ಮಲೇಷ್ಯಾ ಮಾಸ್ಟರ್ಸ್ ಫೈನಲ್‌: ಚೀನಾ ಆಟಗಾರ್ತಿ ವಾಂಗ್ ಝಿಯಿ ವಿರುದ್ಧ ಸೋತ ಪಿ.ವಿ. ಸಿಂಧು

ಭಾನುವಾರ ನಡೆದ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್ ನಲ್ಲಿ ಭಾರತದ ಆಟಗಾರ್ತಿ ಪಿ. ವಿ. ಸಿಂಧು ಅವರು ಚೀನಾದ ವಾಂಗ್ ಝಿಯಿ ವಿರುದ್ಧ 21-16, 5-21 ಮತ್ತು 21-16 ಸೆಟ್ ಗಳಿಂದ ಸೋತು ನಿರ್ಗಮಿಸಿದರು.
ಪಿ.ವಿ. ಸಿಂಧು
ಪಿ.ವಿ. ಸಿಂಧು
Updated on

ಕ್ವಾಲಾಲಂಪುರ: ಭಾನುವಾರ ನಡೆದ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್ ನಲ್ಲಿ ಭಾರತದ ಆಟಗಾರ್ತಿ ಪಿ. ವಿ. ಸಿಂಧು ಅವರು ಚೀನಾದ ವಾಂಗ್ ಝಿಯಿ ವಿರುದ್ಧ 21-16, 5-21 ಮತ್ತು 21-16 ಸೆಟ್ ಗಳಿಂದ ಸೋತು ನಿರ್ಗಮಿಸಿದರು. ಈ ಮೂಲಕ 2022 ಸಿಂಗಾಪುರ ಓಪನ್ ನಂತರ ತಮ್ಮ ಮೊದಲ BWF ಪ್ರಶಸ್ತಿ ಗೆಲ್ಲುವ ಪ್ರಯತ್ನದಲ್ಲಿ ವಿಫಲರಾದರು.

ಪಿ.ವಿ. ಸಿಂಧು
ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‍ಶಿಪ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು

ಇದು ಏಪ್ರಿಲ್ 2023ರಲ್ಲಿ ನಡೆದ ಮ್ಯಾಡ್ರಿಡ್ ಮಾಸ್ಟರ್ಸ್ ನಂತರ BWF ಫೈನಲ್‌ನಲ್ಲಿ ಸಿಂಧು ಅವರ ಮೊದಲ ಪ್ರದರ್ಶನವಾಗಿತ್ತು. ಈ ಫೆಬ್ರವರಿಯಲ್ಲಿ ಗಾಯದಿಂದ ಮರಳಿದ ನಂತರ ಆಡಿದ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.

ಮೊದಲ ಸೆಟ್ ನಲ್ಲಿ 21-16 ರ ಮೂಲಕ ಗೆಲುವು ಸಾಧಿಸಿದ ನಂತರ ಉತ್ತಮ ಆರಂಭ ಮಾಡಿದ್ದರು. ಎರಡನೇ ಸೆಟ್ ನಲ್ಲಿ ಚೀನಾದ ಆಟಗಾರ್ತಿ ಕಮ್ ಬ್ಯಾಕ್ ಮಾಡಿದರು. ಬಳಿಕ ಮೂರನೇ ಸೆಟ್ ನಲ್ಲೂ ಸಿಂಧುಗೆ ಅವಕಾಶ ನೀಡದೆ 21-16 ಸೆಟ್ ಗಳಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com