
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ಜೋಡಿ ಇತಿಹಾಸ ಬರೆದಿದ್ದು, ಕ್ವಾರ್ಟರ್ ಫೈನಲ್ಗೇರುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎಂಬ ಕೀರ್ತಿಗೆ ಭಾಜನವಾಗಿದೆ.
ಹೌದು.. ಭಾರತದ ಪುರುಷರ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ (Paris Olympics 2024) ಕ್ವಾರ್ಟರ್ ಫೈನಲ್ಸ್ ತಲುಪಿದ್ದಾರೆ. ಈ ಮೂಲಕ ಅವರು ಒಲಿಂಪಿಕ್ಸ್ನಲ್ಲಿ ಎಂಟರ ಘಟ್ಟಕ್ಕೇರಿದ ಮೊದಲ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಾತ್ವಿಕ್-ಚಿರಾಗ್ ಜರ್ಮನಿಯ ಮಾರ್ಕ್ ಲ್ಯಾಮ್ಸ್ಫಸ್ ಮತ್ತು ಮಾರ್ವಿನ್ ಸೀಡೆಲ್ ಅವರನ್ನು ಎದುರಿಸಬೇಕಿತ್ತು, ಆದರೆ ಲ್ಯಾಮ್ಸ್ಫಸ್ ಅವರ ಗಾಯದಿಂದಾಗಿ ಜರ್ಮನ್ ಜೋಡಿ ಹಿಂದೆ ಸರಿದರು. ಹೀಗಾಗಿ ಭಾರತದ ಜೋಡಿ ಕ್ವಾರ್ಟರ್ ಫೈನಲ್ ಸ್ಥಾನ ಖಚಿತಪಡಿಸಿಕೊಂಡರು.
ಆ ಮೂಲಕ ಚಿರಾಗ್-ಸಾತ್ವಿಕ್ ಮತ್ತು ಅರ್ಡಿಯಾಂಟೊ-ಅಲ್ಫಿಯಾನ್ ಸಿ ಗುಂಪಿನ ಅಗ್ರ ಎರಡು ಸ್ಥಾನಗಳನ್ನು ಪಡೆಯುವುದು ಖಚಿತವಾಗಿದೆ. ಗುಂಪಿನ ಅಗ್ರ ಸ್ಥಾನಕ್ಕಾಗಿ ಭಾರತ ಮತ್ತು ಇಂಡೋನೇಷ್ಯಾ ಜೋಡಿಗಳು ಮಂಗಳವಾರ ಸ್ಪರ್ಧಿಸಲಿವೆ.
Advertisement