ದುರ್ವಿಧಿ: ತಾನೇ ರಕ್ಷಿಸಿದ್ದ ನಾಯಿ ಕಚ್ಚಿ ಕಬಡ್ಡಿ ಆಟಗಾರ Brijesh Solanki ಸಾವು; ಕೊನೆಯ ದಿನಗಳಲ್ಲಿ ನರಳಿ ನರಳಿ ಯಾತನೆ, Video!

ಉತ್ತರ ಪ್ರದೇಶದ ಆಟಗಾರನೊಬ್ಬ ನಾಯಿ ಕಡಿತದಿಂದ 'ರೇಬೀಸ್' ಗೆ ತುತ್ತಾಗಿ ಸಾವನ್ನಪ್ಪಿದ್ದಾನೆ. ಆಟಗಾರನ ನಿರ್ಲಕ್ಷ್ಯದಿಂದಾಗಿ ರೇಬೀಸ್ ಲಸಿಕೆ ಪಡೆಯಲಿಲ್ಲ. ಹೀಗಾಗಿ ಸಾವಿನ ಮನೆಯ ಕದ ತಟ್ಟಿದ್ದಾರೆ.
Brijesh Solanki
ಬ್ರಿಜೇಶ್ ಸೋಲಂಕಿ
Updated on

ಉತ್ತರ ಪ್ರದೇಶದ ಆಟಗಾರನೊಬ್ಬ ನಾಯಿ ಕಡಿತದಿಂದ 'ರೇಬೀಸ್' ಗೆ ತುತ್ತಾಗಿ ಸಾವನ್ನಪ್ಪಿದ್ದಾನೆ. ಆಟಗಾರನ ನಿರ್ಲಕ್ಷ್ಯದಿಂದಾಗಿ ರೇಬೀಸ್ ಲಸಿಕೆ ಪಡೆಯಲಿಲ್ಲ. ಮೂರು ತಿಂಗಳ ಹಿಂದೆ, ನಾಯಿಯೊಂದು ಆಟಗಾರನಿಗೆ ಕಚ್ಚಿತ್ತು. ನಾಯಿ ಕಡಿತವನ್ನು ಸಣ್ಣ ಗಾಯವೆಂದು ಪರಿಗಣಿಸಿ ಬ್ರಿಜೇಶ್ ಸೋಲಂಕಿ ನಿರ್ಲಕ್ಷಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಬ್ರಿಜೇಶ್ ಅವರ ವೀಡಿಯೊ ಕೂಡ ಕಾಣಿಸಿಕೊಂಡಿದ್ದು, ಅದರಲ್ಲಿ ಅವರು ರೇಬೀಸ್ ರೋಗದಿಂದ ನರಳುತ್ತಿರುವುದು ಕಂಡುಬಂದಿದೆ.

ಕಬಡ್ಡಿ ಆಟಗಾರನ ತರಬೇತುದಾರ ಪ್ರವೀಣ್ ಕುಮಾರ್, ನಾಯಿ ಕಚ್ಚಿದ್ದನ್ನು ಬ್ರಿಜೇಶ್ ಸಾಮಾನ್ಯ ಗಾಯವೆಂದು ಪರಿಗಣಿಸಿದ್ದರು. ಕಚ್ಚಿದ ಗಾಯವು ಚಿಕ್ಕದಾಗಿತ್ತು. ಹೀಗಾಗಿ ಅದನ್ನು ಗಂಭೀರವಾಗಿ ಭಾವಿಸಲಿಲ್ಲ. ಅದಕ್ಕಾಗಿಯೇ ಅವರು ಲಸಿಕೆ ಪಡೆಯಲಿಲ್ಲ. ಆದರೆ ಜೂನ್ 26ರಂದು ಕಬಡ್ಡಿ ಅಭ್ಯಾಸದ ಸಮಯದಲ್ಲಿ ಬ್ರಿಜೇಶ್ ಮರಗಟ್ಟುವಿಕೆ ಬಗ್ಗೆ ದೂರು ನೀಡಿದ್ದರು. ಇದಾದ ನಂತರ, ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರ ಸ್ಥಿತಿ ಹದಗೆಟ್ಟಾಗ, ಅವರನ್ನು ನೋಯ್ಡಾದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು.

ಬ್ರಿಜೇಶ್ ಇದ್ದಕ್ಕಿದ್ದಂತೆ ನೀರನ್ನು ನೋಡಿ ಹೆದರಲು ಪ್ರಾರಂಭಿಸಿದರು. ಕ್ರಮೇಣ ಅವರಲ್ಲಿ ರೇಬೀಸ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿತ್ತು ಎಂದು ಬ್ರಿಜೇಶ್ ಅವರ ಸಹೋದರ ಸಂದೀಪ್ ಕುಮಾರ್ ತಿಳಿಸಿದ್ದಾರೆ. ಇದ್ದಕ್ಕಿದ್ದಂತೆ ಅವರು ನೀರನ್ನು ನೋಡಿ ಹೆದರಲು ಪ್ರಾರಂಭಿಸಿದರು. ದೆಹಲಿ ಸೇರಿದಂತೆ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಸಿಕ್ಕಿಲ್ಲ ಎಂದು ಆಟಗಾರನ ಸಹೋದರ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com