
ಪ್ಯಾರಿಸ್: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಭಾರತದ ಷಟ್ಲರ್ ಪಿವಿ ಸಿಂಧು ಭಾನುವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ನ ಗುಂಪು ಹಂತದ ಮೊದಲ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಫಾತಿಮತ್ ಅಬ್ದುಲ್ ರಜಾಕ್ ವಿರುದ್ಧ ನೇರ ಗೇಮ್‌ಗಳ ಗೆಲುವಿನೊಂದಿಗೆ ತಮ್ಮ ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನವನ್ನು ಆರಂಭಿಸಿದ್ದಾರೆ.
ಮೂರನೇ ಒಲಂಪಿಕ್ ಪದಕಕ್ಕಾಗಿ ಪೈಪೋಟಿ ನಡೆಸುತ್ತಿರುವ ಸಿಂಧು ಮೊದಲ ಗುಂಪಿನ ಎಂ ಪಂದ್ಯದಲ್ಲಿ ಕೇವಲ 29 ನಿಮಿಷದಲ್ಲಿ 21-9 21-6 ರಲ್ಲಿ ಅಂತರದಲ್ಲಿ ತನ್ನಗಿಂತಲೂ ಕೆಳ ಶ್ರೇಯಾಂಕದ ಎದುರಾಳಿಯನ್ನು ಸೋಲಿಸಿದರು.
ಪಂದ್ಯದ ಬಳಿಕ ಮಾತನಾಡಿದ ಪಿ.ವಿ. ಸಿಂಧು, ಇದು ಉತ್ತಮ ಆರಂಭವಾಗಿದ್ದು, ನನಗೆ ಸಂತೋಷವಾಗಿದೆ. ಮೈದಾನ ಮತ್ತು ವಾತಾವರಣಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಯಿತು. ಮೂರು ವರ್ಷಗಳ ನಂತರ ಮತ್ತೆ ಲಯಕ್ಕೆ ಮರಳಿರುವುದು ಬಹಳ ವಿಶೇಷವಾಗಿದೆ. 2016 (ಒಲಿಂಪಿಕ್ಸ್) ವಿಭಿನ್ನವಾಗಿತ್ತು ಮತ್ತು 2020 (2021) ಸಂಪೂರ್ಣವಾಗಿ ವಿಭಿನ್ನವಾಗಿತ್ತು, ಇದು ಎರಡರ ಮಿಶ್ರಣವಾಗಿದೆ ಎಂದು ಹೇಳಿದರು. ಸಿಂಧು ತಮ್ಮ ಎರಡನೇ ಗುಂಪಿನ ಎಂ ಪಂದ್ಯದಲ್ಲಿ ಬುಧವಾರ (ಜುಲೈ 31) ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ಅವರನ್ನು ಎದುರಿಸಲಿದ್ದಾರೆ.
Advertisement