FIDE ಮಹಿಳಾ ಚೆಸ್ ವಿಶ್ವಕಪ್ 2025: ಭಾರತದ ಕೊನೇರು ಹಂಪಿ, ದಿವ್ಯಾ ದೇಶ್ ಮುಖ್ ಫೈನಲ್ ಪ್ರವೇಶ!

ಗುರುವಾರ ನಡೆದ ಟೈಬ್ರೇಕ್‌ನಲ್ಲಿ ಚೀನಾದ ಲೀ ಟಿಂಗ್ಜಿ ಅವರನ್ನು ಕೊನೇರು ಹಂಪಿ ಸೋಲಿಸಿದ್ದರೆ, ದಿವ್ಯಾ ದೇಶ್ ಮುಖ್ ಅವರು, ಚೀನಾದ ಮತ್ತೋರ್ವ ಪ್ರಬಲ ಎದುರಾಳಿ ತಾನ್ ಝೊಂಗಿ ಅವರನ್ನು ದಂಗುಬಡಿಸಿ ಚೊಚ್ಚಲ ಬಾರಿಗೆ ವಿಶ್ವ ಕಪ್ ಫೈನಲ್ ಪ್ರವೇಶಿಸಿದರು.
Divya Deshmukh , Koneru Humpy
ದಿವ್ಯಾ ದೇಶಮುಖ್, ಕೊನೇರು ಹಂಪಿ
Updated on

ನವದೆಹಲಿ: ಜಾರ್ಜಿಯಾದ ಬಟುಮಿಯಲ್ಲಿ ನಡೆದ 2025 ರ FIDE ಮಹಿಳಾ ಚೆಸ್ ವಿಶ್ವಕಪ್ ನ ಸೆಮಿ ಫೈನಲ್ ನಲ್ಲಿ ಅದ್ಬುತ ಪ್ರದರ್ಶನದೊಂದಿಗೆ ಗೆಲುವು ಸಾಧಿಸಿದ ಭಾರತದ ಕೊನೇರು ಹಂಪಿ ಮತ್ತು ದಿವ್ಯಾ ದೇಶಮುಖ್ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತದ ಐತಿಹಾಸಿಕ ಗೆಲುವು ಖಚಿತವಾಗಿದೆ.

ಗುರುವಾರ ನಡೆದ ಟೈಬ್ರೇಕ್‌ನಲ್ಲಿ ಚೀನಾದ ಲೀ ಟಿಂಗ್ಜಿ ಅವರನ್ನು ಕೊನೇರು ಹಂಪಿ ಸೋಲಿಸಿದ್ದರೆ, ದಿವ್ಯಾ ದೇಶ್ ಮುಖ್ ಅವರು, ಚೀನಾದ ಮತ್ತೋರ್ವ ಪ್ರಬಲ ಎದುರಾಳಿ ತಾನ್ ಝೊಂಗಿ ಅವರನ್ನು ದಂಗುಬಡಿಸಿ ಚೊಚ್ಚಲ ಬಾರಿಗೆ ವಿಶ್ವ ಕಪ್ ಫೈನಲ್ ಪ್ರವೇಶಿಸಿದರು.

ಶನಿವಾರ ಫೈನಲ್ ಕದನ ನಡೆಯಲಿದ್ದು, ಜಾಗತಿಕ ಮಟ್ಟದಲ್ಲಿ ಭಾರತೀಯ ಚೆಸ್‌ಗೆ ಒಂದು ಮೈಲಿಗಲ್ಲು ಸೃಷ್ಟಿಸುವ ಕ್ಷಣವಾಗಲಿದೆ.

ಮಾಜಿ ವಿಶ್ವದ ನಂಬರ್ 2 ಕೊನೇರು ಹಂಪಿ ಮತ್ತೊಂದು ಪ್ರತಿಷ್ಟಿತ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದರೆ, ಉದಯೋನ್ಮುಖ ಆಟಗಾರ್ತಿ ದಿವ್ಯಾ ದೇಶಮುಖ್ ವೃತ್ತಿಜೀವನದ ನಿರ್ಣಾಯಕ ಗೆಲುವಿನೊಂದಿಗೆ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಎದುರು ನೋಡುತ್ತಿದ್ದಾರೆ

Divya Deshmukh , Koneru Humpy
FIDE 2024: ಎರಡನೇ ಬಾರಿ ರಾಪಿಡ್ ಚೆಸ್ ವಿಶ್ವ ಚಾಂಪಿಯನ್ ಆದ ಕೊನೆರು ಹಂಪಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com