'ನನ್ನ ದೇಶಭಕ್ತಿಯ ಬಗ್ಗೆ ಪ್ರಶ್ನೆ?': Pak ಅರ್ಷದ್ ನದೀಮ್ ಬೆಂಗಳೂರಿಗೆ ಆಹ್ವಾನಿಸಿದ್ದ ನೀರಜ್ ಚೋಪ್ರಾ ವಿರುದ್ಧ ಭುಗಿಲೆದ್ದ ಆಕ್ರೋಶ!

ನೀರಜ್ ನಾನು ಸಾಮಾನ್ಯವಾಗಿ ಕಡಿಮೆ ಮಾತನಾಡುವ ವ್ಯಕ್ತಿ, ಆದರೆ ಏನಾದರೂ ತಪ್ಪು ಕಂಡಾಗ, ವಿಶೇಷವಾಗಿ ದೇಶದ ಮೇಲಿನ ನನ್ನ ಪ್ರೀತಿ ಮತ್ತು ನನ್ನ ಕುಟುಂಬದ ಗೌರವವನ್ನು ಪ್ರಶ್ನಿಸಿದಾಗ ನಾನು ಮೌನವಾಗಿರುತ್ತೇನೆ ಎಂದು ಅರ್ಥವಲ್ಲ ಎಂದು ಹೇಳಿದ್ದಾರೆ.
ನೀರಜ್ ಚೋಪ್ರಾ-ಅರ್ಷದ್ ನದೀಮ್
ನೀರಜ್ ಚೋಪ್ರಾ-ಅರ್ಷದ್ ನದೀಮ್
Updated on

ಬೆಂಗಳೂರು: ಭಾರತಕ್ಕೆ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದುಕೊಟ್ಟಿರುವ ನೀರಜ್ ಚೋಪ್ರಾ ಅವರು, ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಅವರಿಗೆ NC ಕ್ಲಾಸಿಕ್ ಈವೆಂಟ್‌ಗೆ ಆಹ್ವಾನ ನೀಡಿದ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಬಹಳ ಹಿಂದೆಯೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಷದ್‌ಗೆ ಆಹ್ವಾನ ಕಳುಹಿಸಲಾಗಿತ್ತು ಎಂದು ನೀರಜ್ ಹೇಳಿದರು.

ಈ ವಿಷಯವಾಗಿ ತಾನು ಮತ್ತು ತನ್ನ ಕುಟುಂಬವು ಸಾಕಷ್ಟು ಟೀಕೆಗಳನ್ನು ಎದುರಿಸಿದೆ ಎಂದು ನೀರಜ್ ಬಹಿರಂಗಪಡಿಸಿದರು. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಅರ್ಷದ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಈಗ ಸಂಪೂರ್ಣವಾಗಿ ಅಸಾಧ್ಯವಾಗಿದೆ ಎಂದು ಅವರು ಹೇಳಿದರು. ತಮ್ಮ ಇನ್‌ಸ್ಟಾ ಪೋಸ್ಟ್‌ನಲ್ಲಿ, ನೀರಜ್ ನಾನು ಸಾಮಾನ್ಯವಾಗಿ ಕಡಿಮೆ ಮಾತನಾಡುವ ವ್ಯಕ್ತಿ, ಆದರೆ ಏನಾದರೂ ತಪ್ಪು ಕಂಡಾಗ, ವಿಶೇಷವಾಗಿ ದೇಶದ ಮೇಲಿನ ನನ್ನ ಪ್ರೀತಿ ಮತ್ತು ನನ್ನ ಕುಟುಂಬದ ಗೌರವವನ್ನು ಪ್ರಶ್ನಿಸಿದಾಗ ನಾನು ಮೌನವಾಗಿರುತ್ತೇನೆ ಎಂದು ಅರ್ಥವಲ್ಲ ಎಂದು ಹೇಳಿದ್ದಾರೆ. ಅರ್ಷದ್ ನದೀಮ್ ಅವರನ್ನು ನೀರಜ್ ಚೋಪ್ರಾ ಕ್ಲಾಸಿಕ್‌ಗೆ ಆಹ್ವಾನಿಸಿದ್ದಕ್ಕಾಗಿ ತಾನು ಸಾಕಷ್ಟು ದ್ವೇಷ ಮತ್ತು ನಿಂದನೆಗಳಿಗೆ ಗುರಿಯಾಗಿದ್ದಾಗಿ ತಮ್ಮ ಕುಟುಂಬವನ್ನು ತಪ್ಪಾಗಿ ವಿವಾದಕ್ಕೆ ಎಳೆದು ತರಲಾಗಿದೆ ಎಂದು ನೀರಜ್ ಗಮನಸೆಳೆದರು.

ಈ ವಾರದ ಆರಂಭದಲ್ಲಿ ನೀರಜ್ ಚೋಪ್ರಾ ಪತ್ರಿಕಾಗೋಷ್ಠಿಯಲ್ಲಿ ಎನ್‌ಸಿ ಕ್ಲಾಸಿಕ್ ಈವೆಂಟ್‌ನಲ್ಲಿ ಭಾಗವಹಿಸುವ ಆಟಗಾರರ ಪ್ರಾಥಮಿಕ ಪಟ್ಟಿಯನ್ನು ಬಿಡುಗಡೆ ಮಾಡಿದರು. ಈಗ ಅದು ಹರಿಯಾಣದ ಬದಲು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿಸಿದರು. ಇದರಲ್ಲಿ ಅರ್ಷದ್ ನದೀಮ್ ಸೇರಿದಂತೆ ಅನೇಕ ಉನ್ನತ ಜಾವೆಲಿನ್ ಎಸೆತಗಾರರನ್ನು ಆಹ್ವಾನಿಸಲಾಗಿದೆ ಎಂದು ಅವರು ಹೇಳಿದ್ದರು. ಆದಾಗ್ಯೂ, ಮೇ 24ರಂದು ಬೆಂಗಳೂರಿನಲ್ಲಿ ನಡೆಯಲಿರುವ NC ಕ್ಲಾಸಿಕ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾಗವಹಿಸಲು ನೀರಜ್ ಚೋಪ್ರಾ ಅವರ ಆಹ್ವಾನವನ್ನು ಅರ್ಷದ್ ನದೀಮ್ ನಂತರ ನಿರಾಕರಿಸಿದರು.

ಈ ಸಂಪೂರ್ಣ ವಿಷಯದ ಬಗ್ಗೆ ಸ್ಪಷ್ಟೀಕರಣ ನೀಡುವಾಗ, ನೀರಜ್ ಅವರು ನನ್ನ ಕುಟುಂಬವನ್ನು ಸಹ ಬಿಡಲಿಲ್ಲ ಎಂದು ಬರೆದಿದ್ದಾರೆ. ನಾನು ಅರ್ಷದ್‌ಗೆ ನೀಡಿದ ಆಹ್ವಾನವು ಒಬ್ಬ ಕ್ರೀಡಾಪಟುವಿನಿಂದ ಇನ್ನೊಬ್ಬ ಕ್ರೀಡಾಪಟುವಿಗೆ ಬಂದಿತ್ತು. ಹೆಚ್ಚೇನೂ ಅಲ್ಲ, ಕಡಿಮೆಯೂ ಅಲ್ಲ. NC ಕ್ಲಾಸಿಕ್‌ನ ಉದ್ದೇಶ ಭಾರತಕ್ಕೆ ಅತ್ಯುತ್ತಮ ಕ್ರೀಡಾಪಟುಗಳನ್ನು ಕರೆತರುವುದು ಮತ್ತು ನಮ್ಮ ದೇಶವನ್ನು ವಿಶ್ವ ದರ್ಜೆಯ ಕ್ರೀಡಾಕೂಟಗಳ ಕೇಂದ್ರವನ್ನಾಗಿ ಮಾಡುವುದು. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಎರಡು ದಿನಗಳ ಮೊದಲು ಸೋಮವಾರ ಆಹ್ವಾನಗಳನ್ನು ಕಳುಹಿಸಲಾಗಿತ್ತು. ಕಳೆದ 48 ಗಂಟೆಗಳಲ್ಲಿ ನಡೆದ ಎಲ್ಲದರ ನಂತರ, ಅರ್ಷದ್ NC ಕ್ಲಾಸಿಕ್‌ನಲ್ಲಿ ಕಾಣಿಸಿಕೊಳ್ಳುವುದು ಸಂಪೂರ್ಣವಾಗಿ ಅಸಾಧ್ಯ.

ನೀರಜ್ ಚೋಪ್ರಾ-ಅರ್ಷದ್ ನದೀಮ್
ಪತಿ ಕೊಲ್ಲಲು ಪತ್ನಿ ಪ್ಲಾನ್: ಪಹಲ್ಗಾಮ್ ದಾಳಿಯಲ್ಲಿ ಹತ್ಯೆಯಾದ ಮೃತನ ಪತ್ನಿಯ ಬಗ್ಗೆ ಒಸಾಫ್ ಖಾನ್‌ ಆಕ್ಷೇಪಾರ್ಹ ಕಮೆಂಟ್!

ನಾನು ವರ್ಷಗಳಲ್ಲಿ ನನ್ನ ದೇಶಕ್ಕೆ ಹೆಮ್ಮೆ ತಂದಿದ್ದೇನೆ. ನನ್ನ ಸಮಗ್ರತೆಯನ್ನು ಪ್ರಶ್ನಿಸಲಾಗುತ್ತಿದೆ ಎಂದು ನೋಡಲು ದುಃಖವಾಗುತ್ತದೆ ಎಂದು ನೀರಜ್ ಬರೆದಿದ್ದಾರೆ. ಯಾವುದೇ ಕಾರಣವಿಲ್ಲದೆ ನನ್ನನ್ನು ಮತ್ತು ನನ್ನ ಕುಟುಂಬವನ್ನು ಗುರಿಯಾಗಿಸಿಕೊಂಡಿರುವ ಜನರಿಗೆ ನಾನು ನನ್ನ ಬಗ್ಗೆ ವಿವರಿಸಬೇಕಾಗಿರುವುದು ನನಗೆ ಬೇಸರ ತಂದಿದೆ. ನಾವು ಸರಳ ಜನರು ಮತ್ತು ದಯವಿಟ್ಟು ನಮ್ಮನ್ನು ಬೇರೆ ರೀತಿಯಲ್ಲಿ ಚಿತ್ರಿಸಬೇಡಿ. ಮಾಧ್ಯಮದ ಕೆಲವು ವಿಭಾಗಗಳು ಬಹಳಷ್ಟು ಸುಳ್ಳು ಕಥೆಗಳನ್ನು ಹರಡಿವೆ ಮತ್ತು ನಾನು ಪ್ರತಿಕ್ರಿಯಿಸುವುದಿಲ್ಲ ಎಂಬ ಕಾರಣಕ್ಕೆ ಅವು ನಿಜವೆಂದು ಅರ್ಥವಲ್ಲ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com