2036 Olympics: ಒಲಿಂಪಿಕ್ಸ್​ ಆತಿಥ್ಯ ಕೋರಿ IOC ಗೆ ಭಾರತ ಪತ್ರ

ಅಕ್ಟೋಬರ್ 1ರಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಭವಿಷ್ಯದ ಆತಿಥ್ಯ ಆಯೋಗಕ್ಕೆ ಔಪಚಾರಿಕವಾಗಿ ಪತ್ರ ಬರೆದಿದ್ದು, 2036 ರಲ್ಲಿ ಭಾರತದಲ್ಲಿ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವು ಮಹತ್ವದ ಹೆಜ್ಜೆಯಾಗಿದೆ.
India formally submits ‘Letter of Intent’ to IOC
ಒಲಿಂಪಿಕ್ಸ್​ ಆತಿಥ್ಯ ಕೋರಿ IOCಗೆ ಭಾರತ ಪತ್ರ
Updated on

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ 2036ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸಲು ಆಸಕ್ತಿಯನ್ನು ವ್ಯಕ್ತಪಡಿಸಿ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಗೆ ಪತ್ರ ಬರೆದಿದೆ.

ಅಕ್ಟೋಬರ್ 1ರಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಭವಿಷ್ಯದ ಆತಿಥ್ಯ ಆಯೋಗಕ್ಕೆ ಔಪಚಾರಿಕವಾಗಿ ಪತ್ರ ಬರೆದಿದ್ದು, 2036 ರಲ್ಲಿ ಭಾರತದಲ್ಲಿ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದೆ ಎಂದು ಮೂಲಗಳು ಹೇಳಿವೆ.

2036ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸಲು ಆಸಕ್ತಿ ತೋರಿದ 10 ದೇಶಗಳಲ್ಲಿ ಭಾರತವೂ ಸೇರಿದೆ. ನವೆಂಬರ್ 2022 ರಲ್ಲಿ, ಐಒಸಿ ಭಾರತ ಸೇರಿದಂತೆ ಈ ದೇಶಗಳೊಂದಿಗೆ ಚರ್ಚೆಗಳನ್ನು ಪ್ರಾರಂಭಿಸಿದೆ.

ಮೆಕ್ಸಿಕೊ (ಮೆಕ್ಸಿಕೊ ನಗರ, ಗ್ವಾಡಲಜರ-ಮಾಂಟೆರಿ-ಟಿಜುವಾನಾ), ಇಂಡೋನೇಷ್ಯಾ (ನುಸಂತರಾ), ಟರ್ಕಿ (ಇಸ್ತಾಂಬುಲ್), ಭಾರತ (ಅಹ್ಮದಾಬಾದ್), ಪೋಲೆಂಡ್ (ವಾರ್ಸಾ, ಕ್ರಾಕೊವ್), ಈಜಿಪ್ಟ್ (ಹೊಸ ಆಡಳಿತ ರಾಜಧಾನಿ) ಮತ್ತು ದಕ್ಷಿಣ ಕೊರಿಯಾ (ಸಿಯೋಲ್-ಇಂಚಿಯಾನ್) 2036 ರ ಕ್ರೀಡಾಕೂಟದ ಆತಿಥ್ಯ ವಹಿಸಲು ಆರಂಭಿಕ ಆಸಕ್ತಿಯನ್ನು ತೋರಿಸಿದ ಇತರೆ 10 ದೇಶಗಳಾಗಿವೆ.

ಒಲಿಂಪಿಕ್ಸ್ ಆತಿಥ್ಯಕ್ಕೆ ಪ್ರಧಾನಿ ಮೋದಿ ಇಂಗಿತ

ಇನ್ನು 2036ರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸುವ ಭಾರತದ ಆಸಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅನೇಕ ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ. ನವದೆಹಲಿಯ ತಮ್ಮ ನಿವಾಸದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, 2036 ರಲ್ಲಿ ಒಲಿಂಪಕ್ಸ್​ ಕ್ರೀಡಾಕೂಟವನ್ನು ಆಯೋಜಿಸುವ ಸಿದ್ಧತೆಗಳಿಗೆ ಸಲಹೆಗಳನ್ನು ನೀಡುವಂತೆ ಅವರಿಗೆ ಕೇಳಿಕೊಂಡಿದ್ದರು.

ಕಳೆದ ವರ್ಷ ಮುಂಬೈನಲ್ಲಿ ನಡೆದ 141 ನೇ ಐಒಸಿ ಅಧಿವೇಶನದಲ್ಲಿ, ಪಿಎಂ ಮೋದಿ 2036 ರಲ್ಲಿ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸುವ ಭಾರತದ ಆಸಕ್ತಿಯನ್ನು ದೃಢಪಡಿಸಿದ್ದರು. 140 ಕೋಟಿ ಭಾರತೀಯರು ಕ್ರೀಡಾಕೂಟವನ್ನು ನಡೆಸಲು ಉತ್ಸುಕರಾಗಿದ್ದಾರೆ ಎಂದು ಆಗ ಅವರು ಹೇಳಿದ್ದರು. "ಈ ಸ್ಮರಣೀಯ ಅವಕಾಶವು ದೇಶಕ್ಕೆ ಗಣನೀಯ ಪ್ರಯೋಜನಗಳನ್ನು ಒದಗಿಸಬಹುದು. ದೇಶಾದ್ಯಂತ ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ ಮತ್ತು ಯುವ ಸಬಲೀಕರಣವನ್ನು ಈ ಕ್ರೀಡಾಕೂಟವು ಉತ್ತೇಜಿಸಬಹುದು ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದರು.

India formally submits ‘Letter of Intent’ to IOC
Olympics 2024 ಮಹಿಳಾ ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದಿದ್ದ Imane Khelif ಹೆಣ್ಣಲ್ಲ.. ಗಂಡು!: ವೈದ್ಯಕೀಯ ವರದಿ ಸೋರಿಕೆ!

2036ರಲ್ಲಿ ಭಾರತದ ನೆಲದಲ್ಲಿ ಒಲಿಂಪಿಕ್ಸ್ ಆಯೋಜಿಸುವ ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ. ಇದು 140 ಕೋಟಿ ಭಾರತೀಯರ ಹಳೆಯ ಕನಸು ಮತ್ತು ಆಕಾಂಕ್ಷೆಯಾಗಿದೆ. ಈ ಕನಸನ್ನು ನಿಮ್ಮ ಸಹಕಾರ ಮತ್ತು ಬೆಂಬಲದೊಂದಿಗೆ ಸಾಕಾರಗೊಳಿಸಬೇಕಿದೆ. ನೀವೆಲ್ಲರೂ ಅನೇಕ ವಿಷಯಗಳನ್ನು ಗಮನಿಸಿರುತ್ತೀರಿ ಮತ್ತು ಸಾಕಷ್ಟು ವಿಷಯಗಳು ನಿಮ್ಮ ಅನುಭವಕ್ಕೆ ಬಂದಿರುತ್ತವೆ. ನೀವು ಈ ಎಲ್ಲ ಮಾಹಿತಿಗಳನ್ನು ದಾಖಲಿಸಿ, ಸರ್ಕಾರಕ್ಕೆ ನೀಡಿ ಎಂದು ಕೇಳಿಕೊಳ್ಳುತ್ತಿದ್ದೇವೆ. ಇದರಿಂದ ಯಾವುದೇ ಕುಂದು ಕೊರತೆಗಳಾಗದಂತೆ 2036 ರ ಒಲಿಂಪಿಕ್ಸ್​ಗೆ ನಾವು ಸಿದ್ಧತೆ ಮಾಡಿಕೊಳ್ಳಬಹುದು" ಎಂದು ಮೋದಿ ಕ್ರೀಡಾಪಟುಗಳಿಗೆ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com