ಬ್ಯಾಡ್ಮಿಂಟನ್ ಬಿಟ್ಟು ಟೆನಿಸ್‌ ಆಡಿದಿದ್ದರೆ ಹೆಚ್ಚಿನ ಯಶಸ್ಸು ಸಿಗುತ್ತಿತ್ತು: Saina Nehwal

ಬ್ಯಾಡ್ಮಿಂಟನ್​ ಎನ್ನುವುದು ಅಷ್ಟು ಸುಲಭದ ಆಟವಲ್ಲ. ಇಲ್ಲಿ ಉಸಿರು ತೆಗೆಯಲು ಕೂಡ ಕಷ್ಟಪಡಬೇಕು. ಇದು ಬ್ಯಾಡ್ಮಿಂಟನ್​ ಆಡಿದವರಿಗೆ ಮಾತ್ರ ಇದರ ಕಷ್ಟ ಅರಿವಾಗುತ್ತದೆ.
Saina Nehwal
ಸೈನಾ ನೆಹ್ವಾಲ್
Updated on

ನವದೆಹಲಿ: ಬ್ಯಾಡ್ಮಿಂಟನ್ ಬಿಟ್ಟು ಟೆನಿಸ್‌ ಆಡಿದ್ದರೆ ಹೆಚ್ಚಿನ ಯಶಸ್ಸು ಸಿಗುತ್ತಿತ್ತು ಎಂದು ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹೇಳಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ “ಅವಳ ಕಥೆ-ನನ್ನ ಕಥೆ’ ಉಪನ್ಯಾಸ ಸರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಸೈನಾ ನೆಹ್ವಾಲ್, ''ಬ್ಯಾಡ್ಮಿಂಟನ್​ ಆಡುವ ಬದಲು ಟೆನಿಸ್​ ಆಡುತ್ತಿದ್ದರೆ ಇನ್ನೂ ಹೆಚ್ಚಿನ ಯಶಸ್ಸು ಸಿಗುತ್ತಿತ್ತು.

ನನ್ನ ಪೋಷಕರು ಬ್ಯಾಡ್ಮಿಂಟನ್‌ಗೆ ಬದಲಾಗಿ ಟೆನಿಸ್‌ಗೆ ಸೇರಿಸುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೆಲವೊಮ್ಮೆ ನನಗೆ ಅನ್ನಿಸುತ್ತಿದೆ. ನಾನು ಬ್ಯಾಡ್ಮಿಂಟನ್​ ಬಿಟ್ಟು ಟೆನಿಸ್​ ಅಥವಾ ಕ್ರಿಕೆಟ್​ ಆಡುತ್ತಿದ್ದರೆ ನನ್ನ ಬಳಿ ಹೆಚ್ಚು ಹಣ ಮತ್ತು ಶಕ್ತಿ ಇರುತ್ತಿತ್ತು ಎಂದು ಹೇಳಿದ್ದಾರೆ.

ನಾನು ಯಾವುದಾದರೊಂದು ಟೂರ್ನಿಯಲ್ಲಿ ಸೋತರೆ ಸಾಕು ಎಲ್ಲ ಕಡೆಗಳಿಂದ ಟೀಕೆಗಳು ಬರುತ್ತದೆ. ಬ್ಯಾಡ್ಮಿಂಟನ್​ ಎನ್ನುವುದು ಅಷ್ಟು ಸುಲಭದ ಆಟವಲ್ಲ. ಇಲ್ಲಿ ಉಸಿರು ತೆಗೆಯಲು ಕೂಡ ಕಷ್ಟಪಡಬೇಕು. ಇದು ಬ್ಯಾಡ್ಮಿಂಟನ್​ ಆಡಿದವರಿಗೆ ಮಾತ್ರ ಇದರ ಕಷ್ಟ ಅರಿವಾಗುತ್ತದೆ. ನಾನು ಒಬ್ಬರ ಬಗ್ಗೆ ಟೀಕೆ ಮಾಡುವುದು ಸಲಭ. ಆದರೆ ಈ ಕಷ್ಟ ಏನೆಂಬುದು ಕ್ರೀಡಾಪಟುಗಳಿಗೆ ಮಾತ್ರ ತಿಳಿದಿರುತ್ತದೆ ಎಂದಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆರಂಭಿಸಿರುವ ಅವಳ ಕಥೆ-ನನ್ನ ಕಥೆ (ಹರ್‌ ಸ್ಟೋರಿ – ಮೈ ಸ್ಟೋರಿ) ಉಪ ನ್ಯಾಸ ಸರಣಿಯ ಸೈನಾ ಈ ಮಾತುಗಳನ್ನಾಡಿದ್ದಾರೆ. ಪದ್ಮ ಪ್ರಶಸ್ತಿ ಪುರಸ್ಕೃತ‌ ಎಲ್ಲ ಮಹಿಳಾ ಸಾಧಕರು ತಮ್ಮ ಕಥೆಗಳನ್ನು ಉಪನ್ಯಾಸದ ರೂಪದಲ್ಲಿ ಹೇಳಿಕೊಳ್ಳಲಿದ್ದಾರೆ. 2 ದಿನಗಳ ಹಿಂದಷ್ಟೇ ದ್ರೌಪದಿ ಮುರ್ಮು ಜತೆ ಸೈನಾ ಬ್ಯಾಡ್ಮಿಂಟನ್​ ಆಡಿದ ವಿಡಿಯೊ ವೈರಲ್​ ಆಗಿತ್ತು.

ಶಿವಶಂಕರಪ್ಪ ಹೇಳಿಕೆ ಖಂಡಿಸಿದ ಸೈನಾ

ನೆಹ್ವಾಲ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ “ಸಮಾಜದಲ್ಲಿ ಮಹಿಳೆ ಅಬಲೆ ಅಲ್ಲ ಸಬಲೆ. ಪುರುಷರಂತೆ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್​ ಅಭಿಯಾನವೊಂದನ್ನು ಆರಂಭಿಸಿತ್ತು. ಆದರೆ ಕರ್ನಾಟಕದ ಹಿರಿಯ ಕಾಂಗ್ರೆಸ್​ ನಾಯಕರೊಬ್ಬರು ಮಹಿಳೆಯರ ಬಗ್ಗೆ ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್​ನ ನಿಜವಾದ ಮನಸ್ಥಿಯನ್ನು ತೋರಿಸುತ್ತದೆ’ ಎಂದು ಶಿವಶಂಕರಪ್ಪ ಹೇಳಿಯನ್ನು ಖಂಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com