Kho-Kho World Cup 2025; ಮಹಿಳಾ ಹಾಕಿ ತಂಡದ ಬೆನ್ನಲ್ಲೆ, ಚೊಚ್ಚಲ ವಿಶ್ವಕಪ್ ಗೆದ್ದ ಪುರುಷರ ತಂಡ!

ಪಂದ್ಯ ಆರಂಭವಾದ 4 ನಿಮಿಷಗಳಲ್ಲಿ ಭಾರತ 10 ಅಂಕಗಳನ್ನು ಗಳಿಸಿತು. ಕೊನೆಯ ಸರತಿಯ ವೇಳೆಗೆ ಸ್ಕೋರ್ 26-0 ಮೂಲಕ ಭಾರತ ಮುನ್ನಡೆ ಸಾಧಿಸಿತು
Kho-Kho World Cup 2025
ಖೋ-ಖೋ ವಿಶ್ವಕಪ್ 2025online desk
Updated on

ನವದೆಹಲಿ: Kho-Kho World Cup 2025 ನಲ್ಲಿ ಪುರುಷರ ತಂಡ ನೇಪಾಳ ತಂಡವನ್ನು ಮಣಿಸಿ ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡಿದೆ.

ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ನೇಪಾಳದ ವಿರುದ್ಧ 54-36 ಅಂತರದ ಗೆಲುವು ಸಾಧಿಸಿದ್ದು, ಪ್ರತೀಕ್ ವೈಕರ್ ಹಾಗೂ ರಾಮ್ ಜಿ ಕಶ್ಯಪ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಪಂದ್ಯ ಆರಂಭವಾದ 4 ನಿಮಿಷಗಳಲ್ಲಿ ಭಾರತ 10 ಅಂಕಗಳನ್ನು ಗಳಿಸಿತು. ಕೊನೆಯ ಸರತಿಯ ವೇಳೆಗೆ ಸ್ಕೋರ್ 26-0 ಮೂಲಕ ಭಾರತ ಮುನ್ನಡೆ ಸಾಧಿಸಿತು

ಚೊಚ್ಚಲ ಖೋ-ಖೋ ವಿಶ್ವಕಪ್‌ ಪಂದ್ಯ ವೀಕ್ಷಿಸಲು ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್, ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಪಂಕಜ್ ಮಿತ್ತಲ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಅನೇಕ ಗಣ್ಯರು ನೆರೆದಿದ್ದರು.

Kho-Kho World Cup 2025
Kho-Kho World Cup 2025: ಭಾರತ ಮೈಲಿಗಲ್ಲು; ನೇಪಾಳವನ್ನು ಸೋಲಿಸಿ ಮೊದಲ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಮಹಿಳಾ ಪಡೆ!

ಈ ವಿಶ್ವಕಪ್ ಟೂರ್ನಿ ಆಯೋಜನೆಯ ಮೂಲಕ ಭಾರತದ ಸಾಂಪ್ರದಾಯಿಕ ಕ್ರೀಡೆಯಾಗಿ ಗುರುತಿಸಿಕೊಂಡಿದ್ದ ಖೋ-ಖೋ ಕ್ರೀಡೆ ಈಗ ಜಾಗತಿಕವಾಗಿ ಗಮನ ಸೆಳೆದಿದ್ದು, ಒಲಂಪಿಕ್ ಕ್ರೀಡೆಯಾಗುವ ಹಾದಿಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com