ಸಾಂದರ್ಭಿಕ ಚಿತ್ರ
ಕ್ರೀಡೆ
ಹಿಮಪಾತದ ಕೊರತೆಯಿಂದ 2025 ರ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಮುಂದೂಡಿಕೆ
ಅಸಮರ್ಪಕ ಹಿಮಪಾತದಿಂದಾಗಿ ಸತತ ಎರಡನೇ ವರ್ಷವೂ ಕ್ರೀಡಾಕೂಟದ ವೇಳಾಪಟ್ಟಿ ಬದಲಾವಣೆಯಾಗುತ್ತಿದೆ.
ಶ್ರೀನಗರ: ಫೆಬ್ರವರಿ 22 ರಿಂದ 25 ರವರೆಗೆ ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಸ್ಕೀ ರೆಸಾರ್ಟ್‌ನಲ್ಲಿ ನಡೆಯಬೇಕಿದ್ದ 5ನೇ ಆವೃತ್ತಿಯ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಅನ್ನು ಹಿಮಪಾತದ ಕೊರತೆಯಿಂದ ಮುಂದೂಡಲಾಗಿದೆ.
ಹಿಮದ ಪರಿಸ್ಥಿತಿ ಸುಧಾರಿಸಿದ ನಂತರ ಹೊಸ ಮೌಲ್ಯಮಾಪನ ನಡೆಸಲಾಗುವುದು ಮತ್ತು ಅದಕ್ಕೆ ಅನುಗುಣವಾಗಿ ಪರಿಷ್ಕೃತ ವೇಳಾಪಟ್ಟಿಯನ್ನು ಘೋಷಿಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಯುವ ಸೇವೆಗಳು ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಸಮರ್ಪಕ ಹಿಮಪಾತದಿಂದಾಗಿ ಸತತ ಎರಡನೇ ವರ್ಷವೂ ಕ್ರೀಡಾಕೂಟದ ವೇಳಾಪಟ್ಟಿ ಬದಲಾವಣೆಯಾಗುತ್ತಿದೆ. ಕಳೆದ ವರ್ಷ ಸಹ ಶುಷ್ಕ ಜನವರಿಯ ನಂತರ ಕ್ರೀಡಾಕೂಟವನ್ನು ಫೆಬ್ರವರಿಗೆ ಮುಂದೂಡಲಾಗಿತ್ತು.
ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2025 ರ ಮೊದಲ ಹಂತವು ಜನವರಿ 23 ರಿಂದ 27 ರವರೆಗೆ ಲಡಾಖ್‌ನಲ್ಲಿ ನಡೆಯಿತು. ಇದರಲ್ಲಿ ಐಸ್ ಹಾಕಿ ಮತ್ತು ಐಸ್ ಸ್ಕೇಟಿಂಗ್‌ನಂತಹ ಐಸ್ ಕ್ರೀಡೆಗಳು ಸೇರಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ