್ಟುಕೊಟ್ಟಾಗ ಬೂಯಿಂಗ್ ಮಾಡುತ್ತಿದ್ದರು. ಇದರಿಂದ ಹಲವು ಬಾರಿ ಜಾಕೋವಿಕ್ ಕೆರಳಿದರಾದರೂ ಬಳಿಕ ತಮ್ಮನ್ನು ತಾವು ಸುಧಾರಿಸಿಕೊಂಡು ಪಂದ್ಯದತ್ತ ಗಮನ ಹರಿಸಿ ಭರ್ಜರಿ ಜಯ ದಾಖಲಿಸಿದರು.

ನೀವು ಟಚ್ ಕೂಡ ಮಾಡಲು ಸಾಧ್ಯವಿಲ್ಲ

ಪಂದ್ಯದ ಬಳಿಕ ನಡೆದ ಸಮಾರಂಭದಲ್ಲಿ ಇದೇ ವಿಚಾರವಾಗಿ ಮಾತನಾಡಿದ ಜಾಕೋವಿಕ್ ಪ್ರೇಕ್ಷಕರ ನಡೆಗೆ ವಿರೋಧ ವ್ಯಕ್ತಪಡಿಸಿದರು. ''ಈ ಪಂದ್ಯ ವೀಕ್ಷಣೆಗೆ ಟಿಕೆಟ್ ಖರೀದಿಸಿ ಕ್ರೀಡೆ ಮೇಲೆ ಗೌರವಿಂದ ಪಂದ್ಯವನ್ನು ಆನಂದಿಸಲು ಹಲವರು ಬಂದಿದ್ದಾರೆ. ಅವರಿಗೆ ನಾನು ಅಭಿನಂದನೆ ಹೇಳುತ್ತೇನೆ ಮತ್ತು ಅದನ್ನು ಪ್ರಶಂಸಿಸುತ್ತೇನೆ. ಆದರೆ ಬೂಯಿಂಗ್ ಮೂಲಕ ಆಟಗಾರರನ್ನು ಕೆಣಕಲು ಪ್ರಯತ್ನಿಸಿದ ಎಲ್ಲರಿಗೂ ನಾನು ಒಂದು ಮಾತು ಹೇಳಲು ಇಚ್ಚಿಸುತ್ತೇನೆ.

ಬೂಯಿಂಗ್ ನನಗೇನೂ ಹೊಸದಲ್ಲ. ನಾನು ನನ್ನ 20 ವರ್ಷಗಳ ವೃತ್ತಿ ಜೀವನದಲ್ಲಿ ನಾನಾ ಮೈದಾನದಲ್ಲಿ ನಾನಾ ರೀತಿಯ ಪರಿಸ್ಥಿತಿಗಳಲ್ಲಿ ಆಡಿದ್ದೇನೆ. ಇದಕ್ಕಿಂತಲೂ ಕಠಿಣಾತಿ ಕಠಿಣ ಪರಿಸ್ಥಿತಿಗಳಲ್ಲಿ ಆಡಿದ ಅನುಭವ ಇದೆ. ಹೀಗಾಗಿ ನೀವು ನಿಮ್ಮ ಬೂಯಿಂಗ್ ಮೂಲಕ ನನ್ನ ಟಕ್ ಕೂಡ ಮಾಡಲು ಸಾಧ್ಯವಿಲ್ಲ. ನನ್ನನ್ನು ಕೆಣಕಿ ಪಂದ್ಯ ಮೇಲೆ ಪರಿಣಾಮ ಬೀರಬಹುದು ಎಂದುಕೊಂಡರೆ ಅದು ನಿಮ್ಮ ಭ್ರಮೆ ಎಂದು ಅದೇ ಧಾಟಿಯಲ್ಲಿ ಉತ್ತರಿಸಿದ್ದಾರೆ.

ಈ ವೇಳೆ ನಿರೂಪಕ ರೂನ್ ರನ್ನು ಬೆಂಬಲಿಸಿ ಆ ರೀತಿ ಮಾಡಿದ್ದಾರೆ ಎಂದು ಹೇಳಿದರೂ ಇದಕ್ಕೆ ಒಪ್ಪದ ಜಾಕೋವಿಕ್ ಇಲ್ಲ... ರೂನ್ ರನ್ನು ಬೆಂಬಲಿಸಿ ಅದಕ್ಕೆ ನನ್ನ ವಿರೋಧವಿಲ್ಲ. ಆದರೆ ಎದುರಾಳಿ ಆಟಗಾರನನ್ನು ಕೆಣಕಬೇಡಿ. ರೂನ್ ರನ್ನು ಬೆಂಬಲಿಸಿದ್ದಕ್ಕಿಂತ ಹೆಚ್ಚಾಗಿ ನನಗೆ ಬೂಯಿಂಗ್ ಮಾಡಿದರು. ಆದರೆ ನಾನು ಇದಕ್ಕೆ ವಿಂಬಲ್ಡನ್ ಆಯೋಜಕರನ್ನು ದೂಷಿಸಲು ಸಾಧ್ಯವಿಲ್ಲ. ಬೂಯಿಂಗ್ ಮಾಡಿದರು ಎಂಬ ಕಾರಣಕ್ಕೆ ಇಡೀ ಜನ ಸಮೂಹವನ್ನು ಹೊರ ಹಾಕಲೂ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಗಳಿಗೆ ಆಟಗಾರರು ಮಾನಸಿಕವಾಗಿ ಸಿದ್ಧರಿರಬೇಕಾಗುತ್ತದೆ.. ನಿಜವಾದ ಕ್ರೀಡಾಭಿಮಾನಿಗಳನ್ನು ನಾನು ಗೌರವಿಸುತ್ತೇನೆ. ಆದರೆ ಯಾರೂ ಕೂಡ ಬೂಯಿಂಗ್ ಹೆಸರಲ್ಲಿ ''ತಮ್ಮ ಮಿತಿ''ಯನ್ನು ದಾಟಬಾರದು ಎಂದು ಜಾಕೋವಿಕ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com